ಸಿದ್ದರಾಮಯ್ಯ ಮೇಲಿನ ರಾಜಕೀಯ ವೈರತ್ವವನ್ನು ಅವರ ಮಗನ ಮೇಲೆ ತೀರಿಸಿಕೊಳ್ಳುವುದು ಸರಿಯಲ್ಲ: ಭೈರತಿ ಸುರೇಶ್, ಸಚಿವ,
ಸಚಿವ ಸುರೇಶ್ ಮಾತಾಡುವಾಗ ಮುಡಾ ಅಧ್ಯಕ್ಷ ಕೆ ಮರಿಗೌಡ ಪ್ರತಿಯೊಂದು ಮಾತಿಗೂ ಮೂಗು ತೂರಿಸುತ್ತಾ ಅವರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದರು. ಅವರ ಕಾಟ ವಿಪರೀತವಾದಾಗ ಎಲ್ಲರ ಮುಂದೆಯೇ ಅಸಮಾಧಾನ ವ್ಯಕ್ತಪಡಿಸುವ ಸುರೇಶ್ ಸ್ವಲ್ಲ ಸಮ್ಮನಿರ್ತೀರಾ ಗೌಡ್ರೆ? ನಾನು ಮಾತಾಡ್ತೀದ್ದೀನಲ್ಲ? ನಂಗೆ ಮಾತಾಡಲು ಬಿಡಿ ಅನ್ನುತ್ತಾರೆ. ಇಂಗು ತಿಂದ ಮಂಗನಂತಾಗುವ ಮರಿಗೌಡ ಅದನ್ನು ಮುಚ್ಚಿಕೊಳ್ಳಲು ದೇಶಾವರಿ ನಗೆ ಬೀರುತ್ತಾರೆ.
ಮೈಸೂರು: ಮೈಸೂರು ನಗರಾಭಿವೃಧ್ಧಿ ಪ್ರಾಧಿಕಾರದಲ್ಲಿ (ಮುಡಾ) ಅಕ್ರಮಗಳು ನಡೆದಿವೆಯೆಂಬ ಆರೋಪಗಳಿಗೆ ಸಂಬಂಧಿಸಿದಂತೆ ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ನಗರಾಭಿವೃದ್ಧಿ ಖಾತೆ ಸಚಿವ ಬೈರತಿ ಸುರೇಶ್, ಇಲಾಖೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಮುಡಾ ಆಯುಕ್ತ ದಿನೇಶ್ ಕುಮಾರ್, ಕಾರ್ಯದರ್ಶಿ ಮತ್ತು ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನೀಯರ್ ಅವರ ವರ್ಗಾವಣೆ ಮಾಡಲಾಗಿದೆ, ಅಕ್ರಮಗಳ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಸಚಿವ ಹೇಳಿದರು. ಅಸಲಿಗೆ ಬಿಜೆಪಿ ಎಮ್ಮೆಲ್ಸಿ ಹೆಚ್ ವಿಶ್ವನಾಥ್ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಆದರೆ ಅವರ ಹೆಸರು ಉಲ್ಲೇಖಿಸದೆ ಸೈಟ್ ಗಾಗಿ ಅರ್ಜಿ ಸಲ್ಲಿಸಿರುವುದನ್ನು ಸುರೇಶ್ ಬಹಿರಂಗ ಪಡಿಸಿದರು. ಮುಡಾ ವ್ಯವಹಾರಗಳಲ್ಲಿ ಕಾಂಗ್ರೆಸ್ ಎಮ್ಮೆಲ್ಸಿ ಡಾ ಯತೀಂದ್ರ ಸಿದ್ದರಾಮಯ್ಯನವರ ಯಾವುದೇ ಪಾತ್ರವಿಲ್ಲ ಎಂದು ಹೇಳಿದ ಸುರೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲಿನ ರಾಜಕೀಯ ದ್ವೇಷವನ್ನು ಅವರ ಮಗನಿಗೆ ಕಳಂಕ ತರುವ ರೀತಿಯಲ್ಲಿ ತೀರಿಸಿಕೊಳ್ಳಬಾರದು. ಎಂದು ಸುರೇಶ್ ಹೇಳಿದರು. ವಿಶ್ವನಾಥ್ ಅವರಿಗೆ ಎಲ್ಲರನ್ನೂ ನಿಂದಿಸುವ ಚಟವಿದೆ, ದೇವೇಗೌಡ ಮತ್ತು ಕುಮಾರಸ್ವಾಮಿಯವರನ್ನೂ ಅವರು ಬಿಟ್ಟಿಲ್ಲ, ಆದರೆ ತಾನು ಅವರ ಮಟ್ಟಕ್ಕೆ ಇಳಿಯಲಾರೆ ಎಂದು ಸಚಿವ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗ್ಯಾರಂಟಿ ಯೋಜನೆ ನಿಲ್ಲುತ್ತವೆ ಅಂತ ಹೇಳಲು ಕುಮಾರಸ್ವಾಮಿಯೇನು ಮುಖ್ಯಮಂತ್ರಿಯೇ? ಭೈರತಿ ಸುರೇಶ್-ಸಚಿವ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ

