ಕೊಚ್ಚಿ: ಐಎನ್‌ಎಸ್ ವಿಕ್ರಾಂತ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಾವಿಕನ ಮೃತದೇಹ ಪತ್ತೆ

|

Updated on: Jul 27, 2023 | 4:20 PM

ಈ ನಾವಿಕ ಬಿಹಾರದ ಮುಜಾಫರ್‌ಪುರದ ಮೂಲದವರು. ಇವರು ಸಾಮಾನ್ಯ ಕೇಡರ್ ಆಗಿದ್ದು, ಕೇಂದ್ರದ ಅಗ್ನಿವೀರ್ ಯೋಜನೆಯ ಮೂಲಕ ನೇಮಕಗೊಂಡಿಲ್ಲ ಎಂದು ವರದಿಯಾಗಿದೆ.

ಕೊಚ್ಚಿ: ಐಎನ್‌ಎಸ್ ವಿಕ್ರಾಂತ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಾವಿಕನ ಮೃತದೇಹ ಪತ್ತೆ
ಐಎನ್​​ಎಸ್ ವಿಕ್ರಾಂತ್
Follow us on

ಕೊಚ್ಚಿ ಜುಲೈ 27: ಭಾರತೀಯ ನೌಕಾಪಡೆಯ (Indian Navy) 19 ವರ್ಷದ ನಾವಿಕನೊಬ್ಬನ ಮೃತದೇಹ ಗುರುವಾರ ಮುಂಜಾನೆ ಐಎನ್‌ಎಸ್ ವಿಕ್ರಾಂತ್ ಹಡಗಿನಲ್ಲಿ (INS Vikrant) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಸ್ತುತ ನೌಕೆಯನ್ನು ಕೊಚ್ಚಿ (Kochi) ಕರಾವಳಿಯಲ್ಲಿ ನಿಲ್ಲಿಸಲಾಗಿದೆ. ಘಟನೆಯ ಕುರಿತು ತನಿಖಾ ಮಂಡಳಿಗೆ ಆದೇಶಿಸಲಾಗಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಅಧಿಕಾರಿಯೊಬ್ಬರು ಹೇಳಿದ್ದು, ನಾವಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತೋರುತ್ತದೆ ಎಂದಿದ್ದಾರೆ.

ಈ ನಾವಿಕ ಬಿಹಾರದ ಮುಜಾಫರ್‌ಪುರದ ಮೂಲದವರು. ಇವರು ಸಾಮಾನ್ಯ ಕೇಡರ್ ಆಗಿದ್ದು, ಕೇಂದ್ರದ ಅಗ್ನಿವೀರ್ ಯೋಜನೆಯ ಮೂಲಕ ನೇಮಕಗೊಂಡಿಲ್ಲ ಎಂದು ವರದಿಯಾಗಿದೆ.

ಜುಲೈ 27ರಂದು ಬೆಳಗ್ಗೆ ಐಎನ್ಎಸ್ ವಿಕ್ರಾಂತ್ ನಲ್ಲಿ 19ರ ಹರೆಯದ  ನಾವಿಕ ಆತ್ಮಹತ್ಯೆ ಮಾಡಿಕೊಂಡ  ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ವರದಿಗಳು ಇದು ಆತ್ಮಹತ್ಯೆ ಪ್ರಕರಣ ಎಂದು ಹೇಳಿವೆ. ತನಿಖಾ ಮಂಡಳಿಗೆ ಆದೇಶ ನೀಡಲಾಗುತ್ತಿದೆ ಮತ್ತು ಸ್ಥಳೀಯ ಪೋಲಿಸ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಭಾರತೀಯ ನೌಕಾಪಡೆ ಹೇಳಿದೆ.

ಇದನ್ನೂ ಓದಿ:Lok Sabha Elections: ಮುಸ್ಲಿಮರು ಬಿಜೆಪಿ ಬಳಿ ಸುಳಿಯಲ್ಲ ಎನ್ನುವ ಹೊತ್ತಲ್ಲಿ, ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ ಪಸ್ಮಾಂಡ ಸ್ನೇಹ ಯಾತ್ರೆ

ನಾವಿಕನು ಯುದ್ಧನೌಕೆಯ ಕಂಪಾರ್ಟ್‌ಮೆಂಟ್ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಸೆಪ್ಟೆಂಬರ್ 2022 ರಲ್ಲಿ ನೌಕಾಪಡೆಗೆ ನಿಯೋಜಿಸಲ್ಪಟ್ಟ INS ವಿಕ್ರಾಂತ್, M/S ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಿಂದ ಭಾರತದ ಮೊದಲ ಸ್ಥಳೀಯವಾಗಿ ನಿರ್ಮಿಸಿದ ಯುದ್ಧನೌಕೆಯಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ