AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜವಾಬ್ದಾರಿಯುತ ಪಾತ್ರ ನಿರ್ವಹಿಸುವ ಬದಲು, ರಾಹುಲ್ ದ್ವೇಷ ಹರಡುತ್ತಿದ್ದಾರೆ: ಕಿಶನ್​ ರೆಡ್ಡಿ

ಲೋಕಸಭೆಯಲ್ಲಿ ಜವಾಬ್ದಾರಿಯುತ ಪಾತ್ರವನ್ನು ವಹಿಸುವ ಬದಲು, ದ್ವೇಷದ ಭಾಷಣ ಮತ್ತು ನಕಲಿ ಸುದ್ದಿಗಳನ್ನು ಪ್ರಚಾರ ಮಾಡುವ ವೇದಿಕೆಯಾಗಿ ರಾಹುಲ್ ಬಳಸಿದ್ದಾರೆ ಎಂದು ಕೇಂದ್ರ ಸಚಿವ ಕಿಶನ್​ ರೆಡ್ಡಿ ಹೇಳಿದ್ದಾರೆ.

ಜವಾಬ್ದಾರಿಯುತ ಪಾತ್ರ ನಿರ್ವಹಿಸುವ ಬದಲು, ರಾಹುಲ್ ದ್ವೇಷ ಹರಡುತ್ತಿದ್ದಾರೆ: ಕಿಶನ್​ ರೆಡ್ಡಿ
ಕಿಶನ್​ ರೆಡ್ಡಿ
ನಯನಾ ರಾಜೀವ್
|

Updated on: Jul 02, 2024 | 2:56 PM

Share

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಪಾತ್ರವೆಂದರೆ ಸರ್ಕಾರದ ತಪ್ಪನ್ನು ಎತ್ತಿ ತೋರಿಸಿ, ಜನರ ಧ್ವನಿಯಾಗುವುದು. ಆದರೆ ರಾಹುಲ್ ಗಾಂಧಿ(Rahul Gandhi) ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಯನ್ನು ನೀಡಿದ್ದು ಅವರು ಎಲ್ಲರ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸಚಿವ ಕಿಶನ್​ ರೆಡ್ಡಿ(Kishan Reddy) ಆಗ್ರಹಿಸಿದ್ದಾರೆ.

ವಿರೋಧ ಪಕ್ಷದ ನಾಯಕನ ಪಾತ್ರವನ್ನು ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಸೇರಿದಂತೆ ಅನೇಕ ಅನೇಕರು ಸಮರ್ಥವಾಗಿ ನಿರ್ವಹಿಸಿದ್ದರು.ಪ್ರತಿಯೊಬ್ಬರೂ ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ಬಡವರು, ಜನರ ಸಮಸ್ಯೆಗಳಿಗಾಗಿ ಧ್ವನಿ ಎತ್ತಿದ್ದರು.

ದುರದೃಷ್ಟವಶಾತ್, ವಿರೋಧ ಪಕ್ಷದ ನಾಯಕರಾಗಿ ತಮ್ಮ ಮೊದಲ ಚೊಚ್ಚಲ ಭಾಷಣದಲ್ಲಿ, ಜವಾಬ್ದಾರಿಯುತ ಪಾತ್ರವನ್ನು ವಹಿಸುವ ಬದಲು, ದ್ವೇಷದ ಭಾಷಣ ಮತ್ತು ನಕಲಿ ಸುದ್ದಿಗಳನ್ನು ಪ್ರಚಾರ ಮಾಡುವ ವೇದಿಕೆಯಾಗಿ ರಾಹುಲ್ ಬಳಸಿದ್ದಾರೆ.

ರಾಹುಲ್ ಗಾಂಧಿಯವರು ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಮತ್ತು ದ್ವೇಷ ತುಂಬಿದವರಂತೆ ಬಿಂಬಿಸುವುದನ್ನು ಇಡೀ ರಾಷ್ಟ್ರವು ಪ್ರತ್ಯಕ್ಷವಾಗಿ ನೋಡಿದೆ. ಇದು ಅವರ ನಿಜವಾದ ಬಣ್ಣವನ್ನು ತೋರಿಸುತ್ತದೆ. ಭಾರತೀಯ ಜನತಾ ಪಕ್ಷ ಮತ್ತು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅವರ ದ್ವೇಷವು ಇಡೀ ಸಮುದಾಯ ಮತ್ತು ರಾಷ್ಟ್ರದ ದ್ವೇಷವಾಗಿ ಮಾರ್ಪಟ್ಟಿದೆ. ಈ ಪ್ರಕ್ರಿಯೆಯಲ್ಲಿ, ಸಂವಿಧಾನದ ಸ್ವಯಂಘೋಷಿತ ರಕ್ಷಕ ಮತ್ತೊಮ್ಮೆ ತನ್ನ ಹಿಂದೂ ವಿರೋಧಿ ಅಜೆಂಡಾವನ್ನು ಬಹಿರಂಗಪಡಿಸಿದ್ದಾರೆ ಎಂದರು.

ಮತ್ತಷ್ಟು ಓದಿ: ಹಿಂದೂಗಳ ಬಗ್ಗೆ ಅಸಭ್ಯ ಹೇಳಿಕೆ, ರಾಹುಲ್ ಗಾಂಧಿ ವಿರುದ್ಧ ದಿಗ್ವಿಜಯ ಸಿಂಗ್ ಸಹೋದರ ಲಕ್ಷ್ಮಣ್​ ವಾಗ್ದಾಳಿ

ಕಾಂಗ್ರೆಸ್ ಪಕ್ಷ ಮತ್ತು ಅವರ ಮೈತ್ರಿ ಪಕ್ಷಗಳು ಹಿಂದೂಗಳನ್ನು ಅವಮಾನಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ಅವರ ಮೈತ್ರಿ ಪಕ್ಷದ ಸದಸ್ಯರು ಸನಾತನ ಧರ್ಮವನ್ನು ಅವಮಾನಿಸಿದ್ದರು. 2014 ರ ಮೊದಲು, ಕಾಂಗ್ರೆಸ್ ಪಕ್ಷವು ಸರ್ಕಾರದಲ್ಲಿದ್ದಾಗ, ಅವರು ಹಿಂದೂಗಳನ್ನು ಮಾತ್ರ ಶಿಕ್ಷಿಸುವ ಕೋಮು ಹಿಂಸಾಚಾರ ಮಸೂದೆಯನ್ನು ಜಾರಿಗೆ ತರಲು ಪ್ರಯತ್ನಿಸಿದರು. ಲೋಕಸಭೆಯಲ್ಲಿ ದ್ವೇಷಪೂರಿತ ಭಾಷಣ ಮಾಡಿದ್ದಕ್ಕಾಗಿ ರಾಹುಲ್ ಗಾಂಧಿಯವರು ಇಡೀ ಹಿಂದೂ ಸಮುದಾಯದ ಕ್ಷಮೆ ಕೇಳುವುದು ಸೂಕ್ತ ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ