PM Modi Address Parliament: 370ನೇ ವಿಧಿ ಜಮ್ಮು ಕಾಶ್ಮೀರದಲ್ಲಿ ಜನರ ಹಕ್ಕುಗಳನ್ನು ಕಸಿದುಕೊಂಡಿದೆ: ಲೋಕಸಭೆಯಲ್ಲಿ ಪ್ರಧಾನಿ ಮೋದಿ

Parliament Session 2024, PM Modi Speech:ಲೋಕಸಭೆಯಲ್ಲಿ ಸಂಜೆ 4 ಗಂಟೆಗೆ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯಕ್ಕೆ ಪ್ರಧಾನಿ ಪ್ರತ್ಯುತ್ತರ ನೀಡಿ ಭಾಷಣ ಮಾಡಿದ್ದಾರೆ. ಎನ್‌ಡಿಎ ಇಂದು ಸಭೆಯನ್ನು ನಡೆಸಿದ್ದು, ಇದರಲ್ಲಿ ಪ್ರಧಾನಿ ಮೋದಿ ಅವರು ಸಂಸತ್ತಿನ ನಿಯಮಗಳು ಮತ್ತು ಸಂಪ್ರದಾಯಗಳನ್ನು ಅನುಸರಿಸುವಂತೆ ಎನ್‌ಡಿಎ ಸಂಸದರಿಗೆ ಸೂಚನೆ ನೀಡಿದ್ದಾರೆ.

PM Modi Address Parliament: 370ನೇ ವಿಧಿ ಜಮ್ಮು ಕಾಶ್ಮೀರದಲ್ಲಿ ಜನರ ಹಕ್ಕುಗಳನ್ನು ಕಸಿದುಕೊಂಡಿದೆ: ಲೋಕಸಭೆಯಲ್ಲಿ ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Jul 02, 2024 | 5:27 PM

ದೆಹಲಿ ಜುಲೈ 02: ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ(Motion of Thanks )ಮೇಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು(ಮಂಗಳವಾರ) ಲೋಕಸಭೆಯಲ್ಲಿ (Lok Sabha) ಭಾಷಣ ಮಾಡಿದ್ದಾರೆ. ಮೋದಿ ಭಾಷಣ ಆರಂಭಿಸುತ್ತಿದ್ದಂತೆ ವಿಪಕ್ಷಗಳು ಮಣಿಪುರ, ಮಣಿಪುರ, ವೀ ವಾಂಟ್ ಜಸ್ಟೀಸ್ ಎಂದು ಘೋಷಣೆ ಕೂಗಿ ಭಾಷಣಕ್ಕೆ ಅಡ್ಡಿಪಡಿಸಿವೆ. ಗದ್ದಲದ ನಡುವೆಯೇ ಭಾಷಣ ಆರಂಭಿಸಿದ ಮೋದಿ,  ಅನೇಕ ಗೌರವಾನ್ವಿತ ಸದಸ್ಯರು ರಾಷ್ಟ್ರಪತಿ ಭಾಷಣ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ವಿಶೇಷವಾಗಿ ಮೊದಲ ಬಾರಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದವರು ಸಂಸತ್ತಿನ ನಿಯಮಗಳನ್ನು ಅನುಸರಿಸಿ ಸದನದ ಹಿರಿಯ ಸದಸ್ಯರಂತೆ ವರ್ತಿಸಿದರು. ಅವರು ಸದನದ ಘನತೆಯನ್ನು ಹೆಚ್ಚಿಸಿದ್ದಾರೆ. ಇದು ವಿಶ್ವದ ಅತಿ ದೊಡ್ಡ ಚುನಾವಣೆ ಎಂಬುದನ್ನು ದೇಶ ಜಗತ್ತಿಗೆ ತೋರಿಸಿದೆ ಎಂದು ಹೇಳಿದ್ದಾರೆ.

ವಿಶ್ವದ ಅತಿದೊಡ್ಡ ಚುನಾವಣೆಗಳಲ್ಲಿ” ಗೆಲುವು ಸಾಧಿಸಿದ್ದಕ್ಕಾಗಿ ನರೇಂದ್ರ ಮೋದಿ ಅವರು ತಮ್ಮ ಪಕ್ಷ ಮತ್ತು ಎನ್‌ಡಿಎಯನ್ನು ಶ್ಲಾಘಿಸಿದ್ದಾರೆ. “ಸುಳ್ಳುಗಳನ್ನು ಹರಡಲು ಎಷ್ಟು ಪ್ರಯತ್ನ ಮಾಡಿದರೂ ಅವರು ಸೋತರು ಎಂಬ ಕೆಲವರ (ವಿರೋಧ) ನೋವು ನನಗೆ ಅರ್ಥವಾಗಿದೆ. ಜನರು ನಮ್ಮನ್ನು ಮೂರನೇ ಅವಧಿಗೆ ಆಯ್ಕೆ ಮಾಡಿದ್ದಾರೆ ಎಂಬುದು ಹೆಮ್ಮೆಯ ವಿಷಯ” ಎಂದು ಅವರು ಹೇಳಿದರು.

ತುಷ್ಟೀಕರಣದ ರಾಜಕೀಯ ಮತ್ತು ಆಡಳಿತ ಮಾದರಿಯನ್ನು ದೇಶವು ದೀರ್ಘಕಾಲದವರೆಗೆ ನೋಡಿದೆ. ನಮ್ಮ ನೀತಿಯು ಯಾರನ್ನೂ ಓಲೈಸುವುದಿಲ್ಲ.  ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟದಲ್ಲಿ ನಾವು ಉತ್ತಮ ರೀತಿಯಲ್ಲಿ ಸಾರ್ವಜನಿಕ ಬೆಂಬಲವನ್ನು ಗಳಿಸಿದ್ದೇವೆ, ಇದು ಭಾರತ ಮೊದಲು ಎಂಬ ಒಂದೇ ಉದ್ದೇಶದಿಂದ ಕೂಡಿದ್ದಾಗಿತ್ತು  ಎಂದು ಲೋಕಸಭೆಯಲ್ಲಿ ಮಾತನಾಡಿದ ಮೋದಿ ಹೇಳಿದ್ದಾರೆ.

ಕೇಂದ್ರದ ನೀತಿಗಳು ಮತ್ತು ಆಡಳಿತದ ಸೂತ್ರವೇ ಭಾರತ ಮೊದಲು ಎಂಬುದು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಘೋಷಣೆಯನ್ನು ಪುನರುಚ್ಚರಿಸಿದ ಮೋದಿ ಭ್ರಷ್ಟಾಚಾರದ ವಿರುದ್ಧ ಎನ್‌ಡಿಎ ಸರ್ಕಾರದ ಹೋರಾಟವನ್ನು ಎತ್ತಿ ತೋರಿಸಿದರು.

ಮಣಿಪುರಕ್ಕೆ ನ್ಯಾಯಕ್ಕಾಗಿ ಒತ್ತಾಯಿಸಿ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣವನ್ನು ಮುಂದುವರಿಸುತ್ತಿದ್ದಂತೆಯೇ ಪ್ರತಿಪಕ್ಷದ ಸದಸ್ಯರು ಸದನದ ಬಾವಿಗೆ ನುಗ್ಗಿದ್ದು, ‘ಸರ್ವಾಧಿಕಾರವನ್ನು ಸಹಿಸುವುದಿಲ್ಲ’ ಎಂಬ ಘೋಷಣೆಗಳನ್ನು ಕೂಗುತ್ತಾ, ಮಣಿಪುರದ ಬಗ್ಗೆ ಚರ್ಚೆಗೆ ಒತ್ತಾಯಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ. ಸ್ಪೀಕರ್ ಓಂ ಬಿರ್ಲಾ ಅವರು ಸದನಕ್ಕೆ ಸುವ್ಯವಸ್ಥೆ ತರಲು ಮಾಡಿದ ಪ್ರಯತ್ನ ವ್ಯರ್ಥವಾಗಿದ್ದು, ಭಾಷಣವನ್ನು ಸಂಕ್ಷಿಪ್ತವಾಗಿ ಮುಗಿಸುವಂತೆ ಸ್ಪೀಕರ್ ಮೋದಿ ಅವರಲ್ಲಿ ಒತ್ತಾಯಿಸಿದ್ದಾರೆ.

ಭಾರತವು ಈಗ ವಿಶ್ವ ವೇದಿಕೆಯಲ್ಲಿ ಗೌರವವನ್ನು ಪಡೆಯುತ್ತಿದೆ. ತಮ್ಮ ಸರ್ಕಾರವು ದೇಶ ಮತ್ತು ಅದರ ಜನರ ವಿಶ್ವಾಸವನ್ನು ಗಳಿಸಲು ಸಹಾಯ ಮಾಡಿದೆ. ಅಭಿವೃದ್ಧಿ ಹೊಂದಿದ ದೇಶ ಎಂದರೆ ಪ್ರತಿಯೊಬ್ಬ ನಾಗರಿಕರಿಗೆ ಸಾಕಷ್ಟು ಅವಕಾಶಗಳು ಲಭ್ಯವಿರುತ್ತವೆ. ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಗಾಗಿ ದೇಶವು ನಮ್ಮನ್ನು ಆಶೀರ್ವದಿಸಿದೆ. ಇಂದು ವಿಶ್ವದಾದ್ಯಂತ ಭಾರತದ ವಿಶ್ವಾಸಾರ್ಹತೆ ಹೆಚ್ಚಿದೆ. ನಮ್ಮ ಪ್ರತಿಯೊಂದು ನೀತಿ, ಪ್ರತಿ ನಿರ್ಧಾರ, ಪ್ರತಿಯೊಂದು ಕ್ರಿಯೆಯ ಏಕೈಕ ಗುರಿ ಭಾರತವೇ ಮೊದಲು” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

2014ಕ್ಕೂ ಮೊದಲು ಕಲ್ಲಿದ್ದಲು ಹಗರಣಗಳು ಹಲವರ ಕೈಗೆ ಕಪ್ಪುಚುಕ್ಕೆ ತಂದಿತ್ತು. ಒಂದು ಕಾಲದಲ್ಲಿ ಫೋನ್ ಬ್ಯಾಂಕಿಂಗ್ ಮೂಲಕ ವಂಚನೆಗಳು ನಡೆಯುತ್ತಿದ್ದವು. 2014 ರ ನಂತರ ನೀತಿಗಳು ಬದಲಾದವು, ಕೆಲಸದ ವೇಗವು ಬದಲಾಯಿತು. ಇಂದು, ಭಾರತದ ಬ್ಯಾಂಕುಗಳು ಗರಿಷ್ಠ ಲಾಭವನ್ನು ಗಳಿಸುತ್ತಿವೆ. 2014 ರ ಮೊದಲು ಭಯೋತ್ಪಾದಕರು ಇಚ್ಛೆಯಂತೆ ದಾಳಿ ಮಾಡುವ ಸಮಯವಿತ್ತು. ಸರ್ಕಾರಗಳು ಮತ್ತು ಇಂದು ಹಿಂದೂಸ್ತಾನ್ ಘರ್ ಮೇ ಘುಸ್ ಕೆ ಮಾರ್ತಾ ಹೈ. ಇದು ಸರ್ಜಿಕಲ್ ಸ್ಟ್ರೈಕ್‌ಗಳನ್ನು ಮಾಡುತ್ತದೆ ಮತ್ತು ಭಯೋತ್ಪಾದಕರನ್ನು ನಿಭಾಯಿಸುವವರಿಗೆ ಪಾಠ ಕಲಿಸುತ್ತದೆ.

ಇದನ್ನೂ ಓದಿ: ಬಿಜೆಪಿಯ 400 ಪಾರ್ ಘೋಷಣೆಯನ್ನು ಲೇವಡಿ ಮಾಡಿದ ಟಿಎಂಸಿ ಸಂಸದ, ವಿಡಿಯೊ ವೈರಲ್

ತಮ್ಮ ಸರ್ಕಾರದ ಕ್ರಮಗಳು ಮತ್ತು ಯೋಜನೆಗಳನ್ನು ಶ್ಲಾಘಿಸಿದ ಮೋದಿ,  ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಪಕ್ಷಗಳು ಸಂವಿಧಾನವನ್ನು ತರಲು ಸಾಧ್ಯವಿಲ್ಲ ಎಂದು ಎತ್ತಿ ತೋರಿಸಿದರು, 370 ನೇ ವಿಧಿ ಜನರ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ಹೇಳಿದರು.

“ಈಗ ಸಂವಿಧಾನದ ಜೊತೆಗೆ ನರ್ತಿಸುವ ಜನರು ಅದನ್ನು ಅಲ್ಲಿ ಅನ್ವಯಿಸಲು ಧೈರ್ಯ ಮಾಡಲಿಲ್ಲ. ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಯಿತು. ಜನರು ಏನೂ ಆಗುವುದಿಲ್ಲ ಎಂದು ಹೇಳಿದರು. 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಕಲ್ಲು ತೂರಾಟ ನಿಂತೇ ಹೋಯಿತು.  ಜನರು ಭಾರತದ ಸಂವಿಧಾನ, ಧ್ವಜ ಮತ್ತು ಪ್ರಜಾಪ್ರಭುತ್ವವನ್ನು ನಂಬುತ್ತಿದ್ದಾರೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ  ಮತದಾನ ಮಾಡುತ್ತಿದ್ದಾರೆ ಎಂದಿದ್ದಾರೆ  ಮೋದಿ.

ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎ ಮೂರನೇ ಅವಧಿಯನ್ನು ಐತಿಹಾಸಿಕ ಸಾಧನೆ ಎಂದು ಶ್ಲಾಘಿಸಿದರು. “ಸ್ವಾತಂತ್ರ್ಯದ ನಂತರ, ಇದು ಎರಡನೇ ಬಾರಿಗೆ ಮತ್ತು 60 ವರ್ಷಗಳ ನಂತರ ಸಂಭವಿಸಿದೆ. ಇದು ಈ ಸಾಧನೆಗೆ ಎಷ್ಟು ಶ್ರಮ ಬೇಕು ಎಂಬುದನ್ನು ತೋರಿಸುತ್ತದೆ. ಇದು ರಾಜಕೀಯದಿಂದ ಮಾಡುತ್ತಿಲ್ಲ, ಜನರ ಆಶೀರ್ವಾದದಿಂದ ಮಾಡಲ್ಪಟ್ಟಿದೆ. ಸ್ಥಿರತೆ ಮತ್ತು ನಿರ್ಣಾಯಕ ಕೆಲಸಕ್ಕಾಗಿ ನಮಗೆ ಜನಾದೇಶ ಸಿಕ್ಕಿದೆ.

ಲೋಕಸಭೆ ಚುನಾವಣೆ ಜತೆಗೆ ನಾಲ್ಕು ರಾಜ್ಯಗಳ ಚುನಾವಣೆಗಳು ನಡೆದಿವೆ. ನಾಲ್ಕು ರಾಜ್ಯಗಳಲ್ಲಿ ಎನ್‌ಡಿಎ ಅಭೂತಪೂರ್ವ ಯಶಸ್ಸು ಕಂಡಿದೆ. ಮಹಾಪ್ರಭು ಜಗನ್ನಾಥನ ನಾಡು ಒಡಿಶಾ ನಮಗೆ ಆಶೀರ್ವಾದ ಮಾಡಿದೆ. ಆಂಧ್ರಪ್ರದೇಶದಲ್ಲಿ ಎನ್‌ಡಿಎ ಕ್ಲೀನ್ ಸ್ವೀಪ್ ಆಗಿದೆ. ಅರುಣಾಚಲ ಪ್ರದೇಶದಲ್ಲಿ ಮತ್ತು ಸಿಕ್ಕಿಂ, ಆರು ತಿಂಗಳ ಹಿಂದೆ ನಾವು ರಾಜಸ್ಥಾನ, ಎಂಪಿ ಮತ್ತು ಛತ್ತೀಸ್‌ಗಢವನ್ನು ಗೆದ್ದಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:16 pm, Tue, 2 July 24

ಜಾಮೀನು ಸಿಕ್ಕಿದ್ದಕ್ಕೆ ಚಾಮುಂಡಿ ಬೆಟ್ಟದಲ್ಲಿ ಹರಿಕೆ ತೀರಿಸಿದ ವಿಜಯಲಕ್ಷ್ಮಿ
ಜಾಮೀನು ಸಿಕ್ಕಿದ್ದಕ್ಕೆ ಚಾಮುಂಡಿ ಬೆಟ್ಟದಲ್ಲಿ ಹರಿಕೆ ತೀರಿಸಿದ ವಿಜಯಲಕ್ಷ್ಮಿ
ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ