PM Modi on Motion of Thanks: ಹಿಂದೂಗಳ ವಿರುದ್ಧ ಸುಳ್ಳು ಆರೋಪ ಹೊರಿಸಲು ಸಂಚು ರೂಪಿಸಲಾಗುತ್ತಿದೆ: ಪ್ರಧಾನಿ ಮೋದಿ

ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ "ಹಿಂದೂಗಳ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲು ಪಿತೂರಿ ನಡೆಸಲಾಗುತ್ತಿದೆ.ಅವರ ಪರಿಸರ ವ್ಯವಸ್ಥೆಯು ಹಿಂದೂ ಸಂಸ್ಕೃತಿಯನ್ನು ಕೆಡಿಸುವುದು, ಗೇಲಿ ಮಾಡುವುದು. ಇದು ಅವರಿಗೆ ಒಂದು ಫ್ಯಾಷನ್" ಎಂದು ಹೇಳಿದ್ದಾರೆ.

PM Modi on Motion of Thanks: ಹಿಂದೂಗಳ ವಿರುದ್ಧ ಸುಳ್ಳು ಆರೋಪ ಹೊರಿಸಲು ಸಂಚು ರೂಪಿಸಲಾಗುತ್ತಿದೆ: ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us
|

Updated on: Jul 02, 2024 | 7:05 PM

ದೆಹಲಿ ಜುಲೈ 02 : ನಿನ್ನೆ (ಸೋಮವಾರ) ಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿ (Rahul Gandhi) ಹಿಂದೂಗಳನ್ನು ಹಿಂಸಾ ಪ್ರವೃತ್ತಿಯವರು ಎಂದು ಕರೆದಿದ್ದಾರೆ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ(Narendra Modi)  ಇಂದು(ಮಂಗಳವಾರ) ಲೋಕಸಭೆಯಲ್ಲಿ (Lok sabha)  ಮತ್ತೆ ಅದೇ ವಿಷಯವನ್ನು ಪುನರಾನರ್ತಿಸಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಸದನವನ್ನುದ್ದೇಶಿಸಿ ಮಾತನಾಡಿದ ಮೋದಿ “ಹಿಂದೂಗಳ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲು ಪಿತೂರಿ ನಡೆಸಲಾಗುತ್ತಿದೆ.ಅವರ ಪರಿಸರ ವ್ಯವಸ್ಥೆಯು ಹಿಂದೂ ಸಂಸ್ಕೃತಿಯನ್ನು ಕೆಡಿಸುವುದು, ಗೇಲಿ ಮಾಡುವುದು. ಇದು ಅವರಿಗೆ ಒಂದು ಫ್ಯಾಷನ್” ಎಂದು ಹೇಳಿದ್ದಾರೆ.

ಲೋಕಸಭೆಗೆ ದೇವರ ಚಿತ್ರಗಳನ್ನು ಕೊಂಡೊಯ್ದಿದ್ದಕ್ಕಾಗಿ ಕಾಂಗ್ರೆಸ್ ನಾಯಕನನ್ನು ಟೀಕಿಸಿದ ಪ್ರಧಾನಿ ಮೋದಿ “ದೇವರ ಚಿತ್ರಗಳನ್ನು ವೈಯಕ್ತಿಕ ರಾಜಕೀಯ ಹಿತಾಸಕ್ತಿಗಳಿಗೆ ಬಳಸಲಾಗುವುದಿಲ್ಲ” ಎಂದು ಹೇಳಿದರು. ಅವರು ‘ಹಿಂದೂ ಭಯೋತ್ಪಾದನೆ’ಯಂತಹ ಪದಪುಂಜಗಳನ್ನು ಹುಟ್ಟುಹಾಕಿದ್ದಾರೆ. ಅವರ ಮಿತ್ರ ಪಕ್ಷ ಈ ಧರ್ಮವನ್ನು ಡೆಂಗ್ಯೂಗೆ ಹೋಲಿಸಿದೆ. ದೇಶ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದಿದ್ದಾರೆ ಮೋದಿ.

ಪ್ರಧಾನಿ ಭಾಷಣ ಆರಂಭಿಸುತ್ತಿದ್ದಂತೆಯೇ ಸಂಸದರು ಜೋರಾಗಿ “ಮಣಿಪುರ, ಮಣಿಪುರ”, “ತನಾಶಾಹಿ ನಹಿಂ ಚಲೇಗಿ (ನಾವು ಸರ್ವಾಧಿಕಾರಕ್ಕೆ ಅವಕಾಶ ನೀಡುವುದಿಲ್ಲ)” ಮತ್ತು “ಮಣಿಪುರಕ್ಕೆ ನ್ಯಾಯ ಬೇಕು” ಎಂದು ಘೋಷಣೆ ಕೂಗಿದ್ದಾರೆ.

ಗದ್ದಲದ ನಡುವೆಯೇ ಭಾಷಣ ಮುಂದುವರಿಸಿದ ಮೋದಿ “ಕೆಲವರ ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಸುಳ್ಳುಗಳನ್ನು ಹರಡಿದ ನಂತರವೂ ಅವರು ಸೋಲಿನ ರುಚಿಯನ್ನು ಅನುಭವಿಸಿದರು. ಭಾರತದ ಜನರು ನಮಗೆ ಮೂರನೇ ಬಾರಿಗೆ ಕೆಲಸ ಮಾಡುವ ಅವಕಾಶವನ್ನು ನೀಡಿದ್ದಾರೆ. ಜನರು ನಮಗೆ ಜನಾದೇಶ ನೀಡಿದ್ದಾರೆ. ಅವರು ನಮ್ಮ 10 ವರ್ಷಗಳ ದಾಖಲೆಯನ್ನು ನೋಡಿದ್ದಾರೆ. 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಸ್ವಾತಂತ್ರ್ಯದ ನಂತರ ಇದು ಎಂದಿಗೂ ಸಂಭವಿಸಿಲ್ಲ ಎಂದು ಹೇಳಿದ್ದಾರೆ.

ಅದೇ ವೇಳೆ ಪ್ರಧಾನಿಯವರು ತಮ್ಮ ಭಾಷಣದಲ್ಲಿ ಅಲ್ಪಸಂಖ್ಯಾತರ ಓಲೈಕೆ, ಯುಪಿಎ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರ, ಜಮ್ಮು ಮತ್ತು ಕಾಶ್ಮೀರ, ಆರ್ಟಿಕಲ್ 370 ಮತ್ತು ಭಯೋತ್ಪಾದಕರ ವಿರುದ್ಧ ಸರ್ಜಿಕಲ್ ಸ್ಟ್ರೈಕ್‌ಗಳ ಬಗ್ಗೆಯೂ ಮಾತನಾಡಿದ್ದಾರೆ.

ಪ್ರಧಾನಿ ಮೋದಿ ಮಾತು ಮುಂದುವರಿಸುತ್ತಿದ್ದಂತೆ ಪ್ರತಿಭಟನೆಯ ಕಾವು ಹೆಚ್ಚಾಯಿತು. ಪ್ರತಿಪಕ್ಷಗಳಿಗೆ ಎಚ್ಚರಿಕೆ ನೀಡಿದ ಸ್ಪೀಕರ್ ಓಂ ಬಿರ್ಲಾ, “ನಿನ್ನೆ  ನಾನು ನಿಮಗೆ 90 ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಿದ್ದೇನೆ. ಯಾರೂ ನಿಮ್ಮನ್ನು ತಡೆಯಲಿಲ್ಲ. ಈ ರೀತಿ ವರ್ತನೆ ಸರಿಯಲ್ಲ. ಐದು ವರ್ಷ ಇದೇ ರೀತಿ ಇರುವುದಿಲ್ಲ ಎಂದು ಹೇಳಿದ್ದಾರೆ.

ಇತ್ತ ಭಾಷಣಕ್ಕೆ ವಿಪಕ್ಷಗಳು ಅಡ್ಡಿಪಡಿಸಿದರೂ ಅದನ್ನು ಲೆಕ್ಕಿಸದ ಮೋದಿ, ಜನರ ಜನಾದೇಶವನ್ನು ಓದಲು ಪ್ರಯತ್ನಿಸಿ. ನೀವು ವಿರೋಧ ಪಕ್ಷದಲ್ಲಿದ್ದೀರಿ ಮತ್ತು ನೀವು ಪ್ರತಿಪಕ್ಷದಲ್ಲಿ ಉಳಿಯುತ್ತೀರಿ.  2024 ರಿಂದ, ಕಾಂಗ್ರೆಸ್ ಅನ್ನು ‘ಪರಾವಲಂಬಿ ಕಾಂಗ್ರೆಸ್’ ಎಂದು ಕರೆಯಲಾಗುತ್ತದೆ. ಅವರು ಇತರ ಪಕ್ಷಗಳ ಮತಗಳನ್ನು ತಿನ್ನುತ್ತಾರೆ. ಅವರು ಅವರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೆ. ಅವರ ಮತಗಳನ್ನು ಕಡಿತಗೊಳಿಸುತ್ತಾರೆ ಎಂದು ಹೇಳಿದ್ದಾರೆ.

ನಂತರ ಅವರು ಬಾಲಿವುಡ್ ಬ್ಲಾಕ್‌ಬಸ್ಟರ್ ಶೋಲೆ ಸಿನಿಮಾ ಉಲ್ಲೇಖಿಸಿ, ಆ ಸಿನಿಮಾದ ದೃಶ್ಯವೊಂದರಲ್ಲಿ ಅಮಿತಾಭ್ ಬಚ್ಚನ್ ಅವರು ತಮ್ಮ ಸ್ನೇಹಿತನ ಭಾವೀ ಅತ್ತೆ ಪರ ‘ವಕಾಲತ್ತು’ ವಹಿಸುತ್ತಿದ್ದರು ಎಂದಿದ್ದಾರೆ.

ಇದನ್ನೂ ಓದಿ: PM Modi Speech Highlights: 99 ಅಂಕ ಪಡೆದ ಮಗು ರಾಹುಲ್ ಗಾಂಧಿ; ಸದನದಲ್ಲಿ ಪ್ರಧಾನಿ ಮೋದಿ ಲೇವಡಿ

ರಾಹುಲ್ ಗಾಂಧಿಯ ಹೆಸರನ್ನು ಉಲ್ಲೇಖಿಸದೆ, ಪ್ರಧಾನಿ ಮೋದಿ  ಕಾಂಗ್ರೆಸ್ ನಾಯಕನ್ನು “ಬಾಲಕಬುದ್ಧಿ (ಅಪ್ರಬುದ್ಧ)” ಎಂದು ಉಲ್ಲೇಖಿಸಿದರು, “ಅವರಿಗೆ ಅವರ ಮಿತಿಗಳು ತಿಳಿದಿಲ್ಲ” ಎಂದು ಹೇಳಿ ಸಂಸತ್ತಿನಲ್ಲಿ ಅವರು ಕಣ್ಣು ಮಿಟುಕಿಸುತ್ತಿರುವಾಗ ಕ್ಯಾಮೆರಾದಲ್ಲಿ ಸೆರೆಯಾದ ಘಟನೆಯನ್ನು ಉಲ್ಲೇಖಿಸಿದರು. “ಅವರು ಇಲ್ಲಿದ್ದಾರೆ ಎಂದು ದೇಶವು ಈಗ ವಿಷಾದಿಸುತ್ತಿದೆ.ಜುಲೈ 1 ರಂದು ದೇಶವು ‘ಖಟಾಖಟ್ ದಿವಸ್’ ಆಚರಿಸಿತು. ಜನರು ತಮ್ಮ ಬ್ಯಾಂಕ್ ಖಾತೆಗಳಲ್ಲಿ ₹ 8500 ಪಡೆದಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದರು ಎಂದು ಮೋದಿ ರಾಹುಲ್ ಗಾಂಧಿಯನ್ನು ಲೇವಡಿ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ರಾತ್ರಿ ಆದ್ರೂ ಜನಸಾಗರ ಕಂಡು ಕೈ ಎತ್ತಿ ಮುಗಿದ ರೋಹಿತ್, ಕೊಹ್ಲಿ
ರಾತ್ರಿ ಆದ್ರೂ ಜನಸಾಗರ ಕಂಡು ಕೈ ಎತ್ತಿ ಮುಗಿದ ರೋಹಿತ್, ಕೊಹ್ಲಿ
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಮುಂಬೈನಲ್ಲಿ ಜನಸಾಗರ ಮಧ್ಯೆ ಕಪ್ ಹಿಡಿದು ಕುಣಿದ ಬ್ಯೂ ಬಾಯ್ಸ್: ವಿಡಿಯೋ ನೋಡಿ
ಮುಂಬೈನಲ್ಲಿ ಜನಸಾಗರ ಮಧ್ಯೆ ಕಪ್ ಹಿಡಿದು ಕುಣಿದ ಬ್ಯೂ ಬಾಯ್ಸ್: ವಿಡಿಯೋ ನೋಡಿ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ಶ್ರೀರಾಮ ಮಂದಿರ ಮೇಲ್ಚಾವಣಿ ಸೋರಿಕೆಗೆ ಪೇಜಾವರಶ್ರೀ ಸ್ಪಷ್ಟನೆ
ಶ್ರೀರಾಮ ಮಂದಿರ ಮೇಲ್ಚಾವಣಿ ಸೋರಿಕೆಗೆ ಪೇಜಾವರಶ್ರೀ ಸ್ಪಷ್ಟನೆ