ಭಾರತೀಯ ಸೇನೆಗೆ ಬಂತು ಆನೆ ಬಲ, ಗಡಿಯಲ್ಲಿ LCA ತೇಜಸ್‌ ಯುದ್ಧವಿಮಾನ ನಿಯೋಜನೆ

ನವದೆಹಲಿ: ಚೀನಾದೊಂದಿಗಿನ ಗಡಿ ವಿವಾದದ ನಡುವೆಯೆ ಭಾರತ ತನ್ನ ಶಸ್ತ್ರ ಬಲವನ್ನ ಹೆಚ್ಚಿಸಿಕೊಳ್ಳುತ್ತಿದೆ. ಇಂಥಹ ಕೆಲ ಪ್ರಮುಖ ಹೆಜ್ಜೆಗಳಲ್ಲಿ ಎಲ್‌ಸಿಎ ತೆಜಸ್‌ ಯುದ್ಧವಿಮಾನವನ್ನು ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ಭಾರತದ ಪಶ್ಚಿಮ ಗಡಿಯಲ್ಲಿ ನಿಯೋಜಿಸಿದೆ. ಹೌದು ಭಾರತದ ಗಡಿಯಲ್ಲಿನ ಭೂ ಸೇನೆಗೆ ಈಗ ಮತ್ತೊಂದು ಆನೆ ಬಲ ಬಂದಿದೆ. ಭಾರತದಲ್ಲಿಯೇ ತಯಾರಾಗಿರುವ ಎಲ್‌ಸಿಎ ತೇಜಸ್‌ ಯುದ್ಧ ವಿಮಾನವನ್ನು ಭಾರತ ಈಗ ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಗಡಿಗಳಲ್ಲಿ ನಿಯೋಜಿಸಿದೆ. ಚೀನಾದೊಂದಿಗೆ ಲಡಾಖ್‌ ಬಳಿ ಗಂಭೀರವಾದ ಗಡಿ ವಿವಾದ ನಡೆಯುತ್ತಿರುವಾಗಲೇ ಭಾರತದ ಈ […]

ಭಾರತೀಯ ಸೇನೆಗೆ ಬಂತು ಆನೆ ಬಲ, ಗಡಿಯಲ್ಲಿ LCA ತೇಜಸ್‌ ಯುದ್ಧವಿಮಾನ ನಿಯೋಜನೆ
ತೇಜಸ್ ಲಘು ಯುದ್ಧ ವಿಮಾನ

Updated on: Aug 18, 2020 | 7:47 PM

ನವದೆಹಲಿ: ಚೀನಾದೊಂದಿಗಿನ ಗಡಿ ವಿವಾದದ ನಡುವೆಯೆ ಭಾರತ ತನ್ನ ಶಸ್ತ್ರ ಬಲವನ್ನ ಹೆಚ್ಚಿಸಿಕೊಳ್ಳುತ್ತಿದೆ. ಇಂಥಹ ಕೆಲ ಪ್ರಮುಖ ಹೆಜ್ಜೆಗಳಲ್ಲಿ ಎಲ್‌ಸಿಎ ತೆಜಸ್‌ ಯುದ್ಧವಿಮಾನವನ್ನು ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ಭಾರತದ ಪಶ್ಚಿಮ ಗಡಿಯಲ್ಲಿ ನಿಯೋಜಿಸಿದೆ.

ಹೌದು ಭಾರತದ ಗಡಿಯಲ್ಲಿನ ಭೂ ಸೇನೆಗೆ ಈಗ ಮತ್ತೊಂದು ಆನೆ ಬಲ ಬಂದಿದೆ. ಭಾರತದಲ್ಲಿಯೇ ತಯಾರಾಗಿರುವ ಎಲ್‌ಸಿಎ ತೇಜಸ್‌ ಯುದ್ಧ ವಿಮಾನವನ್ನು ಭಾರತ ಈಗ ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಗಡಿಗಳಲ್ಲಿ ನಿಯೋಜಿಸಿದೆ.

ಚೀನಾದೊಂದಿಗೆ ಲಡಾಖ್‌ ಬಳಿ ಗಂಭೀರವಾದ ಗಡಿ ವಿವಾದ ನಡೆಯುತ್ತಿರುವಾಗಲೇ ಭಾರತದ ಈ ನಡೆ ಕುತೂಹಲಕಾರಿಯಾಗಿದೆ. ಈಗಾಗಲೇ ಫ್ರಾನ್ಸ್‌ನಿಂದ ಬಂದಿರುವ ರಫೇಲ್‌ ಯುದ್ದವಿಮಾನಗಳ ಜೊತೆಗೆ ಈಗ ತೆಜಸ್‌ ಕೂಡಾ ಭಾರತದ ಸೇನೆ ಸೇರಿದ್ದು, ಗಡಿಯಲ್ಲಿ ಶತ್ರುಗಳ ಮೇಲೆ ಹದ್ದಿನ ಕಣ್ಣಿಡಲು ಭಾರತಕ್ಕೆ ಸಹಾಯಕವಾಗಲಿದೆ.