Video: ಭಾರವಾದ ಹೃದಯದಿಂದ ತಮ್ಮನ ಅಂತ್ಯಕ್ರಿಯೆ ನೆರವೇರಿಸಿದ ಏರ್ ಇಂಡಿಯಾ ಅಪಘಾತದಲ್ಲಿ ಬದುಕುಳಿದಿದ್ದ ವ್ಯಕ್ತಿ

ಗುಜರಾತ್​​ನ ಅಹಮದಾಬಾದ್​ನಲ್ಲಿ ಇತ್ತೀಚೆಗೆ ನಡೆದ ಏರ್ ಇಂಡಿಯಾ(Air India) ವಿಮಾನ ದುರಂತದಲ್ಲಿ ಬದುಕುಳಿದಿದ್ದ ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅವರ ಸಹೋದರನ ಅಂತ್ಯಸಂಸ್ಕಾರ ನೆರವೇರಿಸಬೇಕಿರುವ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ. ಏಪ್ರಿಲ್ 12ರಂದು ಲಂಡನ್​​ಗೆ ಹೊರಟಿದ್ದ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್​ ಮತ್ತು ಕ್ಯಾಂಟೀನ್​​ಗೆ ಡಿಕ್ಕಿ ಹೊಡೆದಿತ್ತು.

Video: ಭಾರವಾದ ಹೃದಯದಿಂದ ತಮ್ಮನ ಅಂತ್ಯಕ್ರಿಯೆ ನೆರವೇರಿಸಿದ ಏರ್ ಇಂಡಿಯಾ ಅಪಘಾತದಲ್ಲಿ ಬದುಕುಳಿದಿದ್ದ ವ್ಯಕ್ತಿ
ರಮೇಶ್

Updated on: Jun 18, 2025 | 2:13 PM

ನವದೆಹಲಿ, ಜೂನ್ 18: ಗುಜರಾತ್​​ನ ಅಹಮದಾಬಾದ್​ನಲ್ಲಿ ಇತ್ತೀಚೆಗೆ ಸಂಭವಿಸಿದ ಏರ್ ಇಂಡಿಯಾ(Air India) ವಿಮಾನ ದುರಂತದಲ್ಲಿ ಬದುಕುಳಿದಿದ್ದ ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅವರ ಸಹೋದರನ ಅಂತ್ಯಸಂಸ್ಕಾರ ನೆರವೇರಿಸಬೇಕಿರುವ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ. ಏಪ್ರಿಲ್ 12ರಂದು ಲಂಡನ್​​ಗೆ ಹೊರಟಿದ್ದ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್​ ಮತ್ತು ಕ್ಯಾಂಟೀನ್​​ಗೆ ಡಿಕ್ಕಿ ಹೊಡೆದಿತ್ತು.

ಅದರಲ್ಲಿದ್ದ 242 ಮಂದಿ ಪೈಕಿ ಕೇವಲ ಒಬ್ಬರು ಮಾತ್ರ ಬದುಕುಳಿದಿದ್ದರು ಅವರೇ ರಮೇಶ್​. ಆದರೆ ದುರಾದೃಷ್ಟವಶಾತ್ ಜತೆಯಲ್ಲಿದ್ದ ಸಹೋದರ ಪ್ರಾಣಬಿಟ್ಟಿದ್ದರು. ಅವರ ಅಂತ್ಯಕ್ರಿಯೆ ನಡೆಸಬೇಕಾದ ಕಾರಣ ಹೋಗುತ್ತಿದ್ದೇನೆ ಎಂದು ರಮೇಶ್​ ತಿಳಿಸಿದ್ದಾರೆ.

ಇದನ್ನೂ ಓದಿ
ಭಾರತವನ್ನು ಬೆಚ್ಚಿ ಬೀಳಿಸಿದ 8 ಭಯಾನಕ ವಿಮಾನ ದುರಂತಗಳಿವು
ಅಹಮದಾಬಾದ್​​ನಲ್ಲಿ ಏರ್ ಇಂಡಿಯಾ ವಿಮಾನ ಪತನ; 241 ಪ್ರಯಾಣಿಕರ ಸಾವು
ಒಂದು ವಾರದ ಹಿಂದೆಯೇ ವಿಮಾನ ಅಪಘಾತದ ಭವಿಷ್ಯ ನುಡಿದಿದ್ದ ಜ್ಯೋತಿಷಿ!
ನಾಳೆ ಅಹಮದಾಬಾದ್​​ಗೆ ಮೋದಿ ಭೇಟಿ; ಭಾರತಕ್ಕೆ ಸಹಾಯಹಸ್ತ ಚಾಚಿದ ಟ್ರಂಪ್

ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವು ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. 2011 ರಲ್ಲಿ ಈ ಮಾದರಿಯ ವಿಮಾನ ವಾಣಿಜ್ಯ ಸೇವೆಗೆ ಪ್ರವೇಶಿಸಿದ ನಂತರ ಸಂಭವಿಸಿದ ಮೊದಲ  ಅಪಘಾತ ಇದಾಗಿದೆ.

ವಿಮಾನದಲ್ಲಿ ರಮೇಶ್ ತುರ್ತು ನಿರ್ಗಮನ ದ್ವಾರದ ಪಕ್ಕದಲ್ಲಿ 11A ನಲ್ಲಿ ಕುಳಿತಿದ್ದರು. ಅಪಘಾತದ ಸಂದರ್ಭದಲ್ಲಿ ಅವರ ಸೀಟು ಬೇರ್ಪಟ್ಟು ದೂರ ಹಾರಿತ್ತು. ಹೀಗಾಗಿ ಬೆಂಕಿಯಿಂದ ಪಾರಾಗಿದ್ದರು. ಸೀಟಿನ ಸಮೇತ ಕೆಳಗೆ ಹಾರಿದ್ದರು. ವಿಮಾನ ತುಂಡಾಗಿ ಸೀಟು ಕೂಡ ಕಳಚಿಬಂದಿತ್ತು ಎಂದು ವೈದ್ಯರಿಗೆ ರಮೇಶ್​ ತಿಳಿಸಿದ್ದರು.

ತಾನು ಇಳಿದ ಸ್ಥಳ ತಗ್ಗಾಗಿತ್ತು, ಸೀಟ್ ಬೆಲ್ಟ್​ ತೆಗೆದೆ ಒಂದು ಕ್ಷಣ ಮೈಯೆಲ್ಲಾ ಕಂಪಿಸಿತ್ತು, ಆದರೆ ನಾನು ಭೂಮಿಗೆ ತುಂಬಾ ಹತ್ತಿರವಾಗಿದ್ದೆ, ಹಾಗಾಗಿ  ಹೊರಬರಲು ಪ್ರಯತ್ನಿಸಿದೆ ಎಂದು ತಿಳಿಸಿದ್ದಾರೆ.
ವಿಮಾನ ಅಪಘಾತದ ಸ್ವಲ್ಪ ಸಮಯದ ನಂತರ ಅವರು ಬಿಜೆ ವೈದ್ಯಕೀಯ ಕ್ಯಾಂಪಸ್‌ನಿಂದ ಹೊರಬರುತ್ತಿರುವ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು.

ಮತ್ತಷ್ಟು ಓದಿ: Air India Plane Crash: ಅಹಮದಾಬಾದ್: ಏರ್​ ಇಂಡಿಯಾ ವಿಮಾನ ದುರಂತ, ಕೊನೆಗೂ ಎರಡನೇ ಬ್ಲ್ಯಾಕ್​ಬಾಕ್ಸ್​ ಪತ್ತೆ

ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇದಕ್ಕೂ ಮೊದಲು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವಾರು ನಾಯಕರು ಆಸ್ಪತ್ರೆಯಲ್ಲಿ ಅವರನ್ನು ಭೇಟಿಯಾದರು.

ರಮೇಶ್ ತಾವು ಬದುಕುಳಿದಿದ್ದು ಒಂದು ಪವಾಡ ಎಂದು ಬಣ್ಣಿಸಿದ್ದಾರೆ, ನಾನು ಹೇಗೆ ಬದುಕುಳಿದೆ ಎಂದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ರಮೇಶ್ ವರದಿಗಾರರಿಗೆ ತಿಳಿಸಿದರು. ನಾನು ಸಾಯುತ್ತೇನೆ ಎಂದು ಭಾವಿಸಿದ್ದೆ. ನನ್ನ ಕಣ್ಣ ಮುಂದೆಯೇ ಜನರು ಸತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:53 pm, Wed, 18 June 25