ಭರ್ಜರಿ ಬೇಟೆ: ಬಸವನಗುಡಿಯಲ್ಲಿ ಶಂಕಿತ ಉಗ್ರನ ಅರೆಸ್ಟ್, ದೆಹಲಿ ಕೋರ್ಟ್ ಮೂಲಕ NIA ವಶಕ್ಕೆ
ಬೆಂಗಳೂರು: ನಗರದಲ್ಲಿ ದಾಳಿಗೆ ಸಂಚು ರೂಪಿಸಿದ್ದ ಶಂಕಿತ ಉಗ್ರನನ್ನ ರಾಷ್ಟ್ರೀಯ ತನಿಖಾ ದಳವು ಬಸವನಗುಡಿಯಲ್ಲಿ ಬಂಧಿಸಿದೆ. ಬಂಧಿತ ಆರೋಪಿಯನ್ನ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ರೆಹಮಾನ್ ಸಿರಿಯಾ ಮೂಲದ ಉಗ್ರರ ಜತೆ ಸಂಪರ್ಕದಲ್ಲಿದ್ದ ಹಾಗೂ ಟೆರರ್ ದಾಳಿಗೆ ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಂಡು ಸಹಕಾರ ನೀಡ್ತಿದ್ದ ಎಂದು ತಿಳಿದುಬಂದಿದೆ. ISKP ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಅಬ್ದುಲ್ ರೆಹಮಾನ್ ಬೆಂಗಳೂರು, ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ದಾಳಿಗೆ ಸಂಚು ಮಾಡಿದ್ದನಂತೆ. ISIS ಜೊತೆ ಸಂಪರ್ಕ, ತಪ್ಪೊಪ್ಪಿಕೊಂಡ ಬಂಧಿತ ಆರೋಪಿ […]
ಬೆಂಗಳೂರು: ನಗರದಲ್ಲಿ ದಾಳಿಗೆ ಸಂಚು ರೂಪಿಸಿದ್ದ ಶಂಕಿತ ಉಗ್ರನನ್ನ ರಾಷ್ಟ್ರೀಯ ತನಿಖಾ ದಳವು ಬಸವನಗುಡಿಯಲ್ಲಿ ಬಂಧಿಸಿದೆ. ಬಂಧಿತ ಆರೋಪಿಯನ್ನ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ.
ರೆಹಮಾನ್ ಸಿರಿಯಾ ಮೂಲದ ಉಗ್ರರ ಜತೆ ಸಂಪರ್ಕದಲ್ಲಿದ್ದ ಹಾಗೂ ಟೆರರ್ ದಾಳಿಗೆ ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಂಡು ಸಹಕಾರ ನೀಡ್ತಿದ್ದ ಎಂದು ತಿಳಿದುಬಂದಿದೆ. ISKP ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಅಬ್ದುಲ್ ರೆಹಮಾನ್ ಬೆಂಗಳೂರು, ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ದಾಳಿಗೆ ಸಂಚು ಮಾಡಿದ್ದನಂತೆ.
ISIS ಜೊತೆ ಸಂಪರ್ಕ, ತಪ್ಪೊಪ್ಪಿಕೊಂಡ ಬಂಧಿತ ಆರೋಪಿ ಇದಲ್ಲದೆ, ಬಾಂಗ್ಲಾ ಮೂಲದ ನಿಷೇಧಿತ ಉಗ್ರ ಸಂಘಟನೆಯ ಸದಸ್ಯ ಸಹ ಆಗಿದ್ದ. ತಿಹಾರ್ ಜೈಲಿನಲ್ಲಿರುವ ಅಬ್ದುಲ್ ಬಸೀತ್ ಜೊತೆ ಸಂಪರ್ಕ ಹೊಂದಿದ್ದು ಸಿಎಎ ಪ್ರತಿಭಟನೆ ವೇಳೆ ಗಲಭೆಗೆ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ. ಇದೀಗ, ತಾನು ISIS ಜೊತೆ ಸಂಪರ್ಕ ಹೊಂದಿದ್ದೆ ಎಂದು ಬಂಧಿತ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿ MS ರಾಮಯ್ಯ ಆಸ್ಪತ್ರೆಯಲ್ಲಿ ನೇತ್ರ ವೈದ್ಯ ಆರೋಪಿ MS ರಾಮಯ್ಯ ಆಸ್ಪತ್ರೆಯಲ್ಲಿ ನೇತ್ರ ವೈದ್ಯನಾಗಿ ಸೇವೆ ಸಲ್ಲಿಸಿದ್ದ ಎಂದು ಹೇಳಿಲಾಗಿದೆ. 2014ರಲ್ಲಿ ಸಿರಿಯಾದ ಐಸಿಸ್ ಕ್ಯಾಂಪ್‌ಗೆ ಭೇಟಿ ನೀಡಿದ್ದ ರೆಹಮಾನ್ ಐಸಿಸ್ ಕ್ಯಾಂಪ್‌ನಲ್ಲಿ ಗಾಯಗೊಂಡ ಉಗ್ರರಿಗೆ ಚಿಕಿತ್ಸೆ ನೀಡಿದ್ದ ಎಂದೂ ತಿಳಿದುಬಂದಿದೆ.
10 ದಿನ ಐಸಿಸ್ ಕ್ಯಾಂಪ್‌ನಲ್ಲಿದ್ದು ವಾಪಸ್ ಬಂದಿದ್ದ ಶಂಕಿತ ಉಗ್ರನ ಲ್ಯಾಪ್ಟಾಪ್, ಮೊಬೈಲ್ ಮತ್ತು ಇತರೆ ಡಿಜಿಟಲ್ ಪರಿಕರಗಳಿಂದ ಸಾಕ್ಷ್ಯ ಸಂಗ್ರಹಿಸಿ ದೆಹಲಿಯ ಎನ್ಐಎ ಕೋರ್ಟ್‌ಗೆ ಈತನನ್ನ ಹಾಜರುಪಡಿಸಿ ವಶಕ್ಕೆ ಪಡೆಯಲಾಗಿದೆ.