ಚಂದ್ರಯಾನ-3 (Chandrayaana-3) ಯಶಸ್ಸಿನ ಖುಷಿಯಲ್ಲಿ ದೇಶ ತೇಲಾಡುತ್ತಿದೆ. ಈ ಸಕ್ಸಸ್ ಬಳಿಕ ಭಾರತ ಮತ್ತೊಂದು ಸಾಧನೆ ಮಾಡಲು ಇಸ್ರೋ ಮುಂದಾಗಿದೆ. ಹೌದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ದೇಶದ ಜನತೆಗೆ ಮತ್ತೊಂದು ಸಿಹಿ ಸುದ್ದಿ ನೀಡಲು ಸಜ್ಜಾಗಿದೆ. ಚಂದ್ರಯಾನ ಸಕ್ಸಸ್ ಬೆನ್ನಲ್ಲೇ ಸೂರ್ಯಯಾನಕ್ಕೆ ಇಸ್ರೋ ತಯಾರಾಗಿದೆ. ಭಾಸ್ಕರನ ಅಧ್ಯಯನ ಮಾಡುವ ಉದ್ದೇಶದಿಂದ ಇಸ್ರೋ ಆದಿತ್ಯ ಎಲ್-1 (Aditya L1) ನೌಕೆಯನ್ನು ಇಂದು (ಸೆಪ್ಟೆಂಬರ್ 2) ರಂದು ಬೆಳಿಗ್ಗೆ 11.50ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಿದೆ. ಈ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಲು ಇಸ್ರೋ ಹೊರಟಿದೆ.
ಇನ್ನು ಈ ಉಡಾವಣೆಯನ್ನು ಸಾರ್ವಜನಿಕರು ಕೂಡ ನೇರವಾಗಿ ವೀಕ್ಷಣೆ ಮಾಡಬಹುದು. ಇಂದು ಬೆಳಿಗ್ಗೆ 11.50ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳುವ ಆದಿತ್ಯ ಎಲ್ -1 ಅನ್ನು ಲಾಂಚ್ ವೀವ್ ಗ್ಯಾಲರಿಯಿಂದ್ ನೇರವಾಗಿ ವಿಕ್ಷಿಸಲು ಇಸ್ರೋ ಸಾರ್ವಜನಿಕರಿಗೆ ಅವಕಾಶ ನೀಡಿದೆ. ಇದಕ್ಕೆ ಇಸ್ರೋ ವೆಬ್ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ಆದಿತ್ಯ ಎಲ್-1 ನೌಕೆ ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ ಅಂದ್ರೆ 15 ಲಕ್ಷ ಕಿಲೋ ಮೀಟರ್ ತೆರಳಲಿದೆ. ಈ ಮೂಲಕ ಅತಿಹೆಚ್ಚು ದೂರ ಪ್ರಯಾಣ ಮಾಡಲಿರುವ ಭಾರತದ ಮೊಟ್ಟ ಮೊದಲ ನೌಕೆ ಎಂಬ ಹೆಗ್ಗಳಿಕೆಯೂ ಆದಿತ್ಯ-ಎಲ್ 1 ಪಾತ್ರವಾಗಲಿದೆ. ಈ ಎಲ್-1 ಪಾಯಿಂಟ್ ಪ್ರದೇಶದಲ್ಲಿ ಭೂಮಿ ಕಕ್ಷೆಗಳ ಗುರುತ್ವಾಕರ್ಷಣೆ ಬಲ ಇರುವುದಿಲ್ಲ. ಭೂಕಕ್ಷೆಯನ್ನು ದಾಟಿದ ಬಳಿಕ ಇದನ್ನು ಎಲ್-1ನ ಹೊರಗಿರುವ ದೊಡ್ಡ ಹಾಲೋ ಆರ್ಬಿಟ್‌ಗೆ ನೌಕೆಯನ್ನು ಸೇರಿಸಲಾಗುತ್ತದೆ. ಆದಿತ್ಯ-ಎಲ್1 ಯೋಜನೆಯ ಅವಧಿ ಭರ್ತಿ ನಾಲ್ಕು ತಿಂಗಳು ಇರಲಿದೆ. ಅಂದರೇ 120 ರಿಂದ 125 ದಿನಗಳು. ಇದು ಜನೆವರಿ ಮೊದಲ ವಾರದಲ್ಲಿ ನಿರೀಕ್ಷಿತ ಕಕ್ಷೆ ಅಂದರೇ ಎಲ್-1 ಗೆ ಸೇರುವ ಸಾಧ್ಯತೆ ಇದೆ.
ಇದನ್ನೂ ಓದಿ: ಆದಿತ್ಯ L1 ಮಿಷನ್‌ನ ವೆಚ್ಚ ಎಷ್ಟು? ಗುರಿಗಳೇನು ಎಂಬುದನ್ನು ಸರಳ ಪದಗಳಲ್ಲಿ ಅರ್ಥಮಾಡಿಕೊಳ್ಳಿ
ಸೂರ್ಯನ ಮೇಲಿನ ವಾತಾವರಣ ಅಧ್ಯಯನವೇ ಇದರ ಪ್ರಮುಖ ಗುರಿಯಾಗಿದೆ. ಕೊರೊನಾ ಅಂದರೇ ಸೂರ್ಯನ ಮೇಲ್ಮೈ ಭಾಗ ಹಾಗೂ ಕ್ರೋಸ್ಮೋಸ್ಪಿಯರ್ ಅಂದರೇ ಸೂರ್ಯನ ಮದ್ಯಭಾಗ ಮತ್ತು ಪೋಟೋಸ್ಪಿಯರ್ ಸೂರ್ಯನ ಕೇಳಭಾಗ ಪ್ರದೇಶವನ್ನು ಅಧ್ಯಯನ ಮಾಡಲು ಇಸ್ರೋ ಸಜ್ಜಾಗಿದೆ.
ಸೂರ್ಯನ ಕೊರೊನಾ ಭಾಗ ಸಾಕಷ್ಟು ವಿಸ್ಮಯಗಳಿಂದ ಕೂಡಿದ್ದು ಇದರ ಇಂಚಿಂಚು ಮಾಹಿತಿಯನ್ನು ಜಗತ್ತಿಗೆ ತಿಳಿಸಲು ಇಸ್ರೋ ಮುಂದಾಗಿದೆ. ಸೂರ್ಯನ ಕೊರೊನಾ ಬಿಸಿಯಾಗುವ ಬಗ್ಗೆ, ಸೌರ ಮಾರುತ ಹೇಗೆ ಎದ್ದೇಳಲಿದೆ ಎನ್ನುವ ಬಗ್ಗೆ ನೌಕೆ ಅಧ್ಯಯನ ಮಾಡಲಿದೆ. ಹಾಗೆ ಸೂರ್ಯನ ವಾತಾವರಣದ ಅಮೂಲಾಗ್ರ ಅಧ್ಯಯನವನ್ನೂ ಮಾಡಲಿದೆ. ಸೌರ ಮಂಡಲದಲ್ಲಿ ಸೌರ ಗಾಳಿ ಹಂಚಿಕೆಯಾಗುವ ಬಗ್ಗೆ, ತಾಪಮಾನ ಏರುವ ಬಗ್ಗೆ ನೌಕೆ ತಿಳಿದುಕೊಳ್ಳಲಿದೆ. ಒಟ್ಟಾರೆಯಾಗಿ ಇಡೀ ಯೋಜನೆಯ ಮೂಲ ಉದ್ದೇಶ ಸೂರ್ಯನ ಬಗ್ಗೆ ಇನ್ನಷ್ಟು ಆಳವಾಗಿ ತಿಳಿದುಕೊಳ್ಳುವುದಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:43 am, Sat, 2 September 23