ಕೃಷಿ ಕಾಯ್ದೆ ವಿರೋಧಿ ನಿರ್ಣಯಕ್ಕೆ ಬೆಂಬಲ ಸೂಚಿಸಿದ ಕೇರಳದ ಏಕೈಕ ಬಿಜೆಪಿ ಶಾಸಕ!

| Updated By: ಸಾಧು ಶ್ರೀನಾಥ್​

Updated on: Dec 31, 2020 | 5:47 PM

ಕೇರಳ ವಿಧಾನಸಭೆ ನೂತನ ಕೃಷಿ ಕಾಯ್ದೆ ವಿರೋಧಿಸಿ ಸರ್ವಾನುಮತದ ನಿರ್ಣಯ ಅಂಗೀಕರಿಸಿತು. ವಿಶೇಷವೆಂದರೆ, ಕೇರಳದ ಮೊದಲ ಮತ್ತು ಏಕೈಕ ಬಿಜೆಪಿ ಶಾಸಕ ಓ.ರಾಜಗೋಪಾಲ್ ಸಹ ಈ ನಿರ್ಣಯವನ್ನು ಬೆಂಬಲಿಸಿದ್ದಾರೆ.

ಕೃಷಿ ಕಾಯ್ದೆ ವಿರೋಧಿ ನಿರ್ಣಯಕ್ಕೆ ಬೆಂಬಲ ಸೂಚಿಸಿದ ಕೇರಳದ ಏಕೈಕ ಬಿಜೆಪಿ ಶಾಸಕ!
ಕೇರಳದ ಮೊದಲ ಮತ್ತು ಏಕೈಕ ಬಿಜೆಪಿ ಶಾಸಕ ಓ.ರಾಜಗೋಪಾಲ್
Follow us on

ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಕೇರಳದ ಏಕೈಕ ಬಿಜೆಪಿ ಶಾಸಕ ಓ.ರಾಜಗೋಪಾಲ್ ಕೇರಳ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿ ನಿರ್ಣಯವನ್ನು ಬೆಂಬಲಿಸಿದ್ದಾರೆ. ಕೃಷಿ ಕಾಯ್ದೆ ವಿರೋಧಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಡಿಸಿದ ನಿರ್ಣಯಕ್ಕೆ ಅಧಿವೇಶನದಲ್ಲಿ ಸರ್ವಾನುಮತದ ಬೆಂಬಲ ದೊರೆತಿದೆ.

ಅಧಿವೇಶನದಲ್ಲಿ ಮೊದಲು ನೂತನ ಕೃಷಿ ಕಾಯ್ದೆಗಳ ಪರ ಮಾತನಾಡಿದ ಓ.ರಾಜಗೋಪಾಲ್, ನಿರ್ಣಯವನ್ನು ಧ್ವನಿ ಮತಕ್ಕೆ ಹಾಕುವಾಗ ವಿರೋಧ ವ್ಯಕ್ತಪಡಿಸಲಿಲ್ಲ. ಕೇರಳ ಸರ್ಕಾರ ಮಂಡಿಸಿದ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದರೂ, ಕೃಷಿ ಕಾಯ್ದೆಗಳನ್ನು ತಿರುಚಿ ವಿಶ್ಲೇಷಣೆ ನಡೆಸಿರುವ ಕುರಿತು ವಿರೋಧವಿದೆ ಎಂದು ಅವರು ತಿಳಿಸಿದರು.

ವಿಧಾನಸಭೆ ಅಧಿವೇಶನದ ನಂತರ ಪ್ರತಿಕ್ರಿಯಿಸಿದ ಅವರು, ‘ರಾಜ್ಯ ಸರ್ಕಾರದ ನಿರ್ಣಯವನ್ನು ನಾನು ವಿರೋಧಿಸುವುದಿಲ್ಲ. ಅಭಿಪ್ರಾಯ ಭೇದವಿದ್ದರೂ ರಾಜ್ಯದ ಒಗ್ಗಟ್ಟಿಗಾಗಿ ನಾನು ನಿರ್ಣಯದ ಪರವಾಗಿರುವೆ. ಕೃಷಿ ಕಾಯ್ದೆ ವಿರೋಧಿ ನಿರ್ಣಯ ಬೆಂಬಲಿಸಿದರೂ, ಬಿಜೆಪಿಗೆ ವಿರುದ್ಧವಾಗಿ ನಡೆದಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರ ಅಭಿಪ್ರಾಯಕ್ಕೂ ಮಹತ್ವವಿದೆ. ನಿರ್ಣಯದಲ್ಲಿನ ಕೆಲ ಅಂಶಗಳನ್ನು ವಿರೋಧಿಸಿದ ನಂತರವೇ ಬೆಂಬಲ ವ್ಯಕ್ತಪಡಿಸಿದ್ದೇನೆ’ ಎಂದು ಓ. ರಾಜಗೋಪಾಲ್ ತಿಳಿಸಿದ್ದಾರೆ.

ಕೇರಳದಲ್ಲಿ ಬಿಜೆಪಿಯ ಮೊದಲ ಮತ್ತು ಏಕೈಕ ಶಾಸಕರಾಗಿರುವ ಓ.ರಾಜಗೋಪಾಲ್ ಪಕ್ಷದ ಹಿರಿಯ ನಾಯಕರು. ಅಟಲ್ ಬಿಹಾರಿ ವಅಜಪೇಯಿಯವರ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

ರೈತರ ಪ್ರತಿಭಟನೆ ಬೆನ್ನಲ್ಲೇ ಬಿಜೆಪಿಗೆ ಶಾಕ್​ ನೀಡಿದ ಮತದಾರರು