ಮದುವೆಗಳಲ್ಲಿ ಸಿನಿಮಾ ಹಾಡುಗಳನ್ನು ಹಾಕುವುದು ಕಾಪಿರೈಟ್ ಉಲ್ಲಂಘನೆಯಲ್ಲ: ಕೇಂದ್ರ ಸ್ಪಷ್ಟನೆ
ಮದುವೆಗಳಲ್ಲಿ ಸಿನಿಮಾ ಹಾಡುಗಳನ್ನು ಹಾಕುವುದರಿಂದ ಕಾಪಿರೈಟ್ ಉಲ್ಲಂಘನೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟೀಕರಣ ನೀಡಿದೆ. ಅಂತಹ ಚಟುವಟಿಕೆಗಳಿಗೆ ಯಾರೂ ಕೂಡ ರಾಯಲ್ಟಿ ವಿಧಿಸುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಮದುವೆಗಳಲ್ಲಿ ಸಿನಿಮಾ ಹಾಡುಗಳನ್ನು ಹಾಕುವುದರಿಂದ ಕಾಪಿರೈಟ್ ಉಲ್ಲಂಘನೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟೀಕರಣ ನೀಡಿದೆ. ಅಂತಹ ಚಟುವಟಿಕೆಗಳಿಗೆ ಯಾರೂ ಕೂಡ ರಾಯಲ್ಟಿ ವಿಧಿಸುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಮದುವೆ ಸಮಾರಂಭಗಳು ಮತ್ತು ಇತರ ಹಬ್ಬಗಳಲ್ಲಿ ಬಾಲಿವುಡ್ ಹಾಡುಗಳನ್ನು ಪ್ಲೇ ಮಾಡುವುದರಿಂದ ಹಕ್ಕುಸ್ವಾಮ್ಯ ಉಲ್ಲಂಘನೆಗಾಗಿ ಕಾನೂನು ಕ್ರಮ ಜರುಗಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
ಮದುವೆ ಸಮಾರಂಭಗಳಲ್ಲಿ ಹಿಂದಿ ಚಲನಚಿತ್ರ ಗೀತೆಗಳ ಪ್ರದರ್ಶನಕ್ಕಾಗಿ ಕಾಪಿರೈಟ್ ಸೊಸೈಟಿಗಳು ರಾಯಲ್ಟಿಯನ್ನು ಸಂಗ್ರಹಿಸುವ ಕುರಿತು ಹಲವಾರು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಕೇಂದ್ರ ಸ್ಪಷ್ಟನೆ ನೀಡಿದೆ.
ಮತ್ತಷ್ಟು ಓದಿ: Telangana: ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡುತ್ತಿರುವಾಗ ಕುಸಿದು ಬಿದ್ದು ಯುವಕ ಸಾವು
ಹಬ್ಬಗಳಲ್ಲಾಗಲಿ ಅಥವಾ ಮದುವೆ ಸಮಾರಂಭದಲ್ಲಾಗಲಿ ಹಾಡುಗಳನ್ನು ಹಾಕಿದರೆ ಅದು ಹಕ್ಕುಸ್ವಾಮ್ಯದ ಉಲ್ಲಂಘನೆಯಾಗುವುದಿಲ್ಲ ಎಂದು ಹೇಳಿದೆ.
ಡಿಪಿಐಐಟಯು ಮದುವೆ ಕಾರ್ಯಗಳಲ್ಲಿ ಸಂಗೀತ ಕಾರ್ಯಗಳನ್ನು ನಿರ್ವಹಿಸಲು ಹಕ್ಕುಸ್ವಾಮ್ಯ ಸೊಸೈಟಿಗಳಿಂದ ರಾಯಲ್ಟಿಯನ್ನು ಸಂಗ್ರಹಿಸುವ ಕುರಿತು ದೂರುಗಳನ್ನು ಸ್ವೀಕರಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ