ವಿವಿಧ ದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ 200ಕ್ಕೂ ಹೆಚ್ಚು ಭಾರತೀಯ ಮೂಲದವರು; ಪಟ್ಟಿ ಬಿಡುಗಡೆ ಮಾಡಿದ ಎನ್​ಜಿಒ

|

Updated on: Feb 16, 2021 | 5:47 PM

ವಿವಿಧ ದೇಶಗಳ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಭಾರತೀಯ ಮೂಲದವರು ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟದವರೆಗೆ ರಾಜಕೀಯ ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಎಂದು ಇಂಡಿಯಾಸ್ಪೋರಾ ತಿಳಿಸಿದೆ.

ವಿವಿಧ ದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ 200ಕ್ಕೂ ಹೆಚ್ಚು ಭಾರತೀಯ ಮೂಲದವರು; ಪಟ್ಟಿ ಬಿಡುಗಡೆ ಮಾಡಿದ ಎನ್​ಜಿಒ
ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್
Follow us on

ಭಾರತದಿಂದ ಬೇರೆ ವಿವಿಧ ದೇಶಗಳಿಗೆ ವಲಸೆ ಹೋಗಿ, ಅಲ್ಲಿ ಉನ್ನತ ಹುದ್ದೆ ಅಲಂಕರಿಸಿದ 200 ಜನರ ಪಟ್ಟಿಯನ್ನು ನಿನ್ನೆ ಯುಎಸ್​ ಮೂಲದ ಎನ್​ಜಿಒ ಇಂಡಿಯಾಸ್ಪೋರಾ(Indiaspora) ಅನಾವರಣ ಮಾಡಿದೆ. ಇತ್ತೀಚೆಗಷ್ಟೇ ಅಮೆರಿಕ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕಮಲಾ ಹ್ಯಾರೀಸ್​ ಹೆಸರೂ ಕೂಡ ಇದರಲ್ಲಿ ಇದೆ. ವಿಶ್ವದ ವಿವಿಧ ದೇಶಗಳಲ್ಲಿ ಚುನಾಯಿತರಾದವರ, ಸರ್ಕಾರಿ ಕೆಲಸಗಳಿಗೆ ನೇಮಕರಾದ ನೌಕರರ ಹೆಸರುಗಳನ್ನು ಈ ಪಟ್ಟಿ ಒಳಗೊಂಡಿದೆ. ಇಂಡಿಯಾಸ್ಪೋರಾ ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರಿಗಾಗಿ ಇರುವ ಎನ್​ಜಿಒ. ಫೆ.15ರಂದು ಅಮೆರಿಕದಲ್ಲಿ ಆಚರಿಸಲಾದ ಪ್ರೆಸಿಡೆಂಟ್​ ಡೇ ನಿಮಿತ್ತ, ಅನಿವಾಸಿ ಭಾರತೀಯರ ಸಾಧನೆಯನ್ನು ಗುರುತಿಸುವ ಉದ್ದೇಶದಿಂದ ಈ ಪಟ್ಟಿಯನ್ನು ಎನ್​ಜಿಒ ಬಿಡುಗಡೆ ಮಾಡಿದೆ.

ಹೀಗೆ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಭಾರತೀಯ ಮೂಲದವರು ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟದವರೆಗೆ ರಾಜಕೀಯ ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಇದು ಮುಂದಿನ ಪೀಳಿಗೆಯ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎಂದೂ ಇಂಡೋಸ್ಪೋರಾ ಹೇಳಿದೆ. ಒಟ್ಟು 15 ದೇಶಗಳಲ್ಲಿ ಅಧ್ಯಕ್ಷ, ಪ್ರಧಾನಮಂತ್ರಿ ಹುದ್ದೆಯಲ್ಲಿ ಸೇವೆ ಸಲ್ಲಿಸಿದವರಿಂದ ಹಿಡಿದು 65ಕ್ಕೂ ಹೆಚ್ಚು ಕ್ಯಾಬಿನೆಟ್​ ಅಧಿಕಾರಿಗಳ ಹೆಸರು ಸೇರಿದೆ.

ಇಲ್ಲಿದೆ ನೋಡಿ ವಿಶ್ವದ ವಿವಿಧ ದೇಶಗಳ ಉನ್ನತ ಹುದ್ದೆಯನ್ನು ಅಲಂಕರಿಸಿದ ಭಾರತೀಯ ಮೂಲದವರ ಹೆಸರು ಮತ್ತು ಹುದ್ದೆ..ನಾವಿಲ್ಲಿ ಪ್ರಮುಖ ಸ್ಥಾನದಲ್ಲಿರುವ 15 ಮಂದಿಯ ಹೆಸರನ್ನು ಉಲ್ಲೇಖಿಸಿದ್ದು, ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಬಹುದು.

ಅಂಟಾನಿಯೋ ಕೋಸ್ಟಾ: ಪೋರ್ಚುಗಲ್​ ಪ್ರಧಾನಮಂತ್ರಿ
ಮೊಹಮ್ಮದ್​ ಇರ್ಫಾನ್​- ಗಯಾನಾ ದೇಶದ ಅಧ್ಯಕ್ಷ
ಪ್ರವಿಂದ್​ ಜಗ್ನೌಥ್​: ಮಾರಿಷಸ್ ಪ್ರಧಾನಮಂತ್ರಿ
ಪ್ರಥ್ವಿರಾಜ್​ಸಿಂಗ್​ ರೂಪನ್​-ಮಾರಿಷಸ್ ಅಧ್ಯಕ್ಷ
ಚಂದ್ರಿಕಾಪರ್ಸಾದ್ ಸಂತೋಖಿ (ಚಾನ್​ ಸಂತೋಖಿ) -ಸುರಿನಾಮ್ ಅಧ್ಯಕ್ಷರು
ಕಮಲಾ ಹ್ಯಾರಿಸ್​-ಅಮೆರಿಕ ಉಪಾಧ್ಯಕ್ಷೆ
ಲಿಯೋ ವರಡ್​ಕರ್​-ಐರ್ಲ್ಯಾಂಡ್​ನ ಉದ್ಯಮ, ಉದ್ದಿಮೆ ಮತ್ತು ಉದ್ಯೋಗ ಸಚಿವರು
ರಿಶಿ ಸುನಾಕ್- ಇಂಗ್ಲೆಂಡ್ ವರಮಾನ ಇಲಾಖೆಯ ಚಾನ್ಸಲರ್
ಪ್ರೀತಿ ಪಟೇಲ್​- ಇಂಗ್ಲೆಂಡ್​ ಗೃಹ ಕಾರ್ಯದರ್ಶಿ
ಅಲೋಕ್​ ಶರ್ಮಾ-ಯುಕೆಯ COP 26 ಅಧ್ಯಕ್ಷ
ನೀರಾ ಟಂಡೆನ್​-ಅಮೆರಿಕದ ನಿರ್ವಹಣೆ ಮತ್ತು ಬಜೆಟ್​ ಆಫೀಸ್​ ನಿರ್ದೇಶಕರು
ಕೆ.ಷಣ್ಮುಗಂ- ಸಿಂಗಪುರ ಗೃಹ ಹಾಗೂ ಕಾನೂನು ಸಚಿವ
ಹರ್ಜಿತ್​ ಸಜ್ಜನ್​-ಕೆನಡಾ ರಕ್ಷಣಾ ಸಚಿವ
ಅನಿತಾ ಆನಂದ್​-ಕೆನಡಾ ಸಾರ್ವಜನಿಕ ಸೇವೆ ಇಲಾಖೆ ಸಚಿವರು
ವಿವಿಯನ್ ಬಾಲಕೃಷ್ಣನ್​-ಸಿಂಗಪುರ ವಿದೇಶಾಂಗ ವ್ಯವಹಾರಗಳ ಸಚಿವ
ಪ್ರಿಯಾಂಕಾ ರಾಧಾಕೃಷ್ಣನ್​-ನ್ಯೂಜಿಲ್ಯಾಂಡ್ ಸಚಿವರು

ಇದನ್ನೂ ಓದಿ: Ayodhya Ram Mandir | ರಾಮಮಂದಿರ ನಿರ್ಮಾಣಕ್ಕೆ.. ಸಿದ್ದರಾಮಯ್ಯ ಸಹೋದರನಿಂದ ದೇಣಿಗೆ