ಕೊವಿಡ್-19 ಸೋಂಕಿನಿಂದಾಗಿ ಮದುವೆ ಸೇರಿ ಯಾವುದೇ ಶುಭಸಮಾರಂಭಗಳನ್ನು ನಡೆಸುವುದೇ ದೊಡ್ಡ ತಲೆನೋವಾಗಿಬಿಟ್ಟಿದೆ. ಆದರೂ ಜನ ಮಾತ್ರ ಹೊಸಹೊಸ ರೀತಿಯಲ್ಲಿ ಮದುವೆ ಸಮಾರಂಭ ನಡೆಸುತ್ತಲೇ ಇದ್ದಾರೆ. ಇದೀಗ ಕೇರಳದಲ್ಲಿ ಜೋಡಿಯೊಂದು ಕೊವಿಡ್-19 ಆಸ್ಪತ್ರೆ ವಾರ್ಡ್ನಲ್ಲೇ ವಿವಾಹವಾಗಿ ದೇಶದ ಗಮನಸೆಳೆದಿದೆ.
ಶರತ್ ಮೋನ್ ಮತ್ತು ಅಭಿರಾಮಿ ಎಂಬುವರು ಕೇರಳದ ಅಲಪ್ಪುಳ ವೈದ್ಯಕೀಯ ಕಾಲೇಜಿನ ಕೊವಿಡ್ ವಾರ್ಡ್ನಲ್ಲಿ ವಿವಾಹವಾಗಿದ್ದಾರೆ. ಇಲ್ಲಿ ವರ ಶರತ್ ಮೋನ್ ಕೊವಿಡ್-19 ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹಾಗಾಗಿ ಮುಹೂರ್ತ ತಪ್ಪಿಸಲು ಇಷ್ಟವಿಲ್ಲದೆ ವಧು ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗೇ ಬಂದು ವಿವಾಹವಾಗಿದ್ದಾರೆ. ಶರತ್ ಹಾಗೂ ಅಭಿರಾಮಿ ಇಬ್ಬರೂ ಕೈಂಕರಿ ನಿವಾಸಿಗಳಾಗಿದ್ದಾರೆ.
ಶರತ್ ವಿದೇಶದಲ್ಲಿ ಕೆಲಸ ಮಾಡುತ್ತಾರೆ. ಮದುವೆ ಫಿಕ್ಸ್ ಆಗಿ ಇನ್ನೇನು ಕೆಲವೇ ದಿನ ಇದೆ ಎನ್ನುವಾಗ ಅವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಅವರ ತಾಯಿಗೂ ಸೋಂಕು ತಗುಲಿದೆ. ತಾಯಿ-ಮಗ ಇಬ್ಬರನ್ನೂ ಅಲಪ್ಪುಳ ವೈದ್ಯಕೀಯ ಕಾಲೇಜಿನ ಕೊವಿಡ್ ಸೆಂಟರ್ನಲ್ಲಿ ದಾಖಲು ಮಾಡಲಾಗಿತ್ತು. ಏಪ್ರಿಲ್ 25ರಂದು ನಿಶ್ಚಯವಾಗಿದ್ದ ಮದುವೆಯನ್ನು ಮುಂದೂಡುವುದು ಬೇಡ ಎಂದು ಎರಡೂ ಕುಟುಂಬಸ್ಥರು ನಿರ್ಧರಿಸಿ, ಜಿಲ್ಲಾಡಳಿತದಿಂದ ಅನುಮತಿ ಪಡೆದು, ಕೊವಿಡ್ 19 ವಾರ್ಡ್ನಲ್ಲಿ ವಿವಾಹವಾಗಿದ್ದಾರೆ. ಇಲ್ಲಿ ತುಂಬ ಜನ ಸೇರಿರಲಿಲ್ಲ. ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳಲಾಗಿತ್ತು. ಅಲ್ಲೇ ಇದ್ದ ವರನ ತಾಯಿ, ಹೊಸ ಜೋಡಿ ಹೂಗುಚ್ಛ ನೀಡಿ ಶುಭ ಹಾರೈಸಿದರು ಎಂದು ಆಸ್ಪತ್ರೆ ತಿಳಿಸಿದೆ.
ತೆಲುಗಿನಲ್ಲಿ ಮಿಂಚಲಿದ್ದಾರೆ ಮಳಯಾಳಂ ನಟಿ ನಜ್ರಿಯಾ ನಜೀಮ್…!
couple in Kerala tied the knot inside a Covid ward Of Alappuzha Media College after groom testes positive for coronavirus