ಮೊಹಬ್ಬತ್ ಕಿ ದುಕಾನ್ ಪ್ರಾಮಾಣಿಕ ಗ್ರಾಹಕರಿಗಾಗಿ ಅಲ್ಲ: ಗೆಹ್ಲೋಟ್ ಸರ್ಕಾರವನ್ನು ಟೀಕಿಸಿದ ಬಿಜೆಪಿ
ಇಂತಹ ಹೇಳಿಕೆ ನೀಡುವ ಮೂಲಕ ನಾನು ಯಾವುದೇ ಅಪರಾಧ ಮಾಡಿಲ್ಲ.ರಾಜ್ಯ ಸರ್ಕಾರವನ್ನು ಬಲಪಡಿಸುವುದಕ್ಕಾಗಿ ನಾನು ಶ್ರಮಿಸಿದ್ದೇನೆ. ಸಮಸ್ಯೆ ಎದುರಾದಾಗಲೂ ನಾನು ಯಾವಾಗಲೂ ಅಶೋಕ್ ಗೆಹ್ಲೋಟ್ ಅವರ ಬೆಂಬಲಕ್ಕೆ ನಿಂತಿದ್ದೇನೆ ಎಂದು ರಾಜಸ್ಥಾನದ ಮಾಜಿ ಸಚಿವ ರಾಜೇಂದ್ರ ಸಿಂಗ್ ಗುಢ ಹೇಳಿದ್ದಾರೆ.
ಜೈಪುರ ಜುಲೈ 22 : ಮಣಿಪುರ ಹಿಂಸಾಚಾರದ (Manipur Violence) ಬಗ್ಗೆ ಕಾಂಗ್ರೆಸ್ (Congress) ನಾಯಕರು ದನಿ ಎತ್ತುತ್ತಿರುವಂತೆಯೇ, ಮಹಿಳೆಯರ ವಿರುದ್ಧದ ಅಪರಾಧಗಳನ್ನು ನಿಯಂತ್ರಿಸುವಲ್ಲಿ ತಮ್ಮದೇ ಸರ್ಕಾರದ ಲೋಪಗಳ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನಿಸಿದ ಕೆಲವೇ ಗಂಟೆಗಳ ನಂತರ ರಾಜಸ್ಥಾನದ (Rajasthan) ಸಚಿವ ರಾಜೇಂದ್ರ ಸಿಂಗ್ ಗುಢ ((Rajendra Singh Gudha) ಅವರನ್ನು ಅಶೋಕ್ ಗೆಹ್ಲೋಟ್ (Ashok Gehlot) ಸರ್ಕಾರ ವಜಾ ಮಾಡಿದೆ.
ಈ ಬಗ್ಗೆ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ತರಾಟೆಗೆ ತೆಗೆದು ಕೊಂಡ ಬಿಜೆಪಿ, ಮಹಿಳಾ ಸಬಲೀಕರಣ, ಕಾಂಗ್ರೆಸ್ ಶೈಲಿ ಇದು. ಇಂದಿರಾ ಗಾಂಧಿಯವರ ಪ್ರಜಾಸತ್ತಾತ್ಮಕ ಮನೋಧರ್ಮ. ರಾಜಸ್ಥಾನ ಸರ್ಕಾರದಲ್ಲಿ ಒಬ್ಬ ಸಚಿವರನ್ನು ಸತ್ಯ ಹೇಳಿದ್ದಕ್ಕಾಗಿ ತೆಗೆದುಹಾಕಲಾಗಿದೆ. ಮೊಹಬ್ಬತ್ ಕಿ ದುಕಾನ್ ಪ್ರಾಮಾಣಿಕ ಗ್ರಾಹಕರಿಗೆ ಯಾವುದೇ ಜಾಗವನ್ನು ನೀಡುವುದಿಲ್ಲ. ಈ ದುಕಾನ್‌ನಲ್ಲಿ ಭ್ರಷ್ಟರು ಮತ್ತು ಸುಳ್ಳುಗಾರರಿಗೆ ಮಾತ್ರ ಸ್ವಾಗತ ಎಂದು ಟ್ವೀಟ್ ಮಾಡಿದೆ.
Women empowerment, Congress style, with a dash of Indira Gandhi inspired democratic temperament!
A Minister in Rajasthan Govt is removed for speaking the truth. Mohabbat Ki Dukan offers no space for honest customers it seems. Only the corrupt and liars are welcome in this Dukan!
— BJP (@BJP4India) July 21, 2023
ಗುಢ ಅವರು ಸೈನಿಕ ಕಲ್ಯಾಣ್ (ಸ್ವತಂತ್ರ ಉಸ್ತುವಾರಿ), ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ರಾಜ್ಯ ಸಚಿವರಾಗಿದ್ದರು.
Rajasthan Minister & Congress leader Rajendra Singh Gudha-
It is true & should be accepted that we have failed in women’s safety. Instead of Manipur, we should look within ourselves that atrocities on women have increased in Rajasthan pic.twitter.com/1ZUJkt5W5c
— Megh Updates ?™ (@MeghUpdates) July 21, 2023
ರಾಜ್ಯ ವಿಧಾನಸಭೆಯಲ್ಲಿ ರಾಜಸ್ಥಾನದ ಕನಿಷ್ಠ ಆದಾಯ ಖಾತರಿ ಮಸೂದೆ 2023 ರ ಚರ್ಚೆಯ ಸಂದರ್ಭದಲ್ಲಿ, ಕಾಂಗ್ರೆಸ್ ಶಾಸಕರು ಮಣಿಪುರದಲ್ಲಿ ಹಿಂಸಾಚಾರದ ವಿಷಯವನ್ನು ಪ್ರಸ್ತಾಪಿಸಿದರು. ಆ ಹೊತ್ತಲ್ಲಿ ಗುಧಾ ಅವರು ತಮ್ಮದೇ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳುವಂತೆ ಕರೆ ನೀಡಿದ್ದರು.ಮಹಿಳೆಯರಿಗೆ ಭದ್ರತೆ ನೀಡುವಲ್ಲಿ ನಾವು ವಿಫಲರಾಗಿದ್ದೇವೆ ಎಂಬುದು ಸತ್ಯ. ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೇಗೆ ಹೆಚ್ಚುತ್ತಿವೆ, ಮಣಿಪುರದ ವಿಷಯವನ್ನು ಹೈಲೈಟ್ ಮಾಡುವ ಬದಲು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಗುಢ ವಿಧಾನಸಭೆಯಲ್ಲಿ ಹೇಳಿದ್ದರು.
ಬಿಜೆಪಿಯ ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಗುಢ ಅವರ ಹೇಳಿಕೆಗಳನ್ನು ಬಳಸಿದ್ದಾರೆ. ಸಂವಿಧಾನದ ಕಲಂ 164(2)ರ ಪ್ರಕಾರ ಸರ್ಕಾರ ಸಾಮೂಹಿಕ ಹೊಣೆಗಾರಿಕೆಯ ಮೇಲೆ ಕೆಲಸ ಮಾಡುತ್ತದೆ. ಒಬ್ಬ ಸಚಿವರು ಮಾತನಾಡಿದರೆ ಇಡೀ ಸರ್ಕಾರವೇ ಮಾತನಾಡುತ್ತಿದೆ ಎಂದು ಸಂವಿಧಾನ ಹೇಳುತ್ತದೆ. ಸಚಿವರು ಸರ್ಕಾರವನ್ನು ಬಯಲಿಗೆಳೆದಿದ್ದಾರೆ. ನಾನು ಅವರನ್ನು ಅಭಿನಂದಿಸುತ್ತೇನೆ, ಆದರೆ ಇದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ ರಾಥೋಡ್.
ಮಣಿಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಕೇಂದ್ರ ಮತ್ತು ಪ್ರತಿಪಕ್ಷಗಳ ನಡುವಿನ ಜಗಳ ತೀವ್ರಗೊಂಡಿದ್ದು, ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೊ ದೇಶದ ಜನರನ್ನು ಬೆಚ್ಚಿ ಬೀಳಿಸಿದೆ.
ಶುಕ್ರವಾರ ಸಂಸತ್ತಿನ ಮುಂಗಾರು ಅಧಿವೇಶನದ ಆರಂಭಕ್ಕೂ ಮುನ್ನ ಮಾತನಾಡಿದ ಪ್ರಧಾನಿ ಮೋದಿ, ಯಾವುದೇ ತಪ್ಪಿತಸ್ಥರನ್ನು ಬಿಡುವುದಿಲ್ಲ, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಾನು ರಾಷ್ಟ್ರಕ್ಕೆ ಭರವಸೆ ನೀಡಲು ಬಯಸುತ್ತೇನೆ. ಮಣಿಪುರದ ಹೆಣ್ಣುಮಕ್ಕಳಿಗೆ ಆಗಿದ್ದನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ಅತ್ಯಾಚಾರದಲ್ಲಿ ರಾಜಸ್ಥಾನ ಅಗ್ರಸ್ಥಾನದಲ್ಲಿದೆ; ವಿಧಾನಸಭೆಯಲ್ಲೇ ಹೇಳಿಕೆ ನೀಡಿದ ಸಚಿವ ರಾಜೇಂದ್ರ ಸಿಂಗ್ ವಜಾ
ಸತ್ಯ ಹೇಳಿದ್ದಕ್ಕಾಗಿ ನನಗೆ ಶಿಕ್ಷೆಯಾಗಿದೆ: ಗುಢ
ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿನ ಘಟನೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಎಲ್ಲಾ ಮುಖ್ಯಮಂತ್ರಿಗಳಿಗೆ ತಮ್ಮ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸುವಂತೆ ನಾನು ಮನವಿ ಮಾಡುತ್ತೇನೆ. ವಿಶೇಷವಾಗಿ ನಮ್ಮ ತಾಯಿ ಮತ್ತು ಸಹೋದರಿಯರ ಬಗ್ಗೆ ಮತ್ತು ರಾಜಸ್ಥಾನ, ಛತ್ತೀಸ್‌ಗಢ ಅಥವಾ ಮಣಿಪುರದಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಭಾರತದ ಪ್ರತಿಯೊಂದು ಮೂಲೆಯಲ್ಲಿಯೂ ನಾವು ರಾಜಕೀಯಕ್ಕಿಂತ ಮೇಲೇರಬೇಕು ಮತ್ತು ಘೋರ ಅಪರಾಧಗಳ ವಿರುದ್ಧ ಕಾರ್ಯನಿರ್ವಹಿಸಬೇಕು ಎಂದಿದ್ದರು.
ಇಂತಹ ಹೇಳಿಕೆ ನೀಡುವ ಮೂಲಕ ನಾನು ಯಾವುದೇ ಅಪರಾಧ ಮಾಡಿಲ್ಲ..ರಾಜ್ಯ ಸರ್ಕಾರವನ್ನು ಬಲಪಡಿಸುವುದಕ್ಕಾಗಿ ನಾನು ಶ್ರಮಿಸಿದ್ದೇನೆ. ಸಮಸ್ಯೆ ಎದುರಾದಾಗಲೂ ನಾನು ಯಾವಾಗಲೂ ಅಶೋಕ್ ಗೆಹ್ಲೋಟ್ ಅವರ ಬೆಂಬಲಕ್ಕೆ ನಿಂತಿದ್ದೇನೆ ಎಂದು ರಾಜಸ್ಥಾನದ ಮಾಜಿ ಸಚಿವ ರಾಜೇಂದ್ರ ಸಿಂಗ್ ಗುಢ ಹೇಳಿದ್ದಾರೆ.
ನಾನು ಯಾವಾಗಲೂ ಸತ್ಯವನ್ನೇ ಮಾತನಾಡುತ್ತೇನೆ. ಸತ್ಯವನ್ನು ಹೇಳಿದ್ದಕ್ಕಾಗಿ ನನಗೆ ಶಿಕ್ಷೆಯಾಗಿದೆ. ಸಾರ್ವಜನಿಕರು ನನ್ನೊಂದಿಗೆ ಇರುತ್ತಾರೆ, ನಾನು ಅವರಿಗಾಗಿ ಕೆಲಸ ಮಾಡುತ್ತೇನೆ, ಅವರು (ಅಶೋಕ್ ಗೆಹ್ಲೋಟ್) ನನ್ನನ್ನು ಸಂಪುಟದಿಂದ ತೆಗೆದುಹಾಕಲಿ ಅಥವಾ ಜೈಲಿಗೆ ಕಳುಹಿಸಲಿ, ನಾನು ಬದುಕಿರುವವರೆಗೆ ಮಾತನಾಡುತ್ತೇನೆ. ನಮ್ಮ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯಗಳಲ್ಲಿ ರಾಜಸ್ಥಾನವು ನಂಬರ್ 1 ಆಗಿದೆ. ಈ ಬಗ್ಗೆ ಪೊಲೀಸ್ ಭದ್ರತೆಯನ್ನು ಕೇಳಲು ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯ ಭ್ರಷ್ಟವಾಗಿದೆ, ಅವರು ಜನರಿಂದ ಲಂಚ ಪಡೆಯುವಲ್ಲಿ ನಿರತರಾಗಿದ್ದಾರೆ ಎಂದು ಮಾಜಿ ಸಚಿವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:22 pm, Sat, 22 July 23