ಅಮೆರಿಕದ ಬ್ಲೂ ಒರಿಜಿನ್​ನ ಗಗನನೌಕೆಯಲ್ಲಿ ಪ್ರಯಾಣಿಸಬೇಕೆ? ಅರ್ಜಿ ಸಲ್ಲಿಕೆಗೆ ಕೇವಲ 200 ರೂ

Blue Origin and SERA human spaceflight mission: ಅಮೆರಿಕದ ಸ್ಪೇಸ್ ಎಕ್ಸ್​ಪ್ಲೋರೇಶನ್ ರೀಸರ್ಚ್ ಏಜೆನ್ಸಿ ಮತ್ತು ಬ್ಲೂ ಒರಿಜಿನ್ ಸಂಸ್ಥೆಗಳು ಸೇರಿ ಕೈಗೊಳ್ಳಲಾಗಿರುವ ನ್ಯೂ ಶೆಪರ್ಡ್ ಎಂಬ ಹ್ಯೂಮನ್ ಸ್ಪೇಸ್ ಮಿಷನ್​ಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಆರು ಮಂದಿಯನ್ನು ನ್ಯೂಶೆಪರ್ಡ್ ಫ್ಲೈಟ್​ನಲ್ಲಿ ಗಗನಕ್ಕೆ ಕಳುಹಿಸಲಾಗುತ್ತಿದೆ. ಈ ಯೋಜನೆಯ ಪಾರ್ಟ್ನರ್ ದೇಶಗಳಲ್ಲಿ ಭಾರತವೂ ಒಂದಾಗಿದೆ. ನೀವು ಆಸ್ಟ್ರೋನಾಟ್ ಆಗುವ ಇಚ್ಛೆ ಇದ್ದರೆ ಎರಡೂವರೆ ಡಾಲರ್ ಕೊಟ್ಟು ಅರ್ಜಿ ಸಲ್ಲಿಸಬಹುದು.

ಅಮೆರಿಕದ ಬ್ಲೂ ಒರಿಜಿನ್​ನ ಗಗನನೌಕೆಯಲ್ಲಿ ಪ್ರಯಾಣಿಸಬೇಕೆ? ಅರ್ಜಿ ಸಲ್ಲಿಕೆಗೆ ಕೇವಲ 200 ರೂ
ಗಗನಯಾತ್ರೆ
Follow us
|

Updated on: Jul 02, 2024 | 4:46 PM

ನವದೆಹಲಿ, ಜುಲೈ 2: ಹಿಂದೆಲ್ಲಾ ಪೈಲಟ್​ಗಳಾಗಬೇಕೆಂದು ಜನರು ಕನಸು ಕಾಣುತ್ತಿದ್ದರು. ಈಗ ಗಗನಯಾತ್ರಿಗಳಾಗಬೇಕೆಂದು ಕನಸು ಕಾಣುವ ಯುವಜನರ ಸಂಖ್ಯೆ ದೊಡ್ಡದು. ಈಗ ಗಗನಯಾನ ಸಾಮಾನ್ಯ ಕ್ರಿಯೆಯಂತಾಗಿ ಹೋಗಿದೆ. ಅಮೆರಿಕದಿಂದ ನಿಯಮಿತವಾಗಿ ಗಗನಯಾತ್ರಿಗಳನ್ನು ಸ್ಪೇಸ್​ಗೆ ಕಳುಹಿಸಲಾಗುತ್ತಿದೆ. ಭಾರತದ ಇಸ್ರೋ ಕೂಡ ಆರು ಜನ ಗಗನಯಾತ್ರಿಗಳನ್ನು ಸ್ಪೇಸ್​ಗೆ ಕಳುಹಿಸಲು ಆಯ್ಕೆ ಮಾಡಿದೆ. ಇದೇ ವೇಳೆ ಅಮೆರಿಕದ ಸೆರಾ (SERA- Space Exploration and Research Agency) ಮತ್ತು ಬ್ಲೂ ಆರಿಜಿನ್ ಸಂಸ್ಥೆಗಳು ಸೇರಿ ಗಗನಯಾನದ ಯೋಜನೆ ಹಮ್ಮಿಕೊಂಡಿವೆ. ಇಂಟರೆಸ್ಟಿಂಗ್ ಎಂದರೆ ಈ ಯೋಜನೆಗೆ ಭಾರತವೂ ಪಾರ್ಟ್ನರ್ ದೇಶವಾಗಿದೆ. ಭಾರತದಿಂದ ಕನಿಷ್ಠ ಒಬ್ಬರಾದರೂ ವ್ಯಕ್ತಿಯನ್ನು ಈ ಸ್ಪೇಸ್​ಫ್ಲೈಟ್​ನಲ್ಲಿ ಕಳುಹಿಸುವುದು ಖಚಿತವಾಗಿದೆ.

ಅಮೇಜಾನ್ ಸಂಸ್ಥಾಪಕ ಜೆಫ್ ಬೇಜೋಸ್ ಮಾಲಕತ್ವದ ಬ್ಲ್ಯೂ ಆರಿಜಿನ್ ಸಂಸ್ಥೆ ತಯಾರಿಸಿರುವ ನ್ಯೂ ಶೆಪರ್ಡ್ ಎನ್ನುವ ರಾಕೆಟ್ ಅನ್ನು ಈ ಹ್ಯೂಮನ್ ಸ್ಪೇಸ್​ಫ್ಲೈಟ್​ಗೆ ಬಳಸಲಾಗುತ್ತಿದೆ. ಗಗನಯಾನ ಕೈಗೊಳ್ಳಲು ಸಾಧ್ಯವಾಗದ ಅಥವಾ ಸಂಪನ್ಮೂಲದ ಕೊರತೆ ಎದುರಿಸುತ್ತಿರುವ ದೇಶಗಳ ಜನರನ್ನು ಇಂಥ ಸ್ಪೇಸ್​ಫ್ಲೈಟ್​ನಲ್ಲಿ ಕಳುಹಿಸುವುದು ಸೆರಾದ ಉದ್ದೇಶ ಎನ್ನಲಾಗಿದೆ. ಈವರೆಗೆ ಗಗನಯಾನ ಕೈಗೊಂಡವರಲ್ಲಿ ಶೇ. 80ರಷ್ಟು ಜನರು ಮೂರು ದೇಶಗಳಿಗೆ ಸೇರಿದವರೇ ಆಗಿದ್ದಾರೆ. ಇದರ ಸಾಹಸದ ಅನುಭವ ಎಲ್ಲಾ ದೇಶಗಳವರಿಗೂ ಸಿಗಬೇಕು ಎನ್ನುವುದು ಸೆರಾ ಮತ್ತು ಬ್ಲೂ ಆರಿಜಿನ್​ನ ನ್ಯೂ ಶೆಪರ್ಡ್ ಯೋಜನೆ ಉದ್ದೇಶ ಎನ್ನಲಾಗಿದೆ.

ಇದನ್ನೂ ಓದಿ: 180 ಕೋಟಿ ರೂ ಸಾಲದ ಪ್ರಕರಣ: ವಿಜಯ್ ಮಲ್ಯ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿದ ಸಿಬಿಐ ಕೋರ್ಟ್

ಒಟ್ಟು ಆರು ಮಂದಿಯನ್ನು ಈ ಸ್ಪೇಸ್ ಫ್ಲೈಟ್​ನಲ್ಲಿ ಕಳುಹಿಸಲಾಗುತ್ತದೆ. ಭಾರತದಂತೆ ನೈಜೀರಿಯಾದಿಂದಲೂ ಒಬ್ಬ ವ್ಯಕ್ತಿಯನ್ನು ಇದರಲ್ಲಿ ಒಳಗೊಳ್ಳಲಾಗಿದೆ. ಹಾಗೆಯೇ, ಸಿಡ್ಸ್ ಅಥವಾ ಸಣ್ಣ ದ್ವೀಪ ಅಭಿವೃದ್ಧಿ ದೇಶಗಳ ಗುಂಪಿನಿಂದ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ. ಜಾಗತಿಕವಾಗಿ ಇತರ ದೇಶಗಳಿಂದ ಇನ್ನೊಬ್ಬರು ಈ ತಂಡಕ್ಕೆ ಸೇರುತ್ತಾರೆ. ಇನ್ನುಳಿದ ಎರಡು ಗಗನಯಾತ್ರಿಕರು ಅಮೆರಿಕದವರಾಗಿರಬಹುದು.

ಎರಡೂವರೆ ಡಾಲರ್​ಗೆ ಅರ್ಜಿ ಸಲ್ಲಿಸಿ…

ನೀವು ಈ ಗಗನಯಾನ ಕೈಗೊಳ್ಳಲು ಆಸಕ್ತರಾಗಿದ್ದರೆ ಅರ್ಜಿ ಸಲ್ಲಿಸಬೇಕು. ಇದಕ್ಕೆ ಎರಡೂವರೆ ಡಾಲರ್ ಅಥವಾ ಸುಮಾರು 100-110 ರುಪಾಯಿ ಶುಲ್ಕ ಇರುತ್ತದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಗಗನಯಾತ್ರೆಗೆ ಬೇಕಾದ ದೈಹಿಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕು. ಇದರಲ್ಲಿ ಓಕೆಯಾದ ಅಭ್ಯರ್ಥಿಗಳನ್ನು ಸಾರ್ವಜನಿಕ ವೋಟಿಂಗ್ ಮೂಲಕ ಆಯ್ಕೆ ಮಾಡಲಾಗುತ್ತದೆ. ಭಾರತದಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಒಬ್ಬರಿಗೆ ಆಯ್ಕೆಯಾಗುವ ಅವಕಾಶ ಇರುತ್ತದೆ. ಭಾರತದಲ್ಲಿ ನಡೆಯುವ ವೋಟಿಂಗ್​ನಲ್ಲಿ ಭಾರತೀಯ ಅಭ್ಯರ್ಥಿಗಳಲ್ಲಿ ಒಬ್ಬರನ್ನು ಆರಿಸುವ ಅವಕಾಶ ಇರುತ್ತದೆ.

ಇದನ್ನೂ ಓದಿ: Viral Video: ನನ್ನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿ, ಸಂಸದೆಯ ಮಾತಿಗೆ ಪಾಕಿಸ್ತಾನ ಸಂಸತ್ತಿನ ಸ್ಪೀಕರ್‌ ಏನಂದ್ರು ನೋಡಿ…

ಭಾರತ ಸರ್ಕಾರ ನಿರ್ವಹಿಸುವ @mygovindia ಎನ್ನುವ ಎಕ್ಸ್ ಅಕೌಂಟ್​ನಿಂದಲೂ ಈ ಬಗ್ಗೆ ಮಾಹಿತಿ ಪ್ರಕಟವಾಗಿದೆ.

ಕಾರ್ಮಾನ್ ಲೈನ್ ಆಚೆಗೆ ಪ್ರಯಾಣ

ಕಾರ್ಮಾನ್ ಲೈನ್​ನಿಂದ ಆಚೆಗೆ 11 ನಿಮಿಗಳ ಕಾಲ ಗಗನಯಾತ್ರಿಗಳು ಪ್ರಯಾಣ ಮಾಡಲಿದ್ದಾರೆ. ಈ ಕಾರ್ಮಾನ್ ಲೈನ್ (Karman Line) ಎಂಬುದು ಭೂಮಿಯಿಂದ 100 ಕಿಮೀ ಮೇಲೆ ಗುರುತಿಸಲಾಗಿರುವ ಒಂದು ಗಡಿಯಾಗಿದೆ. ಈ ಕಾರ್ಮಾನ್ ಲೈನ್​ನ ಆಚೆ ಹೋದರೆ ಭೂಮಿಯ ಗುರುತ್ವಾಕರ್ಷಣ ಶಕ್ತಿ ಬಹಳ ಕಡಿಮೆ ಇರುತ್ತದೆ. ದೇಹಕ್ಕೆ ತೂಕವೇ ಇರುವುದಿಲ್ಲ. ವ್ಯಕ್ತಿಗಳು ಗಾಳಿಯಲ್ಲಿ ಹಾರಿದಂತೆ ಅನುಭವ ಪಡೆಯುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಜಮೀನು ಬೆಲೆ ₹ 62 ಕೋಟಿ ಆಗುತ್ತೆ, ಮುಡಾ ನಮಗೆ ಹಣ ಕೊಡಲಿ: ಸಿದ್ದರಾಮಯ್ಯ
ಜಮೀನು ಬೆಲೆ ₹ 62 ಕೋಟಿ ಆಗುತ್ತೆ, ಮುಡಾ ನಮಗೆ ಹಣ ಕೊಡಲಿ: ಸಿದ್ದರಾಮಯ್ಯ
ವಾವ್​! ಮಳೆಯಿಂದಾಗಿ ಮತ್ತೆ ಜೀವ ಕಳೆ ಪಡೆದ ಸಿರಿಮನೆ ಜಲಪಾತ
ವಾವ್​! ಮಳೆಯಿಂದಾಗಿ ಮತ್ತೆ ಜೀವ ಕಳೆ ಪಡೆದ ಸಿರಿಮನೆ ಜಲಪಾತ
ಸ್ವೀಟ್​ ಅಂಗಡಿಗಳ ಮೇಲೆ ದಾಳಿ; ಪತ್ತೆಯಾಯ್ತು ಕ್ಯಾನ್ಸರ್​ ಕಾರಕ ಅಂಶ
ಸ್ವೀಟ್​ ಅಂಗಡಿಗಳ ಮೇಲೆ ದಾಳಿ; ಪತ್ತೆಯಾಯ್ತು ಕ್ಯಾನ್ಸರ್​ ಕಾರಕ ಅಂಶ
ಮುಡಾ ನೀಡಿದ್ದನ್ನೇ ಸಿಎಂ ಪತ್ನಿ ಸ್ವೀಕರಿಸಿದ್ದು ಅಪರಾಧವಾಗಿದೆ: ಪೊನ್ನಣ್ಣ
ಮುಡಾ ನೀಡಿದ್ದನ್ನೇ ಸಿಎಂ ಪತ್ನಿ ಸ್ವೀಕರಿಸಿದ್ದು ಅಪರಾಧವಾಗಿದೆ: ಪೊನ್ನಣ್ಣ
ಧುಮ್ಮಿಕ್ಕಿ ಹರಿಯುವ ಜಲಪಾತದಲ್ಲಿ ಯುವಕನಿಂದ ಮೀನು ಹಿಡಿಯುವ ಹುಚ್ಚು ಸಾಹಸ!
ಧುಮ್ಮಿಕ್ಕಿ ಹರಿಯುವ ಜಲಪಾತದಲ್ಲಿ ಯುವಕನಿಂದ ಮೀನು ಹಿಡಿಯುವ ಹುಚ್ಚು ಸಾಹಸ!
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಟೀಮ್ ಇಂಡಿಯಾ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಟೀಮ್ ಇಂಡಿಯಾ
ಮುಡಾ ಅಕ್ರಮ ಸಿಬಿಐಗೆ ಒಪ್ಪಿಸುವ ವಿಚಾರಕ್ಕೆ ಸಿದ್ದರಾಮಯ್ಯ ಅಸಮಂಜಸ ಉತ್ತರ
ಮುಡಾ ಅಕ್ರಮ ಸಿಬಿಐಗೆ ಒಪ್ಪಿಸುವ ವಿಚಾರಕ್ಕೆ ಸಿದ್ದರಾಮಯ್ಯ ಅಸಮಂಜಸ ಉತ್ತರ
ನನ್ನ ಹೆಸರೇ ಬೆಂಕಿ, ಹಾಟ್ ಆಗಿ ಇರಲೇ ಬೇಕಲ್ಲ: ತನಿಷಾ ಕುಪ್ಪಂಡ
ನನ್ನ ಹೆಸರೇ ಬೆಂಕಿ, ಹಾಟ್ ಆಗಿ ಇರಲೇ ಬೇಕಲ್ಲ: ತನಿಷಾ ಕುಪ್ಪಂಡ
ಪ್ರಧಾನಿ ಮೋದಿಯನ್ನು ಭೇಟಿಯಾದ ಟೀಮ್​​​​​ ಇಂಡಿಯಾ
ಪ್ರಧಾನಿ ಮೋದಿಯನ್ನು ಭೇಟಿಯಾದ ಟೀಮ್​​​​​ ಇಂಡಿಯಾ
ಉಕ್ಕಿ ಹರಿಯುತ್ತಿರುವ ಚಂಡಿಕಾ ಹೊಳೆಯಲ್ಲಿ ಸಿಲುಕಿದ ಪ್ರಯಾಣಕರಿದ್ದ ಬಸ್!
ಉಕ್ಕಿ ಹರಿಯುತ್ತಿರುವ ಚಂಡಿಕಾ ಹೊಳೆಯಲ್ಲಿ ಸಿಲುಕಿದ ಪ್ರಯಾಣಕರಿದ್ದ ಬಸ್!