ಅಮಿತ್‌ ಶಾ ಕೊರೊನಾ ವರದಿ ನೆಗೆಟಿವ್‌, ಕೆಲ ದಿನ ಹೋಮ್‌ ಕ್ವಾರಂಟೈನ್‌ಗೆ ವೈದ್ಯರ ಸಲಹೆ

ನವೆದೆಹಲಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೊರೊನಾ ಮಾರಿಯ ವಿರುದ್ದದ ಯುದ್ದವನ್ನು ಗೆದ್ದಿದ್ದಾರೆ. ಇವತ್ತು ಅವರ ಕೊರೊನಾ ಟೆಸ್ಟ್‌ ನೆಗೆಟಿವ್‌ ಬಂದಿದೆ. ಈ ಬಗ್ಗೆ ಸ್ವತಃ ಅಮಿತ್‌ ಶಾ ಅವರೇ ಟ್ವೀಟ್‌ ಮಾಡಿದ್ದಾರೆ. ನನ್ನ ಕೊರೊನಾ ವರದಿ ಇವತ್ತು ನೆಗೆಟಿವ್‌ ಬಂದಿದೆ. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆದಮೇಲೆ ಕೆಲ ದಿನಗಳ ಕಾಲ ಹೋಮ್‌ ಕ್ವಾರಂಟೈನ್‌ ಆಗಲಿದ್ದೇನೆ ಎಂದಿದ್ದಾರೆ. ದೆಹಲಿಗೆ ಸಮೀಪದ ಗುರುಗ್ರಾಮ್‌ನಲ್ಲಿರುವ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಮಿತ್‌ ಶಾ, ಕೊರೊನಾ ಸೋಂಕು […]

ಅಮಿತ್‌ ಶಾ ಕೊರೊನಾ ವರದಿ ನೆಗೆಟಿವ್‌, ಕೆಲ ದಿನ ಹೋಮ್‌ ಕ್ವಾರಂಟೈನ್‌ಗೆ ವೈದ್ಯರ ಸಲಹೆ

Updated on: Aug 14, 2020 | 6:01 PM

ನವೆದೆಹಲಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೊರೊನಾ ಮಾರಿಯ ವಿರುದ್ದದ ಯುದ್ದವನ್ನು ಗೆದ್ದಿದ್ದಾರೆ. ಇವತ್ತು ಅವರ ಕೊರೊನಾ ಟೆಸ್ಟ್‌ ನೆಗೆಟಿವ್‌ ಬಂದಿದೆ. ಈ ಬಗ್ಗೆ ಸ್ವತಃ ಅಮಿತ್‌ ಶಾ ಅವರೇ ಟ್ವೀಟ್‌ ಮಾಡಿದ್ದಾರೆ.

ನನ್ನ ಕೊರೊನಾ ವರದಿ ಇವತ್ತು ನೆಗೆಟಿವ್‌ ಬಂದಿದೆ. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆದಮೇಲೆ ಕೆಲ ದಿನಗಳ ಕಾಲ ಹೋಮ್‌ ಕ್ವಾರಂಟೈನ್‌ ಆಗಲಿದ್ದೇನೆ ಎಂದಿದ್ದಾರೆ.

ದೆಹಲಿಗೆ ಸಮೀಪದ ಗುರುಗ್ರಾಮ್‌ನಲ್ಲಿರುವ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಮಿತ್‌ ಶಾ, ಕೊರೊನಾ ಸೋಂಕು ತಗುಲಿದ ಸಂದರ್ಭದಲ್ಲಿ ತಮಗೆ ಹಾರೈಸಿದ ಎಲ್ಲ ಹಿತೈಷಿಗಳಿಗೆ ಹಾಗೂ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಇತರೆ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ.

Published On - 5:56 pm, Fri, 14 August 20