PM Modi Speech Highlights: 99 ಅಂಕ ಪಡೆದ ಮಗು ರಾಹುಲ್ ಗಾಂಧಿ; ಸದನದಲ್ಲಿ ಪ್ರಧಾನಿ ಮೋದಿ ಲೇವಡಿ
PM Modi Speech in Lok Sabha: ಲೋಕಸಭಾ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ವಂದನಾ ನಿರ್ಣಯವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ. ಈ ವೇಳೆ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸೋಮವಾರದ ಭಾಷಣದಲ್ಲಿ ರಾಹುಲ್ ಗಾಂಧಿ ಹೇಳಿದ ಹಿಂದೂ ಧರ್ಮದ ಕುರಿತಾದ ಹೇಳಿಕೆಯನ್ನೂ ಅವರು ಟೀಕಿಸಿದ್ದಾರೆ.
ನವದೆಹಲಿ: 3ನೇ ಬಾರಿಗೆ ಪ್ರಧಾನಮಂತ್ರಿಯಾದ ಬಳಿಕ ಮೊದಲ ಬಾರಿಗೆ ನರೇಂದ್ರ ಮೋದಿ ಇಂದು ಲೋಕಸಭಾ ಅಧಿವೇಶನದಲ್ಲಿ ಭಾಷಣ ಮಾಡಿದ್ದಾರೆ. ಈ ವೇಳೆ ಪ್ರತಿಪಕ್ಷಗಳು ಮತ್ತು ಕಾಂಗ್ರೆಸ್‌ನ ರಾಹುಲ್ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಸರ್ಕಾರವು ಇಂಡಿಯಾ ಬ್ಲಾಕ್ ಸಂಸದರ ನಿರಂತರ ಘೋಷಣೆಗಳ ನಡುವೆ ‘ತುಷ್ಟೀಕರಣ’ವನ್ನು ಅನುಸರಿಸದೆ ‘ಸಂತುಷ್ಟೀಕರಣ’ವನ್ನು ಅನುಸರಿಸಿದೆ ಎಂದು ಹೇಳಿದ್ದಾರೆ. ಹಾಗೇ, ಕಾಂಗ್ರೆಸ್ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇನ್ನೂ ಮಗು ಎಂದು ಲೇವಡಿ ಮಾಡಿದ್ದಾರೆ.
ತುಷ್ಟೀಕರಣ ರಾಜಕಾರಣವನ್ನು ದೇಶ ಬಹುಕಾಲ ನೋಡಿದೆ. ನಾವು ತುಷ್ಟಿಕರಣವನ್ನಲ್ಲ ’ಸಂತುಷ್ಟಿಕರಣ’ವನ್ನು ಅನುಸರಿಸಿದ್ದೇವೆ. ಎಲ್ಲರಿಗೂ ನ್ಯಾಯ ಎಂಬುದು ನಮ್ಮ ಧ್ಯೇಯ. “ಇದು ಕಾಂಗ್ರೆಸ್‌ನ ಇತಿಹಾಸದಲ್ಲಿ ಮೂರನೇ ಅತಿ ದೊಡ್ಡ ಸೋಲು. ಕಾಂಗ್ರೆಸ್ ತನ್ನ ಸೋಲನ್ನು ಒಪ್ಪಿಕೊಂಡು ಜನರ ಆದೇಶವನ್ನು ಗೌರವಿಸಿದ್ದರೆ ಅದು ಉತ್ತಮವಾಗಿರುತ್ತಿತ್ತು. ಆದರೆ, ಅವರು ಕೆಲವು ‘ಶೀರ್ಷಾಸನ’ ಮಾಡುವಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ನವರೇ ನಮ್ಮನ್ನು ಸೋಲಿಸಿದ್ದಾರೆ ಎಂದು ಭಾರತದ ನಾಗರಿಕರ ಮನಸ್ಸಿನಲ್ಲಿ ಅಭಿಪ್ರಾಯ ಮೂಡಿಸುವ ಹೇಳಿಕೆಗಳನ್ನು ನೀಡುತ್ತಾ ಓಡಾಡುತ್ತಿದ್ದಾರೆ. ಒಟ್ಟಾರೆಯಾಗಿ ಮಗುವಿಗೆ ಮನರಂಜನೆ ನೀಡುವ ಕೆಲಸ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.
ಮಗುವಿನ ಕತೆ ಹೇಳಿದ ಮೋದಿ:
ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು “ಮಗು” ಎಂದು ಬಣ್ಣಿಸಿದ್ದಾರೆ. ರಾಹುಲ್ ಗಾಂಧಿಯನ್ನು ಗುರಿಯಾಗಿಸಲು ಶಾಲಾ ಮಗುವಿನ ಕತೆಯೊಂದನ್ನು ಹೇಳಿದ ಅವರು, ನಮ್ಮ ಈ ಮಗು ಸೋಲಿನಲ್ಲಿ “ಹೊಸ ವಿಶ್ವ ದಾಖಲೆ” ಮಾಡಿದೆ ಎಂದು ತಮಾಷೆ ಮಾಡಿದ್ದಾರೆ.
“1984 ರ ಚುನಾವಣೆಯನ್ನು ನೆನಪಿಸಿಕೊಳ್ಳೋಣ. ಆ ಚುನಾವಣೆಗಳ ನಂತರ ಈ ದೇಶದಲ್ಲಿ 10 ಲೋಕಸಭೆ ಚುನಾವಣೆಗಳು ನಡೆದವು, ಆದರೆ ಒಮ್ಮೆಯೂ ಕಾಂಗ್ರೆಸ್ 250ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಈ ಬಾರಿ ಕಾಂಗ್ರೆಸ್ 99 ಸ್ಥಾನಗಳನ್ನು ಗಳಿಸಿತು. ಇದು ಮಗುವಿನ ಕತೆಯನ್ನು ನೆನಪಿಗೆ ತರುತ್ತದೆ. ಮಗುವೊಂದು ತಾನು 99 ಅಂಕಗಳನ್ನು ಪಡೆದಿದ್ದೇನೆ ಎಂದು ಎಲ್ಲರಿಗೂ ಹೇಳಿಕೊಂಡು ಖುಷಿ ಪಡುತ್ತಿತ್ತು. ಅದನ್ನು ಕೇಳಿ ಎಲ್ಲರೂ ಆ ಮಗುವಿನ ಬೆನ್ನು ತಟ್ಟುತ್ತಿದ್ದರು. ಆಗ ಬಂದ ಟೀಚರ್ ಆ ಮಗುವಿನ ಬಳಿ ನೀನೇಕೆ ಸ್ವೀಟ್ ಹಂಚುತ್ತಿದ್ದೀಯ? ಎಂದು ಕೇಳಿದರು. ವಾಸ್ತವದ ವಿಷಯ ಏನೆಂದರೆ ಆ ಮಗು 100ಕ್ಕೆ 99 ಅಂಕ ಪಡೆದಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆ ಮಗುವಿಗೆ 543ರಲ್ಲಿ 99 ಅಂಕ ಪಡೆದಿತ್ತು. ಆ ಮಗು ವಿಫಲತೆಯನ್ನು ವಿಶ್ವ ದಾಖಲೆ ನಿರ್ಮಿಸಿತ್ತು ಎಂಬುದನ್ನು ಆ ಮಗುವಿಗೆ ಅರ್ಥ ಮಾಡಿಸುವವರು ಯಾರು? ಎಂದು ಮೋದಿ ಹಾಸ್ಯಾಸ್ಪದವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಕಾಲೆಳೆದಿದ್ದಾರೆ.
ಇದನ್ನೂ ಓದಿ: PM Modi Address Parliament Live: ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಲೋಕಸಭೆಯಲ್ಲಿ ಮೋದಿ ಮಾತು
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಗಾಗಿ ದೇಶವು ಎನ್‌ಡಿಎಗೆ ಮತ ಹಾಕಿದೆ. 2047ರ ಭಾರತ ಸಂಪೂರ್ಣವಾಗಿ ಬದಲಾಗಿರಲಿದೆ. ನಾವು ಜನರಿಗಾಗಿ 24 ಗಂಟೆಯೂ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
#WATCH | PM Narendra Modi says, “I remember an incident, there was a boy who scored 99 marks and he used to show it to everyone. When people heard 99, they used to encourage him a lot. Then a teacher came and said why are you distributing sweets? He did not score 99 out of 100… pic.twitter.com/bfYYMKB1id
— ANI (@ANI) July 2, 2024
ಇಂಡಿಯಾ ಬ್ಲಾಕನ್ನು ಕಾಂಗ್ರೆಸ್ ಪರಿಸರ ವ್ಯವಸ್ಥೆ ಎಂದು ಕರೆದ ಪ್ರಧಾನಿ ಮೋದಿ, ಪ್ರತಿಪಕ್ಷಗಳು ಎನ್‌ಡಿಎಯನ್ನು ಸೋಲಿಸಿದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. “ಕಾಂಗ್ರೆಸ್ ಮತ್ತು ಅದರ ಪರಿಸರ ವ್ಯವಸ್ಥೆಯು ನಮ್ಮನ್ನು ಸೋಲಿಸಿದೆ ಎಂದು ಜನರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್‌ಗೆ ಜನರ ಜನಾದೇಶವೆಂದರೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವುದು. ಕಾಂಗ್ರೆಸ್ ಸತತ ಮೂರು ಬಾರಿ 100 ಅಂಕಗಳನ್ನು ದಾಟಲು ಸಾಧ್ಯವಾಗಲಿಲ್ಲ” ಎಂದು ಅವರು ಟೀಕಿಸಿದ್ದಾರೆ.
#WATCH | PM Narendra Modi says, “This is the third biggest defeat in the history of Congress. It would have been better if Congress had accepted its defeat and respected the mandate of the people but they are busy doing some ‘Sirsasana’ and Congress and its ecosystem are trying… pic.twitter.com/G6IsTyZUBV
— ANI (@ANI) July 2, 2024
ಇಂದು ಸದನದಲ್ಲಿ ಪ್ರಧಾನಿ ಮೋದಿ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ‘ಮಣಿಪುರಕ್ಕೆ ನ್ಯಾಯ’ ಎಂದು ಕೂಗಲು ಪ್ರಾರಂಭಿಸಿದರು. ಅಲ್ಲದೆ, ಪ್ರತಿಭಟಿಸಲು ಸದನದ ಬಾವಿಗೆ ಪ್ರವೇಶಿಸಿದರು. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಬಾವಿಗೆ ಪ್ರವೇಶಿಸಲು ಸೂಚಿಸಿದ್ದಕ್ಕಾಗಿ ಕಿಡಿಕಾರಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ