ಅಹಮದಾಬಾದ್​ ವಿಮಾನ ಪತನ: ಕೊನೆಯ ಕ್ಷಣದಲ್ಲಿ ಕೈಕೊಟ್ಟ ನೊಗ ಪಂಪರ್, ಲಿಫ್ಟ್ ಗೇರ್

ಭಾರತಕ್ಕೆ ಇದೊಂದು ಕರಾಳ ದಿನವಾಗಿದೆ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171, ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡಿದೆ. 242 ಜನರನ್ನು ಹೊತ್ತು ಲಂಡನ್​​​​​​​​ನತ್ತ ಹಾರಿತು. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಂದರೆ 1.38 ಕ್ಕೆ ಅಪಘಾತಕ್ಕೀಡಾಯಿತು. ಆದರೆ ಇದಕ್ಕೆ ಕೆಲವೊಂದು ಕಾರಣಗಳನ್ನು ತಜ್ಞರು ತಿಳಿಸಿದ್ದಾರೆ. ಅವುಗಳು ಯಾವುವು ಇಲ್ಲಿದೆ ನೋಡಿ.

ಅಹಮದಾಬಾದ್​ ವಿಮಾನ ಪತನ: ಕೊನೆಯ ಕ್ಷಣದಲ್ಲಿ ಕೈಕೊಟ್ಟ ನೊಗ ಪಂಪರ್, ಲಿಫ್ಟ್ ಗೇರ್
ವಿಮಾನ ಪತನ

Updated on: Jun 13, 2025 | 10:24 AM

ಗುರುವಾರದಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171, (Air India Plane Crash) ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡಿದೆ. 672 ಅಡಿ ಎತ್ತರದಿಂದ ಮೆಡಿಕಲ್​​​​​​​​ ಹಾಸ್ಟೆಲ್​​​ ಮೇಲೆ ಬಂದು ಅಪ್ಪಳಿಸಿದೆ. ಈ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡಿದೆ. ಒಂದು ವಿಮಾನ ನಿಯಂತ್ರಣ ಕಳೆದುಕೊಂಡ ನಂತರ ಪೈಲಟ್‌​​​​ ವಿಮಾನವನ್ನು ನಿಯಂತ್ರಣ ಮಾಡಲು ವಿಮಾನದ ಒಳಗೆ ಇರುವ ಕೆಲವೊಂದು ತಂತ್ರಗಳನ್ನು ಬಳಸುತ್ತಾರೆ. ಆದರೆ ಏರ್ ಇಂಡಿಯಾ ವಿಮಾನ AI-171 ಈ ಎಲ್ಲ ತಂತ್ರಗಳು ಕೈಕೊಟ್ಟಿದೆ. ಕೊನೆಯ ಕ್ಷಣದಲ್ಲಿ ಕಾಕ್‌ಪಿಟ್​​​ನಲ್ಲಿ ನಡೆದಿರುವ ಬಗ್ಗೆ ಮಾಜಿ ಹಿರಿಯ ಪೈಲಟ್ ಕ್ಯಾಪ್ಟನ್ ಸೌರಭ್ ಭಟ್ನಾಗರ್ ಎನ್​​​​ಡಿಟಿವಿ ತಿಳಿಸಿದ್ದಾರೆ.

ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು 230 ಪ್ರಯಾಣಿಕರು, 10 ಸಿಬ್ಬಂದಿ ಮತ್ತು ಇಬ್ಬರು ಪೈಲಟ್‌ಗಳು ಸೇರಿದಂತೆ 242 ಜನರನ್ನು ಹೊತ್ತು ಲಂಡನ್​​​​​​​​ನತ್ತ ಹಾರಿತು. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಂದರೆ 1.38 ಕ್ಕೆ ಅಪಘಾತಕ್ಕೀಡಾಯಿತು. ವೈರಲ್​​ ಆಗಿರುವ ವಿಡಿಯೋಗಳನ್ನು ಒಮ್ಮೆ ನೋಡಿದ್ರೆ ಈ ವಿಮಾನ ಟೇಕ್ ಆಫ್ ಆಗಲು ಈ ವಿಮಾನ  ಹೆಣಗಾಡುತ್ತಿರುವುದನ್ನು ಕಾಣಬಹುದು. ನಂತರ ಅದು ಲಿಫ್ಟ್ ಆಗಿ ನಿಯಂತ್ರಣ ಕಳೆದುಕೊಂಡು ಕಟ್ಟಡಕ್ಕೆ ಅಪ್ಪಳಿಸುತ್ತದೆ.

ತಜ್ಞರು ಹೇಳುವ ಪ್ರಕಾರ, ಸುರಕ್ಷತಾ ದಾಖಲೆಯನ್ನು ಹೊಂದಿದ ಬೋಯಿಂಗ್ 787-8 ಡ್ರೀಮ್‌ಲೈನರ್ ಮೇಲಕ್ಕೆ ಹಾರುತ್ತಿದ್ದಂತೆ ಒತ್ತಡವನ್ನು ಅನುಭವಿಸಿತು. ಪೈಲಟ್‌ಗಳು ಈ ಸಮಯದಲ್ಲಿ ವಿಮಾನದ ಲಿಫ್ಟ್ ಗೇರ್ ಮತ್ತು ಎತ್ತರವನ್ನು ಪಡೆಯಲು ನೊಗ ಪಂಪರ್​​​ನ್ನು ಎಳೆಯುತ್ತಾರೆ. ಆದರೆ ಇದು ಯಾವುದು ಕೂಡ ಆ ಸಮಯದಲ್ಲಿ ಕೆಲಸಕ್ಕೆ ಬಂದಿಲ್ಲ. ಈ ಸಮಯದಲ್ಲಿ ಲ್ಯಾಂಡಿಂಗ್ ಗೇರ್ ಕೂಡ ಕೈಕೊಟ್ಟಿರಬಹುದು. ಇಂತಹ ಅಪಾಯದ ಸಮಯದಲ್ಲಿ ಪೈಲಟ್‌ ಮೇಡೇ ಎಂಬ ಕರೆಯನ್ನು ನೀಡುತ್ತಾರೆ. ಟೇಕ್ ಆಫ್ ಆದ ನಂತರ ಈ ಕರೆಯನ್ನು ನೀಡಲಾಯಿತು. 174 ನಾಟ್‌ಗಳು ವಿಮಾನದ ಗರಿಷ್ಠ ವೇಗವಾಗಿರುತ್ತದೆ. ಆದರೆ ಈ ವಿಮಾನದಲ್ಲಿ ಅದಕ್ಕಿಂತಲ್ಲೂ ವೇಗವಾಗಿತ್ತು. ಆದರೆ ಈ ವೇಳೆ ಇಂಜಿನ್​​​ ಕೂಡ ಸಾಕಷ್ಟು ಶಕ್ತಿಯನ್ನು ಉತ್ಪಾದಿಸಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮೃತರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಘೋಷಿಸಿದ ಟಾಟಾ ಗ್ರೂಪ್

ಟೇಕ್-ಆಫ್ ಪ್ರಕ್ರಿಯೆ ಸರಿಯಾಗಿತ್ತು ಎಂಬುದನ್ನು ನಾವು ನಂಬುತ್ತೇವೆ. ಆದರೆ ಗೇರ್ ತೆಗೆದುಕೊಳ್ಳುವ ಮೊದಲು ವಿಮಾನ ಕೆಳಮುಖಕ್ಕೆ ಇಳಿದಿದೆ. ಎಂಜಿನ್ ಶಕ್ತಿಯನ್ನು ಕಳೆದುಕೊಂಡರೆ ಅಥವಾ ವಿಮಾನವು ಲಿಫ್ಟ್ ಗೇರ್​​​  ಚಲಿಸುವುದನ್ನು ನಿಲ್ಲಿಸಿದರೆ ಮಾತ್ರ ಇಂತಹ ಅಪಾಯಗಳು ಸಂಭವಿಸುತ್ತದೆ. ಒಟ್ಟಾರೆಯಾಗಿ ತನಿಖೆಯ ನಂತರವೇ ನಿಖರವಾದ ಕಾರಣ ತಿಳಿಯುವುದು ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:21 am, Fri, 13 June 25