ನಾವು ಆಹ್ವಾನಿಸಿದ್ದೇವೆ, ಆದರೆ ನಿಮ್ಮ ಕಚೇರಿ ನಿರಾಕರಿಸಿದೆ: ಅಶೋಕ್ ಗೆಹ್ಲೋಟ್ ಆರೋಪಕ್ಕೆ ಪಿಎಂಒ ಉತ್ತರ
ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಗವಹಿಸಲಿರುವ ಕಾರ್ಯಕ್ರಮದಲ್ಲಿ ಪಿಎಂಒ ತಮ್ಮ ಭಾಷಣದ ಅವಕಾಶವನ್ನು ಕಸಿದುಕೊಂಡಿದೆ ಎಂದು ದೂರಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್(Ashok Gehlot) ಆರೋಪಕ್ಕೆ ಪ್ರಧಾನಿ ಕಾರ್ಯಾಲಯ ತಕ್ಕ ಉತ್ತರ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಗವಹಿಸಲಿರುವ ಕಾರ್ಯಕ್ರಮದಲ್ಲಿ ಪಿಎಂಒ ತಮ್ಮ ಭಾಷಣದ ಅವಕಾಶವನ್ನು ಕಸಿದುಕೊಂಡಿದೆ ಎಂದು ದೂರಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್(Ashok Gehlot) ಆರೋಪಕ್ಕೆ ಪ್ರಧಾನಿ ಕಾರ್ಯಾಲಯ ಉತ್ತರ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರು ರಾಜಸ್ಥಾನಕ್ಕೆ ಆಗಮಿಸುವ ಮುನ್ನವೇ ಅಲ್ಲಿ ರಾಜಕೀಯ ತೀವ್ರಗೊಂಡಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಪ್ರಧಾನಿ ಕಾರ್ಯಾಲಯದ ನಡುವೆ ಟ್ವಿಟ್ಟರ್ನಲ್ಲಿ ಆರೋಪ -ಪ್ರತ್ಯಾರೋಪ ನಡೆದಿದೆ.
ಪ್ರಧಾನಿ ಮೋದಿಯವರ ಕಾರ್ಯಕ್ರಮದಲ್ಲಿ ಮೂರು ನಿಮಿಷಗಳ ಭಾಷಣದ ಅವಕಾಶವನ್ನು ಕಿತ್ತುಕೊಂಡಿರುವ ಬಗ್ಗೆ ಗೆಹ್ಲೋಟ್ ದೂರಿದ್ದಾರೆ. ಟ್ವಿಟ್ಟರ್ನಲ್ಲಿಯೇ ಪ್ರಧಾನಿ ಮೋದಿಯನ್ನು ಸ್ವಾಗತಿಸಿರುವ ಅವರು ತಮ್ಮ 6 ಬೇಡಿಕೆಗಳನ್ನು ಇಟ್ಟಿದ್ದಾರೆ.
ಮತ್ತಷ್ಟು ಓದಿ: ಮೊಹಬ್ಬತ್ ಕಿ ದುಕಾನ್ ಪ್ರಾಮಾಣಿಕ ಗ್ರಾಹಕರಿಗಾಗಿ ಅಲ್ಲ: ಗೆಹ್ಲೋಟ್ ಸರ್ಕಾರವನ್ನು ಟೀಕಿಸಿದ ಬಿಜೆಪಿ
ಆದರೆ ಗೆಹ್ಲೋಟ್ ಅವರ ದೂರಿಗೆ ಪ್ರತಿಯಾಗಿ ಪ್ರತಿಕ್ರಿಯಿಸಿರುವ ಪಿಎಂಒ, “ಪ್ರೋಟೊಕಾಲ್ ಪ್ರಕಾರ ನಿಮ್ಮನ್ನು ಆಹ್ವಾನಿಸಲಾಗಿದೆ ಮತ್ತು ಭಾಷಣಕ್ಕೆ ಸಮಯವನ್ನೂ ಕೂಡ ನೀಡಲಾಗಿತ್ತು. ಆದರೆ ಅದಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ನಿಮ್ಮ ಕಚೇರಿಯೇ ಹೇಳಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಹಳೆಯ ಭೇಟಿಗಳ ಸಂದರ್ಭದಲ್ಲಿ ನಿಮ್ಮನ್ನು ಪ್ರತಿ ಬಾರಿ ಆಹ್ವಾನಿಸಲಾಗುತ್ತಿತ್ತು, ನೀವು ಪ್ರತಿ ಬಾರಿಯೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಿ” ಎಂದು ಹೇಳಿದೆ.
ಇತ್ತೀಚೆಗೆ ಗಾಯಗೊಂಡಿರುವ ಕಾರಣ ಬರಲು ಯಾವುದೇ ತೊಂದರೆಯಿಲ್ಲದಿದ್ದರೆ ಬರಬಹುದು ಎಂದು ಟ್ವೀಟ್ನಲ್ಲಿ ಹೇಳಿದೆ. ಇಂದಿನ ಕಾರ್ಯಕ್ರಮಕ್ಕೆ ನಿಮಗೂ ಸ್ವಾಗತ ಅಭಿವೃದ್ಧಿ ಕಾಮಗಾರಿಗಳ ಫಲಕದಲ್ಲೂ ನಿಮ್ಮ ಹೆಸರಿದೆ, ನಿಮ್ಮ ಉಪಸ್ಥಿತಿಯೂ ಮುಖ್ಯ ಎಂದು ಹೇಳಲಾಗಿದೆ.
Shri @ashokgehlot51 Ji,
In accordance with protocol, you have been duly invited and your speech was also slotted. But, your office said you will not be able to join.
During PM @narendramodi’s previous visits as well you have always been invited and you have also graced those… https://t.co/BHQkHCHJzQ
— PMO India (@PMOIndia) July 27, 2023
ಅಶೋಕ್ ಗೆಹ್ಲೋಟ್ ದೂರು ಏನು?
ತಮ್ಮ ಭಾಷಣದ ಅವಕಾಶವನ್ನು ಪಿಎಂಒ ಕಿತ್ತುಕೊಂಡಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರಧಾನಿ ನರೇಂದ್ರ ಮೋದಿಗೆ ಟ್ವಿಟ್ಟರ್ನಲ್ಲಿ ದೂರು ನೀಡಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಗೆಹ್ಲೋಟ್, ಇಂದು ನೀವು ರಾಜ್ಯಕ್ಕೆ ಬರುತ್ತಿದ್ದೀರಿ, ನಿಮ್ಮ ಕಚೇರಿ ಪಿಎಂಒ ಕಾರ್ಯಕ್ರಮದಿಂದ ನನ್ನ ಪೂರ್ವ ನಿಗದಿತ 3 ನಿಮಿಷಗಳ ಭಾಷಣವನ್ನು ತೆಗೆದು ಹಾಕಿದೆ. ಆದ್ದರಿಂದ ನಾನು ನಿಮ್ಮನ್ನು ಭಾಷಣದ ಮೂಲಕ ಸ್ವಾಗತಿಸಲು ಸಾಧ್ಯವಾಗುವುದಿಲ್ಲ, ಆದ್ದರಿಂದ ನಾನು ಟ್ವೀಟ್ ಮೂಲಕವೇ ರಾಜಸ್ಥಾನಕ್ಕೆ ನಿಮ್ಮನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಿಕರ್‌ಗೆ ಭೇಟಿ ನೀಡಲಿದ್ದು, ಇಲ್ಲಿ ಅವರು 9 ಕೋಟಿ ರೈತರ ಖಾತೆಗೆ ಕಿಸಾನ್ ಸಮ್ಮಾನ್ ನಿಧಿಯ ಕಂತುಗಳನ್ನು ವರ್ಗಾಯಿಸಲಿದ್ದಾರೆ. ಇಲ್ಲಿ ಬಿಜೆಪಿಯ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಸಹ ಭಾಗವಹಿಸಲಿದ್ದಾರೆ, ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಮರ ತೀವ್ರಗೊಂಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ