Viral Video: ನನ್ನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿ, ಸಂಸದೆಯ ಮಾತಿಗೆ ಪಾಕಿಸ್ತಾನ ಸಂಸತ್ತಿನ ಸ್ಪೀಕರ್‌ ಏನಂದ್ರು ನೋಡಿ…

ಪಾಕಿಸ್ತಾನದ ಸಂಸತ್‌ ಅಧಿವೇಶನ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಸಂಸತ್‌ ಕಲಾಪದಲ್ಲಿ ಸಂಸದೆಯೊಬ್ಬರು ಸ್ಪೀಕರ್‌ ಬಳಿ ನೀವು ನನ್ನ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿ ಎಂದು ಹೇಳಿದ್ದಾರೆ. ಸಂಸದೆಯ ಮಾತಿಗೆ ಸ್ಪೀಕರ್‌ ತಮಾಷೆಯ ಉತ್ತರವನ್ನು ನೀಡಿದ್ದು, ಈ ಇಬ್ಬರ ತಮಾಷೆಯ ಸಂಭಾಷಣೆ ಜನರನ್ನು ನಗೆಗಡಲಲ್ಲಿ ತೇಲಿಸಿದೆ.

Viral Video: ನನ್ನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿ, ಸಂಸದೆಯ ಮಾತಿಗೆ ಪಾಕಿಸ್ತಾನ ಸಂಸತ್ತಿನ ಸ್ಪೀಕರ್‌ ಏನಂದ್ರು ನೋಡಿ…
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 02, 2024 | 11:59 AM

ಪ್ರಸ್ತುತ ಭಾರತದಲ್ಲಿ ಸಂಸತ್‌ ಅಧಿವೇಶನ ನಡೆಯುತ್ತಿದ್ದು, ಲೋಕಸಭೆಯಲ್ಲಿ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯುತ್ತಿದೆ. ಇವೆಲ್ಲದರ ನಡುವೆ ಇದೀಗ ಪಾಕಿಸ್ತಾನದ ಸಂಸತ್‌ ಕಲಾಪಕ್ಕೆ ಸಂಬಂಧಪಟ್ಟ ವಿಶೇಷ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಸ್ಪೀಕರ್‌ ಮತ್ತು ಸಂಸದೆಯ ನಡುವಿನ ಹಾಸ್ಯಯಮ ಮಾತುಕತೆ ಜನರನ್ನು ನಗೆಗಡಲಲ್ಲಿ ತೇಳಿಸಿದೆ.

ಪಾಕಿಸ್ತಾನದ ಸಂಸತ್ತಿನಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಮಹಿಳಾ ಸಂಸದೆ ಜರ್ತಾಜ್‌ ಗುಲ್‌ ಹಾಗೂ ಸಭಾಧ್ಯಕ್ಷರಾದ ಅಯಾಜ್‌ ಸಾದಿಕ್‌ ನಡುವಿನ ಹಾಸ್ಯಮಯ ಸಂಭಾಷಣೆಯ ವಿಡಿಯೋ ವೈರಲ್‌ ಆಗುತ್ತಿದ್ದು, ಈ ಕುರಿತ ಪೋಸ್ಟ್‌ ಒಂದನ್ನು ಹಾರ್ದಿಕ್‌ ಭಾಸ್ವರ್‌ (Bitt2DA) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಪಾಕಿಸ್ತಾನ ಸಂಸತ್ತಿನ ರೊಮ್ಯಾಂಟಿಕ್‌ ವಾತಾವರಣ” ಎಂಬ ಶೀರ್ಷಿಕೆನ್ನು ಬರೆದುಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ವಿಡಿಯೋದಲ್ಲಿ ಸಂಸದೆ ಜರ್ತಾಜ್‌ ಗುಲ್‌ ಹಾಗೂ ಸ್ಪೀಕರ್‌ ಅಯಾಜ್‌ ಸಾದಿಕ್‌ ಅವರ ನಡುವಿನ ಹಾಸ್ಯಮಯ ಸಂಭಾಷಣೆಯ ದೃಶ್ಯವನ್ನು ಕಾಣಬಹುದು. ಸಂಸತ್‌ ಕಲಾಪದಲ್ಲಿ ಜರ್ತಾಜ್‌ ತಮ್ಮ ಅಭಿಪ್ರಾಯಗಳನ್ನು ಮಂಡಿಸುವಾಗ ಸ್ಪೀಕರ್‌ ಸಾರ್‌ ನಾನು ನಿಮ್ಮ ಜೊತೆ ಮಾತನಾಡುವಾಗ ದಯವಿಟ್ಟು ನೀವು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಇಲ್ಲದಿದ್ದರೆ ನನ್ನ ಮಾತುಗಳನ್ನು ನಾನು ಮುಂದುವರಿಸುವುದಿಲ್ಲ ಎಂದು ಗುಡುಗುತ್ತಾರೆ. ಆ ಸಂದರ್ಭದಲ್ಲಿ ನಾನು ನಿಮ್ಮ ಮಾತುಗಳನ್ನು ಕೇಳಿಸುತ್ತಿದ್ದೇನೆ, ಆದರೆ ನಾನು ಮಹಿಳೆಯರೊಂದಿಗೆ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ ಎಂದು ತಮಾಷೆಯ ಉತ್ತರವನ್ನು ನೀಡಿದ್ದಾರೆ. ಇವರಿಬ್ಬರ ಮಾತುಕತೆ ಸಂಸತ್ತಿನಲ್ಲಿ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿದೆ.

ಇದನ್ನೂ ಓದಿ: ಗೂಗಲ್ ಮ್ಯಾಪ್ ಎಡವಟ್ಟು, ಆಸ್ಪತ್ರೆಯ ಕಡೆಗೆ ಹೋಗಬೇಕಿದ್ದ ಕಾರು ಸೇರಿದ್ದು ತುಂಬಿ ಹರಿಯುತ್ತಿದ್ದ ಹೊಳೆಗೆ

ಜೂನ್ 30 ರಂದು ಹಂಚಿಕೊಳ್ಳಲಾದ ಈ ವಿಡಿಯೋ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ದೃಶ್ಯ ನೆಟ್ಟಿಗರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ