Arunachal Pradesh Earthquake: ಅರುಣಾಚಲ ಪ್ರದೇಶದಲ್ಲಿ ಕಂಪನಿಸಿದ ಭೂಮಿ, ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕಂಪದ ಎಚ್ಚರಿಕೆ

|

Updated on: Mar 26, 2023 | 6:39 AM

ಅರುಣಾಚಲ ಪ್ರದೇಶದ ಚಾಂಗ್ಲಾಂಗ್‌ನಲ್ಲಿ ಭಾನುವಾರ ಭೂಕಂಪನದ ಅನುಭವವಾಗಿದೆ. ನ್ಯಾಶನಲ್ ಸೆಂಟರ್ ಫಾರ್ ಸೆಸ್ಮಾಲಜಿ ಪ್ರಕಾರ, ನಸುಕಿನ 2.18 ರ ಸುಮಾರಿಗೆ ಕಂಪನದ ಅನುಭವವಾಗಿದೆ.

Arunachal Pradesh Earthquake: ಅರುಣಾಚಲ ಪ್ರದೇಶದಲ್ಲಿ ಕಂಪನಿಸಿದ ಭೂಮಿ, ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕಂಪದ ಎಚ್ಚರಿಕೆ
ಅರುಣಾಚಲ ಪ್ರದೇಶದಲ್ಲಿ ಭೂಕಂಪನ (ಸಾಂದರ್ಭಿಕ ಚಿತ್ರ)
Follow us on

ಚಾಂಗ್ಲಾಂಗ್‌: ಅರುಣಾಚಲ ಪ್ರದೇಶದ ಚಾಂಗ್ಲಾಂಗ್‌ನಲ್ಲಿ ಭಾನುವಾರ ಭೂಕಂಪನದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (National Centre for Seismology -NCS) ಪ್ರಕಾರ, ನಸುಕಿನ 2.18 ರ ಸುಮಾರಿಗೆ ಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.5 ರಷ್ಟು ಭೂಕಂಪದ ತೀವ್ರತೆ ದಾಖಲಾಗಿದೆ. ಭೂಕಂಪದಿಂದಾಗಿ ಯಾವುದೇ ಜೀವ ಅಥವಾ ಆಸ್ತಿ ನಷ್ಟ ಸಂಭವಿಸಿಲ್ಲ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರವು ಹೇಳಿದೆ. ಏತನ್ಮಧ್ಯೆ, ಹಿಮಾಲಯ ಪ್ರದೇಶದಲ್ಲಿ ಶೀಘ್ರದಲ್ಲೇ ದೊಡ್ಡ ಭೂಕಂಪ ಸಂಭವಿಸಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಹಿಮಾಲಯ ಪ್ರದೇಶದಲ್ಲಿ ಶೀಘ್ರದಲ್ಲೇ ದೊಡ್ಡ ಭೂಕಂಪ ಸಂಭವಿಸಬಹುದು ಎಂದು ರಾಷ್ಟ್ರೀಯ ಜಿಯೋಫಿಸಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ (NGRI) ವಿಜ್ಞಾನಿಗಳು ಎಂದು ಹೇಳಿದ್ದಾರೆ. ಭೂಕಂಪದ ತೀವ್ರತೆಯು ಗಣನೀಯವಾಗಿರಬಹುದು, ಇದು ಪ್ರದೇಶದಲ್ಲಿ ಭಾರಿ ವಿನಾಶವನ್ನು ಉಂಟುಮಾಡಬಹುದು ಎಂದು ಹೇಳಿದ್ದಾರೆ. ಆದರೆ, ಕಟ್ಟಡಗಳನ್ನು ಬಲಪಡಿಸುವ ಮೂಲಕ ಜೀವ ಮತ್ತು ಆಸ್ತಿ ನಷ್ಟವನ್ನು ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Himalaya Earthquake: ಹಿಮಾಲಯ ಪ್ರದೇಶಗಳಲ್ಲಿ ಯಾವಾಗ ಬೇಕಾದರೂ ಸಂಭವಿಸಬಹುದು ಭಾರಿ ಭೂಕಂಪ

ಭೂಮಿಯ ಹೊರಪದರವು ಅನೇಕ ಫಲಕಗಳಿಂದ ಮಾಡಲ್ಪಟ್ಟಿದೆ ಮತ್ತು ಈ ಫಲಕಗಳು ನಿರಂತರವಾಗಿ ಬೇರೆಡೆಗೆ ತಿರುಗುತ್ತಲೇ ಇರುತ್ತವೆ ಎಂದು ಹೈದರಾಬಾದ್‌ನ ಎನ್‌ಜಿಆರ್‌ಐನ ಮುಖ್ಯ ವಿಜ್ಞಾನಿ ಡಾ.ಪೂರ್ಣಚಂದ್ರರಾವ್ ಹೇಳುತ್ತಾರೆ. ಇವುಗಳು ಪ್ರತಿ ವರ್ಷ ಐದು ಸೆಂಟಿಮೀಟರ್‌ಗಳವರೆಗೆ ಚಲಿಸುತ್ತಿವೆ ಮತ್ತು ಈ ಕಾರಣದಿಂದಾಗಿ, ಹಿಮಾಲಯದ ಪ್ರದೇಶವು ಒತ್ತಡದಲ್ಲಿದೆ. ಇದರಿಂದಾಗಿ ಹಿಮಾಲಯ ಪ್ರದೇಶದಲ್ಲಿ ಭಾರೀ ಭೂಕಂಪ ಸಂಭವಿಸಬಹುದು.

ಹಿಮಾಚಲ ಪ್ರದೇಶ, ನೇಪಾಳದ ಪಶ್ಚಿಮ ಭಾಗ ಮತ್ತು ಉತ್ತರಾಖಂಡದಲ್ಲಿ ಭೂಕಂಪ ಸಂಭವಿಸಬಹುದು ಎಂದು ಡಾ.ಪೂರ್ಣಚಂದ್ರರಾವ್ ತಿಳಿಸಿದ್ದಾರೆ. ಈ ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 8 ಆಗಿರಬಹುದು ಅಂತಾ ಹೇಳಿದ್ದಾರೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:38 am, Sun, 26 March 23