CBSE ಪರೀಕ್ಷಾ ದಿನಾಂಕ ಪ್ರಕಟ: ಮೇ 4 ರಿಂದ ಪರೀಕ್ಷೆ ಆರಂಭ, ಜುಲೈ 15 ರೊಳಗೆ ಫಲಿತಾಂಶ ಪ್ರಕಟ
ಫೆಬ್ರವರಿವರೆಗೆ ಯಾವುದೇ ಪರೀಕ್ಷೆ ಇರಲ್ಲ ಎಂದು ನಾವು ಮೊದಲೇ ಹೇಳಿದ್ದೆವು. ಆದ್ದರಿಂದ ಹತ್ತನೇ ತರಗತಿ, 12 ನೇ ತರಗತಿ ಪರೀಕ್ಷೆ ಮೇ 4 ರಿಂದ ಆರಂಭವಾಗಿ ಜೂನ್ 10 ಕ್ಕೆ ಮುಕ್ತಾಯವಾಗಲಿವೆ. ಜುಲೈ 15 ರೊಳಗೆ ಫಲಿತಾಂಶ ಪ್ರಕಟಿಸುತ್ತೇವೆ ಎಂದು ರಮೇಶ್ ಪೋಖ್ರಿಯಾಲ್ ತಿಳಿಸಿದ್ದಾರೆ.
ದೆಹಲಿ: CBSE ಸಿಲಬಸ್ನ 10 ಮತ್ತು 12ನೇ ತರಗತಿಯ ಪರೀಕ್ಷಾ ದಿನಾಂಕ ಘೋಷಣೆಯಾಗಿದ್ದು, ಮೇ 4ರಿಂದ CBSE ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುವುದು ಎಂದು ಕೇಂದ್ರದ ಶಿಕ್ಷಣ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಹೇಳಿಕೆ ನೀಡಿದ್ದಾರೆ.
ದೇಶ ಹೊಸ ಶಿಕ್ಷಣ ನೀತಿಯನ್ನು ಸ್ವೀಕರಿಸಿದೆ. ಹೀಗಾಗಿ CBSE ಪಾಠಗಳು ಆನ್ ಲೈನ್ನಲ್ಲಿ ನಡೆದಿವೆ. ಜೊತೆಗೆ ಟಿವಿ ಮೂಲಕ ಪಾಠಗಳನ್ನು ಮಾಡಲಾಗಿದೆ. ಫೆಬ್ರವರಿವರೆಗೆ ಯಾವುದೇ ಪರೀಕ್ಷೆ ಇರಲ್ಲ ಎಂದು ನಾವು ಮೊದಲೇ ಹೇಳಿದ್ದೆವು. ಆದ್ದರಿಂದ ಹತ್ತನೇ ತರಗತಿ, 12 ನೇ ತರಗತಿ ಪರೀಕ್ಷೆ ಮೇ 4 ರಿಂದ ಆರಂಭವಾಗಿ ಜೂನ್ 10 ಕ್ಕೆ ಮುಕ್ತಾಯವಾಗಲಿವೆ. ಜುಲೈ 15 ರೊಳಗೆ ಫಲಿತಾಂಶ ಪ್ರಕಟಿಸುತ್ತೇವೆ ಎಂದು CBSE ಮಂಡಳಿ ತಿಳಿಸಿದೆ.
Announcing the date of commencement for #CBSE board exams 2021. @SanjayDhotreMP @EduMinOfIndia @cbse @mygovindia @MIB_India @PIB_India @DDNewslive https://t.co/PHiz3EwFvz
— Dr. Ramesh Pokhriyal Nishank (@DrRPNishank) December 31, 2020