ದೆಹಲಿ: ದೆಹಲಿ ಚಲೋ ಸದ್ಯಕ್ಕೆ ಕೇವಲ ಪಂಜಾಬ್ನ ಆರ್ಥಿಕತೆಗಷ್ಟೇ ಅಲ್ಲ; ಮುಂದೆ ದೇಶದ ಭದ್ರತೆಗೇ ಸವಾಲಾಗಬಹುದು. ತಕ್ಷಣ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೇಂದ್ರ ಸರ್ಕಾರ ಮತ್ತು ರೈತ ನಾಯಕರಿಗೆ ಮನವಿ ಮಾಡಿದ್ದಾರೆ.
ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ಚರ್ಚಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮತ್ತು ಪಂಜಾಬ್ ರೈತರ ನಡುವಿನ ಶೀತಲ ಸಮರವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಇಬ್ಬರೂ ಯೋಚಿಸಬೇಕು. ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಮೊದಲೇ ಪರಿಹಾರ ಕಂಡುಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಸ್ಯೆ ಕೊನೆಗಾಣಿಸಲು ಮನವಿ
ಇಂದು ಕೇಂದ್ರ ಮತ್ತು ರೈತರ ನಡುವೆ ಮಾತುಕತೆ ನಡೆಯಲಿದೆ. ಗೃಹ ಸಚಿವರ ಬಳಿ ರೈತರ ಸಮಸ್ಯೆಯನ್ನು ಕೊನೆಗಾಣಿಸುವಂತೆ ಮನವಿ ಮಾಡಿದ್ದೇನೆ. ದೆಹಲಿ ಚಲೋದಿಂದ ಪಂಜಾಬ್ನ ಆರ್ಥಿಕತೆ ಬಿಗಡಾಯಿಸುವ ಸಾಧ್ಯತೆಯಿದೆ. ಅಲ್ಲದೇ, ದೇಶದ ಭದ್ರತೆಗೂ ಗಂಭೀರ ಪರಿಣಾಮ ಬೀರಲಿದೆ ಎಂದು ಮನವಿ ಮಾಡಿದ್ದಾಗಿ ತಿಳಿಸಿದರು.
ಪದ್ಮ ವಿಭೂಷಣ ಗೌರವ ಹಿಂದಿರುಗಿಸಿದ ಬಾದಲ್:
ಈ ಬೆನ್ನಲ್ಲೇ ಕೇಂದ್ರ ಸರ್ಕಾರ ತರ ಹೊರಟಿರುವ ನೂತನ ಕೃಷಿ ಕಾಯ್ದೆ ವಿರೋಧಿಸಿ ಪಂಜಾಬ್ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಪದ್ಮವಿಭೂಷಣ ಗೌರವ ಹಿಂದಿರುಗಿಸಿದ್ದಾರೆ.
Published On - 1:46 pm, Thu, 3 December 20