Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನೀರಿನ ಜೊತೆ ಹುಚ್ಚಾಟ ಬೇಡ!; ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ

Viral Video: ನೀರಿನ ಜೊತೆ ಹುಚ್ಚಾಟ ಬೇಡ!; ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ

ಸುಷ್ಮಾ ಚಕ್ರೆ
|

Updated on: Jul 01, 2024 | 9:51 PM

Shocking Video: ನಿನ್ನೆಯಷ್ಟೇ ಪುಣೆಯ ಲೋನಾವಾಲಾದಲ್ಲಿ ಅಣೆಕಟ್ಟೆಯ ಹಿನ್ನೀರಿನ ಜಲಪಾತದಲ್ಲಿ ಒಂದೇ ಕುಟುಂಬದ ಐವರು ಕೊಚ್ಚಿ ಹೋಗಿರುವ ವಿಡಿಯೋ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಇಂದು ಪುಣೆಯ ಮತ್ತೊಂದು ಜಲಪಾತದಲ್ಲಿ ಟ್ರೆಕ್ಕಿಂಗ್ ಹೋಗಿದ್ದ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿರುವ ವಿಡಿಯೋವನ್ನು ಆತನ 10 ವರ್ಷದ ಮಗಳು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿದ್ದಾಳೆ.

ಪುಣೆ: ಲೋನಾವಾಲಾದಲ್ಲಿ ಒಂದೇ ಕುಟುಂಬದ ಐವರು ಹಿನ್ನೀರಿನ ಜಲಪಾತದಲ್ಲಿ ಕೊಚ್ಚಿಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಪುಣೆಯಲ್ಲೇ ಮತ್ತೊಂದು ಜಲಪಾತದಲ್ಲಿ ಪ್ರವಾಸಿಗನೊಬ್ಬ ಸಾಹಸ ಪ್ರದರ್ಶಿಸಲು ಹೋಗಿ ಕೊಚ್ಚಿ ಹೋಗಿರುವ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದೆ. ಅಪ್ಪನ ಸಾಹಸವನ್ನು ರೆಕಾರ್ಡ್ ಮಾಡಲು ಮೊಬೈಲ್ ಹಿಡಿದು ನಿಂತಿದ್ದ ಮಗಳ ಕಣ್ಣೆದುರೇ ಈ ದುರಂತ ಘಟನೆ ನಡೆದಿದೆ.

ಟ್ರೆಕ್ ಲೀಡರ್ ಆಗಿದ್ದ ವ್ಯಕ್ತಿ ಜನಪ್ರಿಯ ಪಿಕ್ನಿಕ್ ತಾಣದಲ್ಲಿ ತನ್ನ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆನಂದಿಸುತ್ತಿದ್ದರು. ಪುಣೆಯಲ್ಲಿ ಅವರು ಜಲಪಾತಕ್ಕೆ ಧುಮುಕಲು ನಿರ್ಧರಿಸಿದರು. ಆ ಜಲಪಾತದ ಹೊಂಡದಿಂದ ತಾನು ಈಜಿ ಮೇಲೆ ಬರುತ್ತೇನೆ ಎಂಬ ವಿಶ್ವಾಸದಲ್ಲಿ ದಡದಲ್ಲಿದ್ದ 10 ವರ್ಷದ ಮಗಳು, ತನ್ನ ಗೆಳೆಯರ ಮುಂದೆ ಜಲಪಾತದ ಬುಡಕ್ಕೆ ಹಾರಿದ್ದಾರೆ. ಆದರೆ, ನೀರಿನ ರಭಸದಿಂದ ಅವರಿಗೆ ಮೇಲೆ ಬರಲು ಸಾಧ್ಯವಾಗದೆ ಕೊಚ್ಚಿ ಹೋಗಿದ್ದಾರೆ.

ಟ್ರೆಕ್ ಲೀಡರ್ ಎಂದು ವರದಿಯಾಗಿರುವ ವ್ಯಕ್ತಿ, ಜನಪ್ರಿಯ ಪಿಕ್ನಿಕ್ ಸ್ಪಾಟ್‌ನಲ್ಲಿ ತನ್ನ ಸ್ನೇಹಿತರು ಮತ್ತು ಕುಟುಂಬ ಸೇರಿದಂತೆ 20 ಜನರೊಂದಿಗೆ ಚಾರಣಕ್ಕೆ ಹೋಗಿದ್ದರು. ಅಲ್ಲಿ, ಅವರು ಜಲಪಾತಕ್ಕೆ ಧುಮುಕಲು ನಿರ್ಧರಿಸಿದರು. ಆದರೆ, ಜಲಪಾತದ ರಭಸದ ಪ್ರವಾಹಕ್ಕೆ ಅವರು ಕೊಚ್ಚಿ ಹೋಗಿದ್ದಾರೆ. ಆ ವ್ಯಕ್ತಿಯ 10 ವರ್ಷದ ಮಗಳು ತನ್ನ ತಂದೆಯ ಸಾಹಸಮಯ ಸಾಹಸವನ್ನು ರೆಕಾರ್ಡ್ ಮಾಡುತ್ತಿದ್ದಳು. ಮೇಲೆ ಹತ್ತಲು ಏನಾದರೂ ಸಿಗುತ್ತದೆಯೇ ಎಂದು ಆತ ಹುಡುಕಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ