ಎಲ್ಲ ರಾಜ್ಯಗಳಲ್ಲಿ ಜ.2ರಿಂದ ಲಸಿಕೆಗಳ ಪ್ರಾಯೋಗಿಕ ವಿತರಣೆಗೆ ಕೇಂದ್ರ ಸರ್ಕಾರ ನಿರ್ಧಾರ

| Updated By: Lakshmi Hegde

Updated on: Dec 31, 2020 | 4:18 PM

ಲಸಿಕೆ ಅಭಿಯಾನಕ್ಕೆ ಭಾರತ ಸನ್ನದ್ಧವಾಗಿದೆ ಎಂದು ಎರಡು ದಿನಗಳ ಡ್ರೈರನ್​ ನಿರೂಪಿಸಿದೆ. ಡ್ರೈರನ್​ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ನಾಲ್ಕೂ ರಾಜ್ಯಗಳು ವಿತರಣೆಗಾಗಿ ಮಾಡಿಕೊಂಡಿರುವ ವ್ಯವಸ್ಥೆಗೆ ತೃಪ್ತಿ ವ್ಯಕ್ತಪಡಿಸಿವೆ ಎಂದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಎಲ್ಲ ರಾಜ್ಯಗಳಲ್ಲಿ ಜ.2ರಿಂದ ಲಸಿಕೆಗಳ ಪ್ರಾಯೋಗಿಕ ವಿತರಣೆಗೆ ಕೇಂದ್ರ ಸರ್ಕಾರ ನಿರ್ಧಾರ
ಸಾಂದರ್ಭಿಕ ಚಿತ್ರ
Follow us on

ದೆಹಲಿ: ದೇಶದ ಎಲ್ಲ ರಾಜ್ಯಗಳಲ್ಲಿ ಶನಿವಾರ (ಜ.2) ಕೋವಿಡ್​ ಲಸಿಕೆಯ ಪ್ರಾಯೋಗಿಕ ವಿತರಣೆ (ಡ್ರೈರನ್) ನಡೆಯಲಿದೆ. ಲಸಿಕೆಯೊಂದಕ್ಕೆ ಶೀಘ್ರದಲ್ಲಿಯೇ ಅನುಮತಿ ದೊರೆಯುವ ಸಾಧ್ಯತೆಯೂ ಇದೆ ಎಂದು ಸರ್ಕಾರ ಮುನ್ಸೂಚನೆ ನೀಡಿದೆ.

ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಇಂದು (ಡಿ.31) ಉನ್ನತ ಮಟ್ಟದ ಸಭೆ ನಡೆಸಿದರು. ಸಭೆಯಲ್ಲಿ ಡ್ರೈರನ್ ನಡೆಸುವ ತೀರ್ಮಾನ ತೆಗೆದುಕೊಳ್ಳಲಾಯಿತು. ಇದು ದೇಶದಲ್ಲಿ ನಡೆಯುತ್ತಿರುವ ಎರಡನೇ ಡ್ರೈರನ್​. ಈ ಮೊದಲು ಡಿಸೆಂಬರ್ 28 ಮತ್ತು 29ರಂದು ನಾಲ್ಕು ರಾಜ್ಯಗಳಲ್ಲಿ ಡ್ರೈರನ್​ ನಡೆದಿತ್ತು. ಈ ವೇಳೆ ಲಸಿಕೆ ವಿತರಣೆಗಾಗಿ ರೂಪಿಸಿರುವ ವ್ಯವಸ್ಥೆಯಲ್ಲಿ ಯಾವುದೇ ಲೋಪ ಪತ್ತೆಯಾಗಲಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಈಗಾಗಲೇ ಗುರುತಿಸಿರುವ ಪ್ರದೇಶಗಳಲ್ಲಿ ಪ್ರತಿ ರಾಜ್ಯದಲ್ಲಿಯೂ ಡ್ರೈರನ್ ನಡೆಯಲಿದೆ. ಪ್ರಾಯೋಗಿಕ ಅಭಿಯಾನದಲ್ಲಿ ಪಾಲ್ಗೊಳ್ಳುವವರಿಗೆ ಕೊರೊನಾ ಲಸಿಕೆಯ ಮಾದರಿಯ ಬೇರೊಂದು ಚುಚ್ಚುಮದ್ದು ನೀಡಲಾಗುತ್ತದೆ. ಲಸಿಕೆ ವಿತರಣೆ ಅಭಿಯಾನದಲ್ಲಿ ಇರಬಹುದಾದ ಲೋಪದೋಷಗಳನ್ನು ಪತ್ತೆಹಚ್ಚುವುದು ಮತ್ತು ಸರಿಪಡಿಸುವುದು ಡ್ರೈರನ್​ನ ಮುಖ್ಯ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದರು.

ಲಸಿಕೆ ಅಭಿಯಾನಕ್ಕೆ ಭಾರತ ಸನ್ನದ್ಧವಾಗಿದೆ ಎಂದು ಎರಡು ದಿನಗಳ ಡ್ರೈರನ್​ ನಿರೂಪಿಸಿದೆ. ಡ್ರೈರನ್​ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ನಾಲ್ಕೂ ರಾಜ್ಯಗಳು ವಿತರಣೆಗಾಗಿ ಮಾಡಿಕೊಂಡಿರುವ ವ್ಯವಸ್ಥೆಗೆ ತೃಪ್ತಿ ವ್ಯಕ್ತಪಡಿಸಿವೆ ಎಂದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಹೊಸವರ್ಷದ ಕೊಡುಗೆ

ಹೊಸವರ್ಷ ಆರಂಭವಾದ ಕೆಲವೇ ದಿನಗಳಲ್ಲಿ ದೇಶವ್ಯಾಪಿ ಕೊರೊನಾ ಲಸಿಕೆ ವಿತರಣೆ ಆರಂಭವಾಗಬಹುದು ಎಂಬ ನಿರೀಕ್ಷೆ ಸಮಾಜದಲ್ಲಿ ವ್ಯಕ್ತವಾಗಿದೆ. ‘ಹೊಸ ವರ್ಷದಲ್ಲಿ ನಮ್ಮ ಕೈಲಿ ಭರವಸೆ ಇರುತ್ತದೆ’ ಎಂಬ ರಾಷ್ಟ್ರೀಯ ಮಹಾ ಔಷಧ ನಿಯಂತ್ರಕರಾದ ಡಾ.ವಿ.ಜಿ.ಸೊಮಾನಿ ಅವರ ಹೇಳಿಕೆಯನ್ನು ಈ ಹಿನ್ನೆಲೆಯಲ್ಲಿಯೇ ವ್ಯಾಖ್ಯಾನಿಸಲಾಗುತ್ತಿದೆ.
ಕೊರೊನಾ ಲಸಿಕೆಯನ್ನು ದೇಶದಲ್ಲಿ ವಿತರಣೆಗೆ ಅನುಮತಿ ನೀಡುವ ವಿಚಾರ ಪರಾಮರ್ಶಿಸಲು ನಾಳೆ (ಜ.1) ಮಹತ್ವದ ಸಭೆ ನಿಗದಿಯಾಗಿದೆ. ಸೆರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ, ಭಾರತ್ ಬಯೋಟೆಕ್ ಮತ್ತು ಫೈಝರ್​ ಕಂಪನಿಗಳ ಲಸಿಕೆಗಳ ಪ್ರಸ್ತಾವವನ್ನು ತಜ್ಞರ ಮಂಡಳಿ ಪರಾಮರ್ಶಿಸಲಿದೆ.

ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಮತ್ತು ಫಾರ್ಮಾ ವಲಯದ ದೈತ್ಯ ಕಂಪನಿ ಆಸ್ಟ್ರಾಜೆನೆಕಾ ರೂಪಿಸಿರುವ ಕೋವಿಶೀಲ್ಡ್​ಗೆ ಅನುಮೋದನೆ ಸಿಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗಿದೆ. ಔಷಧ ನಿಯಂತ್ರಕರಿಗೆ ಫಿಝರ್ ಲಸಿಕೆ ಪ್ರಯೋಗಗಳಿಗೆ ಸಂಬಂಧಿಸಿದ ದತ್ತಾಂಶಗಳನ್ನು ಇನ್ನೂ ನೀಡಿಲ್ಲ. ದೇಶೀಯ ಕಂಪನಿ ಭಾರತ್ ಬಯೋಟೆಕ್ ರೂಪಿಸಿರುವ ಕೊವಾಕ್ಸಿನ್​ ಲಸಿಕೆಯ 3ನೇ ಹಂತದ ಪ್ರಯೋಗಗಳು ಇನ್ನೂ ಮುಗಿದಿಲ್ಲ.

Corona Vaccine: ಆಕ್ಸ್​ಫರ್ಡ್-ಆಸ್ಟ್ರಾಜೆನೆಕಾ ಲಸಿಕೆಗೆ ಇಂಗ್ಲೆಂಡ್​ ಸರ್ಕಾರದ ಅನುಮತಿ.. ರೂಪಾಂತರ ಕೊರೊನಾ ವಿರುದ್ಧವೂ ಈ ವ್ಯಾಕ್ಸಿನ್ ಪರಿಣಾಮಕಾರಿ

Published On - 4:14 pm, Thu, 31 December 20