ವಂದೇ ಭಾರತ್ ಎಕ್ಸ್‌ಪ್ರೆಸ್​ಗೆ ದಿನಕ್ಕೊಂದು ವಿಘ್ನ, 3ನೇ ದಿನ ಚಕ್ರ ಜಾಮ್‌, ಪ್ರಯಾಣಿಕರು ಶತಾಬ್ದಿಗೆ ಶಿಫ್ಟ್!

| Updated By: ರಮೇಶ್ ಬಿ. ಜವಳಗೇರಾ

Updated on: Oct 08, 2022 | 9:19 PM

ಎರಡು ದಿನಗಳ ಹಿಂದೆ ಜಾನುವಾರುಗಳಿಗೆ ಡಿಕ್ಕಿ ಹೊಡೆದ ದೇಶದ ಅತ್ಯಂತ ಸೂಪರ್‌ಟೆಕ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಮೂರನೇ ದಿನತಾಂತ್ರಿಕ ದೋಷಕ್ಕೀಡಾಗಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್​ಗೆ ದಿನಕ್ಕೊಂದು ವಿಘ್ನ, 3ನೇ ದಿನ ಚಕ್ರ ಜಾಮ್‌, ಪ್ರಯಾಣಿಕರು ಶತಾಬ್ದಿಗೆ ಶಿಫ್ಟ್!
ವಂದೇ ಭಾರತ್ ಎಕ್ಸ್‌ಪ್ರೆಸ್ (ಸಂಗ್ರಹ ಚಿತ್ರ)
Image Credit source: India.com
Follow us on

 ನವದೆಹಲಿ:  ಮೊನ್ನೇ ಮೊನ್ನೇ ಅಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express)​ ರೈಲಿಗೆ ಚಾಲನೆ ನೀಡಿದ್ದರು. ಆದ್ರೆ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ದಿನಕ್ಕೊಂದು ವಿಘ್ನಗಳು ಎದುರಾಗುತ್ತಲೇ ಇವೆ.

ಹೌದು…ಚಾಲನೆ ಕೊಟ್ಟ ಮೊದಲ ದಿನವೇ ಎಮ್ಮೆ ಡಿಕ್ಕಿ ಹೊಡೆದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಾನಿಯಾಗಿತ್ತು. ಬಳಿಕೆ ಎರಡನೇ ದಿನ ಹಸುಗೆ ಡಿಕ್ಕಿ ಹೊಡೆದಿತ್ತು. ಇದೀಗ ಇಂದು(ಅ.08) ಮೂರನೇ ದಿನ ರೈಲಿನ ಚಕ್ರಗಳು ಜಾಮ್ ಆಗಿ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದೆ.

ಇದನ್ನೂ ಓದಿ: ಎಮ್ಮೆಗಳಿಗೆ ಡಿಕ್ಕಿ ಹೊಡೆದು ವಂದೇ ಭಾರತ್ ರೈಲಿನ ಮುಂಭಾಗಕ್ಕೆ ಹಾನಿ; 24 ಗಂಟೆಗಳಲ್ಲಿ ದುರಸ್ತಿ

ಹೌದು….ದೆಹಲಿಯಿಂದ ವಾರಣಸಿಗೆ ತೆರಳುತ್ತಿದ್ದ ರೈಲು 67 ಕಿಲೋ ಮೀಟರ್ ಚಲಿಸಿ ಬುಲಂದ್‌ಶಹರ್ ರೈಲು ನಿಲ್ದಾಣ ತಲುಪುತ್ತಿದ್ದಂತೆ ಚಕ್ರಗಳು ಜಾಮ್ ಆಗಿವೆ. ಚಕ್ರಗಳು ಜಾಮ್ ಆಗಿರುವುದನ್ನು ಗಮನಿಸಿದ ಸಿಬ್ಬಂದಿಗಳು ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಇದರಿಂದ ಅತೀ ದೊಡ್ಡ ಅವಘಡ ತಪ್ಪಿದಂತಾಗಿದೆ. ಬಳಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಿಕರನ್ನು ಶತಾಬ್ದಿ ಎಕ್ಸ್‌ಪ್ರೆಸ್ ರೈಲಿಗೆ ಶಿಫ್ಟ್ ಮಾಡಲಾಯಿತು.

ಬುಲಂದ್‌ಶಹರ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ರೈಲನ್ನು ಸಿಬ್ಬಂದಿ ಚಕ್ರಗಳ ಪರಿಶೀಲನೆ ನಡೆಸಿದರು. ಬಳಿಕ ನಿಗದಿತ ವೇಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು 20 ಕಿಲೋಮೀಟರ್ ದೂರದಲ್ಲಿರುವ ಖುರ್ಜಾ ರೈಲು ನಿಲ್ದಾಣಕ್ಕೆ ತರಲಾಯಿತು.

ಬೆಳಗ್ಗೆ 7.20ಕ್ಕೆ ಬುಲಂದ್‌ಶಹರ್ ನಿಲ್ದಾಣದಲ್ಲಿ ಚಕ್ರ ಸಮಸ್ಯೆಯಿಂದ ರೈಲು ನಿಲ್ಲಿಸಲಾಯಿತು. ಬಳಿಕ ಖುರ್ಜಾ ರೈಲು ನಿಲ್ದಾಣಕ್ಕೆ ತಲುವಾಗ ಮಧ್ಯಾಹ್ನ 12.40 ಆಗಿದೆ. ಇನ್ನು ಖುರ್ಜಾ ರೈಲು ನಿಲ್ದಾಣದಲ್ಲಿ ಪ್ರಯಾಣಿಕರನ್ನು ಶತಾಬ್ದಿ ಎಕ್ಸ್‌ಪ್ರೆಸ್ ರೈಲಿಗೆ ಶಿಫ್ಟ್ ಮಾಡಲಾಯಿತು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ