ಜೈಪುರದಲ್ಲಿ ಪೆಟ್ಟಿಗೆಯಿಂದ ಹೊರಬಂದ 2,400 ವರ್ಷ ಹರೆಯದ Tutu Mummy

| Updated By: ಸಾಧು ಶ್ರೀನಾಥ್​

Updated on: Aug 19, 2020 | 1:45 PM

ಜೈಪುರ: ದೇಶಾದ್ಯಂತ ಮಳೆರಾಯನ ಆರ್ಭಟ ತಾರಕಕ್ಕೇರಿದ್ದು ಹಲವರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಮಳೆ ತಂದೊಡ್ಡಿರುವ ನೆರೆಯಿಂದ ನೂರಾರು ಮಂದಿ ತಮ್ಮ ತಮ್ಮ ಮನೆ, ಗುಡಿಸಲುಗಳನ್ನ ತೊರೆಯುವಂಥ ಸ್ಥಿತಿ ಎದುರಾಗಿದೆ. ಈ ಪರಿಸ್ಥಿತಿ ಕೇವಲ ಬದುಕಿರುವವರಿಗೆ ಮಾತ್ರವಲ್ಲದೇ 2,400 ವರ್ಷಗಳ ಹಿಂದೆ ಅಸುನೀಗಿದ್ದ ಈಜಿಪ್ಟ್​ ದೇಶದಿಂದ ರಾಜಸ್ಥಾನಕ್ಕೆ ತಂದಿದ್ದ ಪುರಾತನ ಮಮ್ಮಿಗೂ ಸಹ ಎದುರಾಗಿದೆ. ಹೌದು, ಈಜಿಪ್ಟ್​ನ ಪರ್ಸಿಪೋಲಿಸ್​ ಪ್ರಾಂತ್ಯದಲ್ಲಿ ಪತ್ತೆಯಾಗಿದ್ದ ಈ 2,400 ವರ್ಷಗಳ ಪುರಾತನ ಮಮ್ಮಿಯನ್ನ 130 ವರ್ಷಗಳ ಹಿಂದೆ ರಾಜಸ್ಥಾನದ ಜೈಪುರದಲ್ಲಿರುವ ಆಲ್ಬರ್ಟ್ ಹಾಲ್​ […]

ಜೈಪುರದಲ್ಲಿ ಪೆಟ್ಟಿಗೆಯಿಂದ ಹೊರಬಂದ 2,400 ವರ್ಷ ಹರೆಯದ Tutu Mummy
Follow us on

ಜೈಪುರ: ದೇಶಾದ್ಯಂತ ಮಳೆರಾಯನ ಆರ್ಭಟ ತಾರಕಕ್ಕೇರಿದ್ದು ಹಲವರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಮಳೆ ತಂದೊಡ್ಡಿರುವ ನೆರೆಯಿಂದ ನೂರಾರು ಮಂದಿ ತಮ್ಮ ತಮ್ಮ ಮನೆ, ಗುಡಿಸಲುಗಳನ್ನ ತೊರೆಯುವಂಥ ಸ್ಥಿತಿ ಎದುರಾಗಿದೆ. ಈ ಪರಿಸ್ಥಿತಿ ಕೇವಲ ಬದುಕಿರುವವರಿಗೆ ಮಾತ್ರವಲ್ಲದೇ 2,400 ವರ್ಷಗಳ ಹಿಂದೆ ಅಸುನೀಗಿದ್ದ ಈಜಿಪ್ಟ್​ ದೇಶದಿಂದ ರಾಜಸ್ಥಾನಕ್ಕೆ ತಂದಿದ್ದ ಪುರಾತನ ಮಮ್ಮಿಗೂ ಸಹ ಎದುರಾಗಿದೆ.

ಹೌದು, ಈಜಿಪ್ಟ್​ನ ಪರ್ಸಿಪೋಲಿಸ್​ ಪ್ರಾಂತ್ಯದಲ್ಲಿ ಪತ್ತೆಯಾಗಿದ್ದ ಈ 2,400 ವರ್ಷಗಳ ಪುರಾತನ ಮಮ್ಮಿಯನ್ನ 130 ವರ್ಷಗಳ ಹಿಂದೆ ರಾಜಸ್ಥಾನದ ಜೈಪುರದಲ್ಲಿರುವ ಆಲ್ಬರ್ಟ್ ಹಾಲ್​ ಸಂಗ್ರಹಾಲಯಕ್ಕೆ ತರಲಾಗಿತ್ತು. ಟುಟು ಎಂಬ ಮಹಿಳೆಯ ಕಳೇಬರ ಇದಾಗಿದ್ದು ಮ್ಯೂಸಿಯಂ ಮುಖ್ಯ ಆಕರ್ಷಣೆಯಾಗಿ ಸಹ ಮಾರ್ಪಾಡಾಗಿತ್ತು.

ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಮಮ್ಮಿ ಬಚಾವ್​!
ಆದರೆ, ಕಳೆದ ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆಯ ಪರಿಣಾಮವಾಗಿ ಸಂಗ್ರಹಾಲಯಕ್ಕೆ ನೀರು ನುಗ್ಗಿಬಿಟ್ಟಿತು. ಇದರಿಂದ ಪ್ರದರ್ಶನಕ್ಕೆ ಇಡಲಾಗಿದ್ದ ಸಾಕಷ್ಟು ಪುರಾತನ ವಸ್ತುಗಳಿಗೆ ಹಾನಿ ಉಂಟಾಯಿತು. ಆದರೆ, ಅದೃಷ್ಟವಶಾತ್, ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಮಮ್ಮಿಯನ್ನ ಪ್ರದರ್ಶನಕ್ಕೆ ಇರಿಸಲಾಗಿದ್ದ ಗಾಜಿನ ಪೆಟ್ಟಿಗೆ ಒಡೆದು ಹೊರತರಲಾಯಿತು. ಸಂಗ್ರಹಾಲದ ಅಧೀಕ್ಷಕ ಡಾ. ರಾಕೇಶ್​ ಪ್ರಕಾರ ಸಿಬ್ಬಂದಿಯ ಕೆಲವೇ ನಿಮಿಷಗಳು ತಡಮಾಡಿದ್ದರೆ 2,400 ವರ್ಷಗಳ ಐತಿಹ್ಯ ಹೊಂದಿರುವ ಈ ಮಹತ್ವಪೂರ್ಣ ಅವಶೇಷವನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತಿತ್ತು.

ಸದ್ಯ, ಟುಟು ಮಮ್ಮಿಯನ್ನ ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದ್ದು ಇತರೆ ಪ್ರಾಚೀನ ವಸ್ತುಗಳಿಗೆ ಉಂಟಾಗಿರುವ ಹಾನಿಯನ್ನ ಸರಿಪಡಿಸಲು ಸಂಗ್ರಹಾಲಯವನ್ನು ಏಳು ದಿನಗಳ ಕಾಲ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

Published On - 1:42 pm, Wed, 19 August 20