ರಾಜಸ್ಥಾನದಲ್ಲಿ ರೆಡ್ ಡೈರಿ ಕಾಂಗ್ರೆಸ್ನ್ನು ಅಧಿಕಾರದಿಂದ ಕೆಳಗಿಳಿಸುತ್ತದೆ: ಗೆಹ್ಲೋಟ್ ಸರ್ಕಾರ ವಿರುದ್ಧ ಮೋದಿ ವಾಗ್ದಾಳಿ
ರಾಜಸ್ಥಾನದಲ್ಲಿ ಸರ್ಕಾರ ನಡೆಸುವ ಹೆಸರಿನಲ್ಲಿ ಕಾಂಗ್ರೆಸ್ ಕಳ್ಳರ ಅಂಗಡಿ ಮತ್ತು ಸುಳ್ಳಿನ ಮಾರುಕಟ್ಟೆಯನ್ನು ನಡೆಸುತ್ತಿದೆ. ಇದರ ಇತ್ತೀಚಿನ ಉತ್ಪನ್ನವೆಂದರೆ ರಾಜಸ್ಥಾನದ 'ರೆಡ್ ಡೈರಿ'. ಈ ಡೈರಿಯಲ್ಲಿ ಕಾಂಗ್ರೆಸ್ನ ಕರಾಳ ಕೃತ್ಯಗಳನ್ನು ಪಟ್ಟಿ ಮಾಡಲಾಗಿದೆ ಎಂದು ಹೇಳಲಾಗಿದೆ ಎಂದಿದ್ದಾರೆ ಮೋದಿ.
ಜೈಪುರ ಜುಲೈ 27: ರಾಜಸ್ಥಾನದ ಸಿಕಾರ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ರಾಜಸ್ಥಾನದ (Rajastan) ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಮತ್ತು ಕಾಂಗ್ರೆಸ್ ಸರ್ಕಾರವನ್ನು ತರಾಟೆ ತೆಗೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಭ್ರಷ್ಟಾಚಾರ ಮತ್ತು ಪರೀಕ್ಷಾ ಪತ್ರಿಕೆಗಳ ಸೋರಿಕೆಯಲ್ಲಿ ಭಾಗಿಯಾಗಿದೆ ಎಂದು ಪ್ರಧಾನಿ ಆರೋಪಿಸಿದ್ದಾರೆ. ಅದೇ ವೇಳೆ ಇತ್ತೀಚೆಗೆ ಸಚಿವ ಸಂಪುಟದಿಂದ ವಜಾಗೊಂಡ ರಾಜಿಂದರ್ ಗುಢಾ ಅವರು ಗೆಹ್ಲೋಟ್ ಸರ್ಕಾರದ ಭ್ರಷ್ಟಾಚಾರದ ವಿಚಾರ ಇದರಲ್ಲಿದೆಗೆ ಎಂದುಹೇಳುವ ‘ರೆಡ್ ಡೈರಿ’ (Red Diary) ಬಗ್ಗೆ ಉಲ್ಲೇಖಿಸಿದ್ದಾರೆ.
ರಾಜಸ್ಥಾನದಲ್ಲಿ ಸರ್ಕಾರ ನಡೆಸುವ ಹೆಸರಿನಲ್ಲಿ ಕಾಂಗ್ರೆಸ್ ಕಳ್ಳರ ಅಂಗಡಿ ಮತ್ತು ಸುಳ್ಳಿನ ಮಾರುಕಟ್ಟೆಯನ್ನು ನಡೆಸುತ್ತಿದೆ. ಇದರ ಇತ್ತೀಚಿನ ಉತ್ಪನ್ನವೆಂದರೆ ರಾಜಸ್ಥಾನದ ‘ರೆಡ್ ಡೈರಿ’. ಈ ಡೈರಿಯಲ್ಲಿ ಕಾಂಗ್ರೆಸ್ ನ ಕರಾಳ ಕೃತ್ಯಗಳನ್ನು ಪಟ್ಟಿ ಮಾಡಲಾಗಿದೆ ಎಂದು ಹೇಳಲಾಗಿದೆ ಎಂದಿದ್ದಾರೆ ಮೋದಿ.
#WATCH | Prime Minister Narendra Modi speaks on ‘Laal Diary’; says, “The Congress has only run ‘Loot ki dukaan’ and ‘Jhooth ka bazaar’ in Rajasthan in the name of running government…The latest product of this is the ‘Laal Diary’ of Rajasthan. It is said that in this diary… pic.twitter.com/w0acOjzVul
— ANI (@ANI) July 27, 2023
ಮೋದಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ‘ಪ್ರಧಾನಿ ಸಿಕಾರ್‌ನಲ್ಲಿ ‘ರೆಡ್ ಡೈರಿ’ ಕುರಿತು ಭಾಷಣ ಮಾಡಿದ್ದಾರೆ ಎಂದು ಗೊತ್ತಾಯಿತು. ಪ್ರಧಾನಿ ಸ್ಥಾನಕ್ಕೆ ಘನತೆ ಇದೆ. ಐಟಿ, ಇಡಿ ಮತ್ತು ಸಿಬಿಐ ದೇಶಾದ್ಯಂತ ದುರುಪಯೋಗವಾಗುತ್ತಿದೆ. ಅವರಿಗೆ ಡೈರಿಯಿಂದ ಮಾಹಿತಿ ಸಂಗ್ರಹಿಸಲು ಸಾಧ್ಯವಿಲ್ಲವೇ? ಅವು ಅಷ್ಟೊಂದು ವಿಚಲಿತರಾಗಿದ್ದಾರೆಯೇ? ರಾಜಸ್ಥಾನದಲ್ಲಿ ಅವ್ಯವಸ್ಥೆ ಇದೆ, ಇಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇಲ್ಲ ಎಂದು ಟಾರ್ಗೆಟ್ ಮಾಡಲಾಗುತ್ತಿದೆ. ಮೂರು ತಿಂಗಳಲ್ಲಿ ಚುನಾವಣೆಗಳು ಬರಲಿವೆ. ಜನರ ಮನಸ್ಥಿತಿ ನೋಡಿ ವಿಚಲಿತರಾಗಿದ್ದಾರೆ. ಹಾಗಾಗಿ ಅವರು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ‘ರೆಡ್ ಡೈರಿ’ ಕೂಡ ಒಂದು ಎಂದು ಗೆಹ್ಲೋಟ್ ಹೇಳಿದ್ದಾರೆ.
#WATCH | Rajasthan CM Ashok Gehlot says, “I heard that PM gave a speech in Sikar on ‘Laal Diary’. The position of PM holds dignity. IT, ED and CBI are being misused across the country. Can’t they gather information from on the ‘Diary’ from them?…Are they so perturbed? Rajasthan… pic.twitter.com/douyml0Eiu
— ANI (@ANI) July 27, 2023
ಇಂದು ಬೆಳಗ್ಗೆ ಸಿಕಾರ್‌ನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಿಂದ ದೂರ ಮುಖ್ಯಮಂತ್ರಿ ಗೆಹ್ಲೋಟ್ ದೂರ ಉಳಿದಿದ್ದಾರೆ. ಸಿಕಾರ್ ನಲ್ಲಿ ಪ್ರಧಾನಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿದ್ದು, ಕಿಸಾನ್ ಸಮ್ಮಾನ್ ನಿಧಿಯ ಭಾಗವಾಗಿ 17000 ಕೋಟಿಗಳನ್ನು ರೈತರ ಖಾತೆಗಳಿಗೆ ವರ್ಗಾಯಿಸಿದರು.
ಅಶೋಕ್ ಗೆಹ್ಲೋಟ್ ಅವರು ತಮ್ಮ ಭಾಷಣವನ್ನು ಪ್ರಧಾನಿಯವರ ಕಾರ್ಯಕ್ರಮದಿಂದ ತೆಗೆದು ಹಾಕಲಾಗಿದೆ, ಹಾಗಾಗಿಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿದ್ದರು. ಆದರೆ ಕಾರ್ಯಕ್ರಮಕ್ಕೆ ಸಿಎಂ ಅವರನ್ನು ಆಹ್ವಾನಿಸಲಾಗಿತ್ತು. ಅನಾರೋಗ್ಯದ ಕಾರಣ ಅವರು ಭಾಗವಹಿಸುವುದಿಲ್ಲ ಎಂದು ಅವರ ಕಚೇರಿ ತಿಳಿಸಿತ್ತು ಎಂದು ಪ್ರಧಾನಿ ಕಚೇರಿ ಸ್ಪಷ್ಟಪಡಿಸಿದೆ. ಆದಾಗ್ಯೂ, ಗೆಹ್ಲೋಟ್ ಅವರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವಾಗ ನಾನು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಭಾಷಣ ಮಾಡುವುದಾಗಿ ಹೇಳಿದೆ. ಆದರೆ ಅದು ಬೇಡ ಎಂದು ಅದನ್ನು ತೆಗೆದು ಹಾಕಲಾಗಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರ ರೈತರ ಹಿತದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ, ಅವರನ್ನು ಸಂಕಷ್ಟಕ್ಕೊಳಗಾಗಲು ಬಿಡುವುದಿಲ್ಲ: ಮೋದಿ
ಕಳೆದ ರಾತ್ರಿ ನನ್ನ ಭಾಷಣವನ್ನು ಕಾರ್ಯಕ್ರಮದಿಂದ ತೆಗೆದುಹಾಕಲಾಗಿದೆ. ಇದು ನಮ್ಮ ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಒಟ್ಟಾಗಿ ಕೆಲಸ ಮಾಡಬೇಕು ಎಂದರು. ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ಅವರು ರಾಜಸ್ಥಾನದಲ್ಲಿನ ಕಾರ್ಯಕ್ರಮ ಮುಗಿಸಿ ಗುಜರಾತ್‌ನ ರಾಜ್‌ಕೋಟ್‌ಗೆ ತೆರಳಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ