ನಿಮಗೆ ಹಾಲು ಹಾಕಿ ಮಾಡುವ ಚಹಾ ಗೊತ್ತೇ ಇರುತ್ತದೆ.. ಅದೂ ಬಿಡಿ, ಲೆಮೆನ್ ಟೀ, ಗ್ರೀನ್ ಟೀಗಳೂ ಫೇಮಸ್ ಆಗಿವೆ. ಇನ್ನೂ ಮುಂದೆ ಹೋದರೆ ಚಾಕಲೇಟ್ ಟೀ ಬಗ್ಗೆಯೂ ಕೇಳಿದ್ದಿರಬಹುದು. ಆದರೆ ಬೆಣ್ಣೆ ಚಾಯ್ ಗೊತ್ತಿರಲಿಕ್ಕಿಲ್ಲ.. !
ಆಗ್ರಾದ ಫುಡ್ ಸ್ಟಾಲ್ (ತಿಂಡಿ ಅಂಗಡಿ)ವೊಂದರಲ್ಲಿ ಬೆಣ್ಣೆಯನ್ನು ಹಾಕಿ ಚಹಾ ತಯಾರಿಸುತ್ತಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಈ ಚಾಯ್ ನೋಡಿದ ಟೀ ಪ್ರಿಯರು ಹೆಚ್ಚಾಗಿ ಅಸಮಾಧಾನವನ್ನೇ ವ್ಯಕ್ತಪಡಿಸಿದ್ದು ಸೋಜಿಗ.
ಹಾಲು ಹಾಕಿ ಚಹಾ ತಯಾರು ಮಾಡಿಕೊಂಡು, ಅದು ಕುದಿಯುತ್ತಿರುವಾಗ ಒಂದು ಪೀಸ್ನಷ್ಟು ಅಂದರೆ ಸುಮಾರು 100 ಗ್ರಾಂಗಳಷ್ಟು ಅಮುಲ್ ಬೆಣ್ಣೆಯನ್ನು ಅದಕ್ಕೆ ಹಾಕುವ ವಿಡಿಯೋವನ್ನು Foodieagraaaa ಎಂಬ ಇನ್ಸ್ಟಾಗ್ರಾಂ ಪೇಜ್ ಶೇರ್ ಮಾಡಿಕೊಂಡಿದೆ. ಹಾಗೇ, ಇದು ಬಾಬಾ ಟೀ ಸ್ಟಾಲ್ನ ಸ್ಪೆಶಲ್ ಪ್ರಯೋಗ ಎಂದೂ ಹೇಳಿದೆ.
ಆದರೆ ಇಂಥ ವಿಚಿತ್ರ ಕಾಂಬಿನೇಶನ್ನ ಚಹಾ ನೋಡಿ, ಟೀ ಪ್ರಿಯರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಯ್ಯೋ ಇದು ಅಸಹ್ಯ ಎಂದಿದ್ದಾರೆ. ವಿಡಿಯೋ ಶೇರ್ ಆದ ಕೆಲವೇ ಹೊತ್ತಲ್ಲಿ 251 ಸಾವಿರಕ್ಕೂ ಹೆಚ್ಚು ವೀವ್ಸ್ ಪಡೆದಿದೆ. ಸುಮಾರು 3000 ಕಾಮೆಂಟ್ಗಳು ಬಂದಿವೆ.
Published On - 6:56 pm, Sun, 17 January 21