ಆಂಧ್ರಪ್ರದೇಶ: ಕೇಬಲ್ ಆಪರೇಟರ್​ನಿಂದ ಒಂಟಿ ಮಹಿಳೆಯ ಚಿನ್ನದ ಸರ ಕದಿಯಲು ಯತ್ನ, ವಿಡಿಯೋ ವೈರಲ್

ಕೇಬಲ್ ಆಪರೇಟರ್​ ಒಬ್ಬ ಒಂಟಿ ಮಹಿಳೆಯ ಚಿನ್ನದ ಸರ ಕದಿಯಲು ಯತ್ನ ನಡೆಸಿರುವ ಘಟನೆ ಆಂಧ್ರಪ್ರದೇಶದ ಅನಕಪಲ್ಲಿಯಲ್ಲಿ ನಡೆದಿದೆ. ಮಹಿಳೆ ಮನೆಯಲ್ಲಿ ಒಬ್ಬಳೇ ಇರುವುದನ್ನು ಗಮನಿಸಿ ಆತ ಮಹಿಳೆ ಚಿನ್ನದ ಸರವನ್ನು ಕದಿಯುವ ಯತ್ನ ಮಾಡಿದ್ದಾನೆ, ಆಕೆ ಪ್ರತಿಭಟಿಸಲು ಯತ್ನಿಸಿದಾಗ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಸಿಸಿಟಿವಿಯಲ್ಲಿ ಎಲ್ಲವೂ ಸೆರೆಯಾಗಿದೆ, ಕುತ್ತಿಗೆಗೆ ಟವೆಲ್​ ಸುತ್ತಿ ಮಹಿಳೆಯ ಹತ್ಯೆಗೆ ಯತ್ನಿಸಿರುತ್ತಿರುವುದು ಕಂಡುಬಂದಿದೆ.

ಆಂಧ್ರಪ್ರದೇಶ: ಕೇಬಲ್ ಆಪರೇಟರ್​ನಿಂದ ಒಂಟಿ ಮಹಿಳೆಯ ಚಿನ್ನದ ಸರ ಕದಿಯಲು ಯತ್ನ, ವಿಡಿಯೋ ವೈರಲ್
ಸರಗಳ್ಳತನ
Image Credit source: India Today

Updated on: Jan 30, 2024 | 11:58 AM

ಕೇಬಲ್ ಆಪರೇಟರ್​ ಒಬ್ಬ ಒಂಟಿ ಮಹಿಳೆಯ ಚಿನ್ನದ ಸರ ಕದಿಯಲು ಯತ್ನ ನಡೆಸಿರುವ ಘಟನೆ ಆಂಧ್ರಪ್ರದೇಶದ ಅನಕಪಲ್ಲಿಯಲ್ಲಿ ನಡೆದಿದೆ. ಮಹಿಳೆ ಮನೆಯಲ್ಲಿ ಒಬ್ಬಳೇ ಇರುವುದನ್ನು ಗಮನಿಸಿ ಆತ ಮಹಿಳೆ ಚಿನ್ನದ ಸರವನ್ನು ಕದಿಯುವ ಯತ್ನ ಮಾಡಿದ್ದಾನೆ, ಆಕೆ ಪ್ರತಿಭಟಿಸಲು ಯತ್ನಿಸಿದಾಗ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಸಿಸಿಟಿವಿಯಲ್ಲಿ ಎಲ್ಲವೂ ಸೆರೆಯಾಗಿದೆ, ಕುತ್ತಿಗೆಗೆ ಟವೆಲ್​ ಸುತ್ತಿ ಮಹಿಳೆಯ ಹತ್ಯೆಗೆ ಯತ್ನಿಸಿರುತ್ತಿರುವುದು ಕಂಡುಬಂದಿದೆ.

ಪೊಲೀಸರ ಪ್ರಕಾರ, ಗವರಪಾಲೆಂ ಪಾರ್ಕ್ ಸೆಂಟರ್‌ನಲ್ಲಿ ವಾಸಿಸುವ ಕರ್ರಿ ಲಕ್ಷ್ಮಿ ನಾರಾಯಣಮ್ಮ ಅವರು ಕೇಬಲ್ ಆಪರೇಟರ್ ಗೋವಿಂದ್​ನನ್ನು ಕರೆಸಿದ್ದರು. ಆತ ಕೇಬಲ್ ಸರಿ ಮಾಡುವ ಬದಲು ಆಕೆಯ ಚಿನ್ನದ ಸರಕ್ಕೆ ಕಣ್ಣು ಹಾಕಿದ್ದ. ಘಟನೆ ಜನವರಿ 26ರ ಬೆಳಗ್ಗೆ 7.30ರ ಸುಮಾರಿಗೆ ನಡೆದಿದೆ. ಮಹಿಳೆಯ ಕೊರಳಲ್ಲಿ ಸುಮಾರು ಎಂಟು ತೊಲ ತೂಕದ ಚಿನ್ನದ ಸರ ಹಾಕಿಕೊಂಡಿದ್ದಳು ಎಂದು ಹೇಳಲಾಗುತ್ತಿದೆ.

ಇಂಡಿಯಾ ಟುಡೇ ವರದಿ ಪ್ರಕಾರ ಆರೋಪಿ ಗೋವಿಂದ್ ಕೇಬಲ್ ಟೆಕ್ನಿಷಿಯನ್ ಆಗಿದ್ದು, ಕೆಲಸದ ನಿಮಿತ್ತ ಮಹಿಳೆಯ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ.

ಮತ್ತಷ್ಟು ಓದಿ: ಪೆರೋಲ್​ ಮೇಲೆ ಹೊರ ಬಂದಿದ್ದ ಕೊಲೆ ಆರೋಪಿಯಿಂದ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಅತ್ಯಾಚಾರ

ಮನೆಯಲ್ಲಿ ಮಹಿಳೆ ಒಂಟಿಯಾಗಿದ್ದನ್ನು ಕಂಡು ಗೋವಿಂದ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಆಕೆಯ ಚಿನ್ನದ ಸರ ಕದಿಯಲು ಯತ್ನಿಸಿದ್ದಾನೆ. ಮಹಿಳೆ ಹೇಗೋ ತಪ್ಪಿಸಿಕೊಂಡಿದ್ದಾರೆ.

ಮಹಿಳೆಯ ಕುಟುಂಬದವರ ದೂರಿನ ಮೇರೆಗೆ ಸೆಕ್ಷನ್ 307, ಮತ್ತು ಸೆಕ್ಷನ್ 394 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಯತ್ನಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ