ಬಿಜೆಪಿಯ 400 ಪಾರ್ ಘೋಷಣೆಯನ್ನು ಲೇವಡಿ ಮಾಡಿದ ಟಿಎಂಸಿ ಸಂಸದ, ವಿಡಿಯೊ ವೈರಲ್

ಬಿಜೆಪಿ ‘ಅಬ್ ಕೀ ಬಾರ್ 400 ಪಾರ್’ನೊಂದಿಗೆ ಆಟವಾಡಿದರು. ಹಲವು ಆಟಗಳಿವೆ, ಮತ್ತು ಚು-ಕಿಟ್-ಕಿಟ್ ಅವುಗಳಲ್ಲಿ ಒಂದು”. '400' ಘೋಷಣೆಯು 'ಚು' ಎಂದು ಜೋರಾಗಿ ಪ್ರತಿಧ್ವನಿಸಿತು ಮತ್ತು 'ಕಿಟ್-ಕಿಟ್' ನೊಂದಿಗೆ ಕೊನೆಗೊಂಡಿತು ಎಂದ ಕಲ್ಯಾಣ್ ಬ್ಯಾನರ್ಜಿ ಹೇಳಿದ್ದಾರೆ. ಚು-ಕಿಟ್-ಕಿಟ್ ಪಶ್ಚಿಮ ಬಂಗಾಳದಲ್ಲಿ ಜನಪ್ರಿಯವಾದ ಆಟವಾಗಿದ್ದು, ಇದನ್ನು ಹಾಪ್‌ಸ್ಕಾಚ್‌ನ ಮಾರ್ಪಡಿಸಿದ ಆವೃತ್ತಿ ಎಂದು ಪರಿಗಣಿಸಲಾಗುತ್ತದೆ.

ಬಿಜೆಪಿಯ 400 ಪಾರ್ ಘೋಷಣೆಯನ್ನು ಲೇವಡಿ ಮಾಡಿದ ಟಿಎಂಸಿ ಸಂಸದ, ವಿಡಿಯೊ ವೈರಲ್
ಕಲ್ಯಾಣ್ ಬ್ಯಾನರ್ಜಿ
Follow us
|

Updated on:Jul 02, 2024 | 4:00 PM

ದೆಹಲಿ ಜುಲೈ 02: ತೃಣಮೂಲ ಕಾಂಗ್ರೆಸ್ (TMC) ಸಂಸದ ಕಲ್ಯಾಣ್ ಬ್ಯಾನರ್ಜಿ (Kalyan Banerjee) ಅವರು ಲೋಕಸಭೆಯಲ್ಲಿ (Lok Sabha) ಬಿಜೆಪಿ ಘೋಷಣೆಯಾದ ‘ಅಬ್  ಕೀ ಬಾರ್ 400 ಪಾರ್’ ಅನ್ನು ಅಪಹಾಸ್ಯ ಮಾಡಿದ ವಿಡಿಯೊ ಮಂಗಳವಾರ ಜುಲೈ 2 ರಂದು ವೈರಲ್ ಆಗಿದೆ. ಅವರು(ಬಿಜೆಪಿ) ‘ಅಬ್ ಕೀ ಬಾರ್ 400 ಪಾರ್’ನೊಂದಿಗೆ ಆಟವಾಡಿದರು. ಹಲವು ಆಟಗಳಿವೆ, ಮತ್ತು ಚು-ಕಿಟ್-ಕಿಟ್ ಅವುಗಳಲ್ಲಿ ಒಂದು” ಎಂದು ಕಲ್ಯಾಣ್ ಬ್ಯಾನರ್ಜಿ ಹೇಳಿದ್ದಾರೆ. ಆಟವನ್ನು ಉಲ್ಲೇಖಿಸಿದ ಪಶ್ಚಿಮ ಬಂಗಾಳದ ಶ್ರೀರಾಂಪುರ ಕ್ಷೇತ್ರದ ಸಂಸದರು ‘400’ ಘೋಷಣೆಯು ‘ಚು’ ಎಂದು ಜೋರಾಗಿ ಪ್ರತಿಧ್ವನಿಸಿತು ಮತ್ತು ‘ಕಿಟ್-ಕಿಟ್’ ನೊಂದಿಗೆ ಕೊನೆಗೊಂಡಿತು ಎಂದಿದ್ದಾರೆ.

“ನೀವು ಕೇವಲ 240 ಸ್ಥಾನಗಳನ್ನು ಗೆದ್ದಿದ್ದೀರಿ ಮತ್ತು ಆ ಪಂದ್ಯವನ್ನು ಕಳೆದುಕೊಂಡಿದ್ದೀರಿ” ಎಂದು ಬ್ಯಾನರ್ಜಿ ಟೀಕಿಸಿದ್ದಾರೆ. ಚು-ಕಿಟ್-ಕಿಟ್ ಪಶ್ಚಿಮ ಬಂಗಾಳದಲ್ಲಿ ಜನಪ್ರಿಯವಾದ ಆಟವಾಗಿದ್ದು, ಇದನ್ನು ಹಾಪ್‌ಸ್ಕಾಚ್‌ನ ಮಾರ್ಪಡಿಸಿದ ಆವೃತ್ತಿ ಎಂದು ಪರಿಗಣಿಸಲಾಗುತ್ತದೆ. ದೊಡ್ಡ ತ್ರಿಕೋನದೊಳಗೆ ಒಂಬತ್ತು ಚೌಕಗಳನ್ನು ರಚಿಸಲಾಗುತ್ತದೆ. ಅಲ್ಲಿ ಆಟಗಾರರು ತಮ್ಮ ಇನ್ನೊಂದು ಕಾಲು ನೆಲವನ್ನು ಮುಟ್ಟದಂತೆ ಕಲ್ಲು ಹೊಡೆಯಬೇಕು.

ವೈರಲ್ ಆಗಿರುವ ವಿಡಿಯೊ

ಆಟಗಾರರು ಜೋರಾಗಿ ‘ಚು’ ಎಂದು ಹೇಳುವ ಮೂಲಕ ಆಟವನ್ನು ಪ್ರಾರಂಭಿಸುತ್ತಾರೆ ಮತ್ತು ‘ಕಿಟ್-ಕಿಟ್’ ಅನ್ನು ನಿಧಾನವಾದ ಧ್ವನಿಯಲ್ಲಿ ಉಚ್ಚರಿಸಲಾಗುತ್ತದೆ.

ಟಿಎಂಸಿ ಸಂಸದ ಬ್ಯಾನರ್ಜಿ ಅವರ ವಿವರಣೆ ಕೇಳಿ ಮಹುವಾ ಮೊಯಿತ್ರಾ ಮತ್ತು ಮೊದಲ ಬಾರಿಗೆ ಸಂಸದರಾದ ಸಯೋನಿ ಘೋಷ್ ಸೇರಿದಂತೆ ಅವರ ಪಕ್ಷದ ಸಂಸದರಲ್ಲಿ ನಗು ತರಿಸಿತು. ಕಲ್ಯಾಣ್ ಬ್ಯಾನರ್ಜಿ ಸಹ ಸಂಸದರನ್ನು ನೋಡುತ್ತಿರುವುದು ಕಂಡುಬಂದಿತು. ಆಗ ಸ್ಪೀಕರ್ ಓಂ ಬಿರ್ಲಾ ಅವರು ಮಧ್ಯಪ್ರವೇಶಿಸಿ ಇತ್ತ ಗಮನ ಹರಿಸಿ ಎಂದು ಹೇಳಿದ್ದಾರೆ.

ಇದಕ್ಕೆ ಕಲ್ಯಾಣ್ ಬ್ಯಾನರ್ಜಿ, “ಸರ್, ನಾನು ನಿಮ್ಮನ್ನೇ ನೋಡುತ್ತಿದ್ದೇನೆ. ಈ ಸದನದಲ್ಲಿ ನಿಮಗಿಂತ ಬುದ್ಧಿವಂತರು ಯಾರೂ ಇಲ್ಲ. ನಿಮ್ಮಂತಹ ಸಂಭಾವಿತ ವ್ಯಕ್ತಿ ಇಲ್ಲ.ಎಲ್ಲರೂ ನಿಮ್ಮನ್ನು ಮಾತ್ರ ನೋಡುತ್ತಾರೆ ಎಂದಿದ್ದಾರೆ.

ಡಿಸೆಂಬರ್ 19, 2023 ರಂದು, ಕಲ್ಯಾಣ್ ಬ್ಯಾನರ್ಜಿ ಅವರು ಸಂಸದರ ಅಮಾನತು ವಿರುದ್ಧ ಸಂಸತ್ತಿನ ಮೆಟ್ಟಿಲುಗಳ ಮೇಲೆ ಪ್ರತಿಪಕ್ಷಗಳ ಪ್ರತಿಭಟನೆಯ ಸಂದರ್ಭದಲ್ಲಿ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ ಅವರನ್ನು ಅನುಕರಿಸಿ ಸುದ್ದಿಯಾಗಿದ್ದರು. ಆಡಳಿತಾರೂಢ ಬಿಜೆಪಿ ಈ ಅನುಕರಣೆಯನ್ನು ಕಟುವಾಗಿ ಖಂಡಿಸಿತ್ತು.

ಸಂಸತ್ತಿಗೆ ಅಥವಾ ಉಪರಾಷ್ಟ್ರಪತಿ ಸಾಂವಿಧಾನಿಕ ಹುದ್ದೆಗೆ ಮಾಡಿದ ಯಾವುದೇ ಅಗೌರವವನ್ನು ಸಹಿಸುವುದಿಲ್ಲ ಎಂದು ಧನ್ಖರ್ ಆಗ ಸದನದಲ್ಲಿ ಹೇಳಿದ್ದರು.  ಮಿಮಿಕ್ರಿ ಎನ್ನುವುದು ಅಭಿವ್ಯಕ್ತಿಯ ಒಂದು ರೂಪವಾಗಿದೆ. ಭಿನ್ನಾಭಿಪ್ರಾಯ ಮತ್ತು ಪ್ರತಿಭಟನೆಯ ಹಕ್ಕು ಮೂಲಭೂತ ಹಕ್ಕು ಎಂದು ಬ್ಯಾನರ್ಜಿ ಎಂದು ಈ ವಿವಾದಕ್ಕೆ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಜವಾಬ್ದಾರಿಯುತ ಪಾತ್ರ ನಿರ್ವಹಿಸುವ ಬದಲು, ರಾಹುಲ್ ದ್ವೇಷ ಹರಡುತ್ತಿದ್ದಾರೆ: ಕಿಶನ್​ ರೆಡ್ಡಿ

ಲೋಕಸಭೆಯಿಂದ ಅಮಾನತುಗೊಂಡಿರುವ ಟಿಎಂಸಿ ಸಂಸದರು ಭಿನ್ನಾಭಿಪ್ರಾಯ ಮತ್ತು ಪ್ರತಿಭಟನೆಯ ಹಕ್ಕು ಕೂಡ ಮೂಲಭೂತ ಹಕ್ಕು ಎಂದು ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:59 pm, Tue, 2 July 24

ತಾಜಾ ಸುದ್ದಿ
ಮಂಗಳೂರು, ಉಡುಪಿಯಲ್ಲಿ ಮಳೆ, ಕೆಲ ಪ್ರವಾಸಿ ತಾಣಗಳಿಗೆ ತೆರಳದಂತೆ ನಿರ್ಬಂಧ
ಮಂಗಳೂರು, ಉಡುಪಿಯಲ್ಲಿ ಮಳೆ, ಕೆಲ ಪ್ರವಾಸಿ ತಾಣಗಳಿಗೆ ತೆರಳದಂತೆ ನಿರ್ಬಂಧ
ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ​​ಕೇಕ್​​ ಕತ್ತರಿಸಿದ ರಾಹುಲ್ ದ್ರಾವಿಡ್
ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ​​ಕೇಕ್​​ ಕತ್ತರಿಸಿದ ರಾಹುಲ್ ದ್ರಾವಿಡ್
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ