Rahul Gandhi: ಶನಿವಾರ ರಾಹುಲ್ ಗಾಂಧಿ ಗುಜರಾತ್‌ಗೆ ಭೇಟಿ ಸಾಧ್ಯತೆ

|

Updated on: Jul 04, 2024 | 8:35 PM

ಜುಲೈ 2 ರಂದು ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರ ಹೇಳಿಕೆಯ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿತ್ತು. ಕಾಂಗ್ರೆಸ್ ನಾಯಕರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸದಿರುವ ಹಿನ್ನೆಲೆಯಲ್ಲಿ ಶಕ್ತಿಸಿನ್ಹ್ ಗೋಹಿಲ್ ಅವರು ಗುಜರಾತ್‌ಗೆ ಭೇಟಿ ನೀಡುವಂತೆ ರಾಹುಲ್ ಗಾಂಧಿಗೆ ಮನವಿ ಮಾಡಿದ್ದಾರೆ" ಎಂದು ಹೇಳಿದ್ದಾರೆ.

Rahul Gandhi: ಶನಿವಾರ ರಾಹುಲ್ ಗಾಂಧಿ ಗುಜರಾತ್‌ಗೆ ಭೇಟಿ ಸಾಧ್ಯತೆ
ರಾಹುಲ್ ಗಾಂಧಿ
Follow us on

ಅಹಮದಾಬಾದ್ ಜುಲೈ 04: ಗುಜರಾತಿನಲ್ಲಿ ಬಿಜೆಪಿ (BJP) ಕಾರ್ಯಕರ್ತರೊಂದಿಗೆ ಕಾ ಹಿಂಸಾತ್ಮಕ ಘರ್ಷಣೆಯ ನಂತರ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯನ್ನು ಭಜರಂಗದಳದ ಕಾರ್ಯಕರ್ತರು ಧ್ವಂಸಗೊಳಿಸಿದ್ದರು. ಈ ಪ್ರಕರಣದಲ್ಲಿ ಕಾಂಗ್ರೆಸ್ (Congress) ಪಕ್ಷದ ಐವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ  ನಾಲ್ಕು ದಿನಗಳ ನಂತರ, ರಾಹುಲ್ ಗಾಂಧಿ (Rahul Gandhi) ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಲು ಈ ಶನಿವಾರ ಅಹಮದಾಬಾದ್‌ಗೆ ಭೇಟಿ ನೀಡಬಹುದು ಎಂದು ಗುಜರಾತ್ ಕಾಂಗ್ರೆಸ್ ಗುರುವಾರ ಹೇಳಿದೆ.

ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಶಕ್ತಿಸಿನ್ಹ್ ಗೋಹಿಲ್ ಅವರು ಗುರುವಾರ  ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಿದ್ದಾರೆ. “ಬಿಜೆಪಿ ಗೂಂಡಾಗಳೊಂದಿಗೆ ಧೈರ್ಯದಿಂದ ಹೋರಾಡಿದ” ಸ್ಥಳೀಯ ನಾಯಕರನ್ನು ಭೇಟಿ ಮಾಡಲು ಮತ್ತು ಬೆಂಬಲಿಸಲು ಅಹಮದಾಬಾದ್‌ಗೆ ಭೇಟಿ ನೀಡುವಂತೆ ಗೋಹಿಲ್ ರಾಹುಲ್ ಗಾಂಧಿ ಅವರಲ್ಲಿ ಕೇಳಿಕೊಂಡಿದ್ದಾರೆ. ಗೋಹಿಲ್ ಅವರು ದಿನಾಂಕವನ್ನು ಖಚಿತಪಡಿಸದಿದ್ದರೂ, ಅಹಮದಾಬಾದ್‌ನಲ್ಲಿ ಭಗವಾನ್ ಜಗನ್ನಾಥ ರಥಯಾತ್ರೆಯ ಮುನ್ನಾದಿನದಂದು ಗಾಂಧಿ ಶನಿವಾರ ಭೇಟಿ ನೀಡಬಹುದು ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

ಪೊಲೀಸರು ನಿಷ್ಪಕ್ಷಪಾತವಾಗಿ ನಡೆದುಕೊಳ್ಳದಿದ್ದರೆ ಜುಲೈ 6ರಂದು ಜೈಲ್ ಭರೋ ಚಳವಳಿ ಆರಂಭಿಸುವುದಾಗಿ ಕಾಂಗ್ರೆಸ್ ಹೇಳಿದೆ. ಜುಲೈ 7ರಂದು ಈ ಕಾರ್ಯಕ್ರಮ ನಡೆಸಲು ಪಕ್ಷ ಯೋಜಿಸಬಹುದಿತ್ತು ಎಂದು ಗೋಹಿಲ್ ಹೇಳಿದ್ದಾರೆ. ಆದರೆ ಭಕ್ತರ ಅನುಕೂಲಕ್ಕಾಗಿ ಪಕ್ಷವು ಒಂದು ದಿನ ಮುಂಚಿತವಾಗಿ ಮಾಡಲು ನಿರ್ಧರಿಸಿದೆ. ಈ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಪಕ್ಷದ ನಾಯಕರಿಗೆ ಹಾಜರಾಗುವಂತೆ ತಿಳಿಸಲಾಗಿದೆ.
ಕಳೆದ ದಶಕಗಳಲ್ಲಿ ರಥಯಾತ್ರೆಯು ರಾಜ್ಯದ ಅತಿ ದೊಡ್ಡ ಸಾರ್ವಜನಿಕ ಕಾರ್ಯಕ್ರಮವಾಗಿದ್ದು, 25,000 ಕ್ಕೂ ಹೆಚ್ಚು ಪೋಲಿಸರು ಸುಮಾರು 15 ಕಿ.ಮೀ.ವರೆಗೆ ಹಲವಾರು ಕೋಮು ಸೂಕ್ಷ್ಮ ಪ್ರದೇಶಗಳ ಮೂಲಕ ಹಾದುಹೋಗುವ ಮೆರವಣಿಗೆಯನ್ನು ಕಾವಲು ನಿಯೋಜಿಸಿದ್ದಾರೆ.

ಕಾಂಗ್ರೆಸ್ ನಾಯಕರೊಬ್ಬರು ಸಂದೇಶದಲ್ಲಿ, “ಕಾಂಗ್ರೆಸ್ ನಾಯಕರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸದಿರುವ ಹಿನ್ನೆಲೆಯಲ್ಲಿ ಶಕ್ತಿಸಿನ್ಹ್ ಗೋಹಿಲ್ ಅವರು ಗುಜರಾತ್‌ಗೆ ಭೇಟಿ ನೀಡುವಂತೆ ರಾಹುಲ್ ಗಾಂಧಿಗೆ ಮನವಿ ಮಾಡಿದ್ದಾರೆ” ಎಂದು ಹೇಳಿದ್ದಾರೆ.
ಜುಲೈ 2 ರಂದು ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರ ಹೇಳಿಕೆಯ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿತ್ತು. ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ಗುರಿಯಾಗಿಸಿ, “ತಮ್ಮನ್ನು ಹಿಂದೂಗಳು ಎಂದು ಕರೆದುಕೊಳ್ಳುವವರು ಹಿಂಸಾ ಪ್ರವೃತ್ತಿಯವರು ಎಂದು ರಾಹುಲ್ ಗಾಂಧಿ ಹೇಳಿರುವುದಾಗಿ ಎಂದು ಬಿಜೆಪಿ ಆರೋಪಿಸಿದೆ. ಭಾಷಣದ ಒಂದು ದಿನದ ನಂತರ, ಬಜರಂಗದಳದ ಕಾರ್ಯಕರ್ತರ ಗುಂಪು ಅಹಮದಾಬಾದ್‌ನ ಪಾಲ್ಡಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿ ರಾಜೀವ್ ಗಾಂಧಿ ಭವನವನ್ನು ಧ್ವಂಸಗೊಳಿಸಿತು.
ಸಂಜೆ ನಂತರ, ಕಾಂಗ್ರೆಸ್ ಕಚೇರಿಯ ಹೊರಗೆ ಹೆಚ್ಚಿನ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ಭಾಷಣದ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಜಮಾಯಿಸಿದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಕಲ್ಲು ತೂರಾಟ ನಡೆದಿದ್ದು, ಪೊಲೀಸ್ ಪೇದೆ ಗಾಯಗೊಂಡಿದ್ದಾರೆ.

ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್‌ನ ವಿರೋಧ ಪಕ್ಷದ ನಾಯಕ ಶಹಜಾದ್ ಪಠಾಣ್, ಪ್ರಗತಿಬೆನ್ ನಂದನಿಯಾ ಸೇರಿದಂತೆ 200 ರಿಂದ 250 ಕಾಂಗ್ರೆಸ್ ಮತ್ತು 150 ರಿಂದ 200 ಬಿಜೆಪಿ ಕಾರ್ಯಕರ್ತರ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ಸ್ಥಳೀಯ ಪೊಲೀಸರು ದಾಖಲಿಸಿದ್ದಾರೆ.

ಬಿಜೆಪಿಯ ಯುವ ಮೋರ್ಚಾದ ಅಹಮದಾಬಾದ್ ಮುಖ್ಯಸ್ಥ ವಿನಯ್ ದೇಸಾಯಿ ಆರೋಪದ ಆಧಾರದಲ್ಲಿ ಪಠಾಣ್ ಸೇರಿದಂತೆ 26 ಕಾಂಗ್ರೆಸ್ ನಾಯಕರು ಮತ್ತು ನೂರಾರು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ಧ ಎರಡನೇ ಎಫ್‌ಐಆರ್ ದಾಖಲಿಸಿದ್ದಾರೆ. ಅಹಮದಾಬಾದ್ ಪೊಲೀಸ್ ಕಮಿಷನರ್ ಅವರನ್ನು ಪದೇ ಪದೇ ಭೇಟಿ ಮಾಡಲು ಪ್ರಯತ್ನಿಸಿದರೂ, ಬಿಜೆಪಿ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ನಾಯಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ ಎಂದು ಗೋಹಿಲ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಲೋಕಸಭೆಯಲ್ಲಿ ಮೋದಿ ಮಾಡಿದ ಭಾಷಣದಲ್ಲಿರುವ ತಪ್ಪುಗಳನ್ನು ಉಲ್ಲೇಖಿಸಿ ಸ್ಪೀಕರ್​​ಗೆ ಪತ್ರ ಬರೆದ ಕಾಂಗ್ರೆಸ್

ಯಾವುದೇ “ನಿಷ್ಪಕ್ಷಪಾತ ವರ್ತನೆ” ವಿರುದ್ಧ ಪೊಲೀಸರಿಗೆ ಎಚ್ಚರಿಕೆ ನೀಡಿದ ಗೋಹಿಲ್, ಪೊಲೀಸರ ವಿರುದ್ಧ ಕಾಂಗ್ರೆಸ್ ಸುಪ್ರೀಂಕೋರ್ಟ್‌ಗೆ ಹೋಗಲಿದೆ ಎಂದು ಹೇಳಿದರು. ಕಾಂಗ್ರೆಸ್ ಕಚೇರಿಯನ್ನು ಭಜರಂಗದಳ ಧ್ವಂಸ ಮಾಡಿ ನಂತರ ಬಿಜೆಪಿ ದಾಳಿ ಮಾಡಿದೆ ಎಂದು ಹೇಳಿದರು. “ಅವರ ವಿರುದ್ಧ ವರ್ತಿಸುವ ಬದಲು, ಹಲವಾರು ಪೊಲೀಸರು ನಮ್ಮ ಕೇಂದ್ರ ಕಚೇರಿಗೆ ನುಗ್ಗಿ ನಮ್ಮ ನಾಯಕರನ್ನು ಬಂಧಿಸಿದ್ದಾರೆ. ಅವರು ವಾರಂಟ್ ಇಲ್ಲದೆ ಈ ರೀತಿಯ ಕಚೇರಿಗಳಿಗೆ ಹೇಗೆ ನುಗ್ಗುತ್ತಾರೆ. ಅಂತಹ ಪೊಲೀಸರನ್ನು ಅಮಾನತುಗೊಳಿಸಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ ಎಂದು ಗೋಹಿಲ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ