Chenab Rail Bridge: ಚೆನಾಬ್ ನದಿಯ ಮೇಲೆ ನಿರ್ಮಿಸಲಾದ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಶೀಘ್ರದಲ್ಲೇ ಕಾರ್ಯಾರಂಭ

ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆಯ ನಿರ್ಮಾಣದಲ್ಲಿ ಸಾಕಷ್ಟು ಪ್ರಥಮಗಳಿವೆ . ಒಮ್ಮೆ ಪೂರ್ಣಗೊಂಡರೆ, ಇದು ಐಫೆಲ್ ಟವರ್‌ಗಿಂತ 35 ಮೀ ಎತ್ತರದಲ್ಲಿ ನಿಲ್ಲುತ್ತದೆ. 1.3 ಕಿಲೋಮೀಟರ್ ಉದ್ದದ ರೈಲ್ವೇ ಮೇಲ್ಸೇತುವೆಯು, 359 ಮೀಟರ್ ಎತ್ತರ ಇದ್ದು, ಸಲಾಲ್ ಎ ಮತ್ತು ದುಗ್ಗಾ ರೈಲ್ವೇ ನಿಲ್ದಾಣಗಳನ್ನು ಈ ರೈಲ್ವೇ ಮೇಲ್ಸೇತುವೆಯು ಪರಸ್ಪರ ಸಂಪರ್ಕಿಸುತ್ತದೆ.

Chenab Rail Bridge: ಚೆನಾಬ್ ನದಿಯ ಮೇಲೆ ನಿರ್ಮಿಸಲಾದ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಶೀಘ್ರದಲ್ಲೇ ಕಾರ್ಯಾರಂಭ
ಚೆನಾಬ್ ನದಿಯ ಮೇಲೆ ನಿರ್ಮಾಣಗೊಂಡ ರೈಲ್ವೆ ಸೇತುವೆಯಲ್ಲಿ ಶೀಘ್ರದಲ್ಲೇ ರೈಲು ಸಂಚಾರ ಆರಂಭ Image Credit source: RailMinindia
Follow us
Rakesh Nayak Manchi
|

Updated on:Mar 26, 2023 | 8:07 AM

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿಯ (Chenab River) ಮೇಲೆ ನಿರ್ಮಾಣಗೊಂಡ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ (World’s highest railway bridge) ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಈಗಾಗಲೇ ಈ ಯೋಜನೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ರೈಲ್ವೆ ಸಂಚಾರ ಆರಂಭವಾದ ನಂತರ ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಮ್ಮು ಕಾಶ್ಮೀರದ ಶ್ರೀನಗರವನ್ನು ಈ ರೈಲ್ವೇ ಮೇಲ್ಸೇತುವೆ ಮೂಲಕ ದೇಶದ ಇತರ ಭಾಗದೊಂದಿಗೆ ಸಂಪರ್ಕಿಸಬಹುದಾಗಿದೆ. ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆಯ ನಿರ್ಮಾಣದಲ್ಲಿ ಸಾಕಷ್ಟು ಪ್ರಥಮಗಳಿವೆ . ಒಮ್ಮೆ ಪೂರ್ಣಗೊಂಡರೆ, ಇದು ಐಫೆಲ್ ಟವರ್‌ಗಿಂತ 35 ಮೀ ಎತ್ತರದಲ್ಲಿ ನಿಲ್ಲುತ್ತದೆ. 1.3 ಕಿಲೋಮೀಟರ್ ಉದ್ದದ ರೈಲ್ವೇ ಮೇಲ್ಸೇತುವೆಯು, 359 ಮೀಟರ್ ಎತ್ತರ ಇದ್ದು, ಸಲಾಲ್ ಎ ಮತ್ತು ದುಗ್ಗಾ ರೈಲ್ವೇ ನಿಲ್ದಾಣಗಳನ್ನು ಈ ರೈಲ್ವೇ ಮೇಲ್ಸೇತುವೆಯು ಪರಸ್ಪರ ಸಂಪರ್ಕಿಸುತ್ತದೆ.

ಇಂಜಿನಿಯರಿಂಗ್ ಚಾಕಚಕ್ಯತೆಗೆ ಹೆಸರಾದ ಈ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕಾಗಿ 28 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಉದಮಪುರ-ಶ್ರೀನಗರ- ಬಾರಮುಲ್ಲಾ ರೈಲ್ವೇ ಯೋಜನೆಯ ಭಾಗವಾಗಿ ಈ ರೈಲ್ವೇ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಜಮ್ಮುವಿನ ಕಟ್ರಾ-ಬನಾಲ್ ನಡುವಿನ 111 ಕಿಲೋಮೀಟರ್ ಉದ್ದದ ರೈಲ್ವೇ ಸೆಕ್ಷನ್ ಯೋಜನೆ ಪೂರ್ಣಗೊಳಿಸಲು ಈ ರೈಲ್ವೇ ಮೇಲ್ಸೇತುವೆಯಿಂದ ಸಾಧ್ಯವಾಗಲಿದೆ. 111 ಕಿಲೋಮೀಟರ್ ಉದ್ದದ ಪೈಕಿ 97 ಕಿಲೋಮೀಟರ್ ಸುರಂಗ ಮಾರ್ಗ ನಿರ್ಮಿಸಲಾಗಿದೆ.

ಇದನ್ನೂ ಓದಿ: Education On Wheels: ಜಮ್ಮುವಿನ ಹಳ್ಳಿ-ಹಳ್ಳಿಗಳಿಗೂ ತಲುಪುತ್ತಿದೆ ಸಂಸ್ಕೃತ ಶಿಕ್ಷಣ!

ಚೀನಾ ದೇಶದಲ್ಲಿ ನದಿ ನೀರಿನ ಮಟ್ಟಕ್ಕಿಂತ 259 ಮೀಟರ್ ಎತ್ತರದಲ್ಲಿ ರೈಲ್ವೇ ಸೇತುವೆ ನಿರ್ಮಿಸಲಾಗಿದೆ. ಆದರೇ, ಭಾರತದ ಚಿನಾಬ್ (ಚೆನಾಬ್) ರೈಲ್ವೇ ಸೇತುವೆಯು ನದಿ ನೀರಿನ ಮಟ್ಟಕ್ಕಿಂತ 359 ಮೀಟರ್ ಎತ್ತರದಲ್ಲಿದೆ. ಈ ರೈಲ್ವೇ ಮೇಲ್ಸೇತುವೆಯು ಗಂಟೆಗೆ 266 ಕಿಲೋಮೀಟರ್ ವೇಗದ ಬಿರುಗಾಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. 17 ಪಿಲ್ಲರ್ ಗಳನ್ನು ನಿರ್ಮಿಸಲಾಗಿದೆ. 28,660 ಮೆಟ್ರಿಕ್ ಟನ್ ಸ್ಟೀಲ್ ಅನ್ನು ಬಳಸಲಾಗಿದೆ. ಬ್ರಿಡ್ಜ್ 120 ವರ್ಷ ಬಾಳಿಕೆ ಬರುವ ವಿಶ್ವಾಸ ಹೊಂದಲಾಗಿದೆ.

ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಈ ರೈಲ್ವೇ ಬ್ರಿಡ್ಜ್ ಮೇಲೆ ರೈಲುಗಳು ಸಂಚರಿಸಬಹುದು. ಚೆನಾಬ್ ಸೇತುವೆಯ ಜೊತೆಗೆ, ಜಮ್ಮು ಮತ್ತು ಕಾಶ್ಮೀರದ ಪ್ರತಿಕೂಲ ಭೂಪ್ರದೇಶದಲ್ಲಿ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (ಕೆಆರ್‌ಸಿಎಲ್) ಗಾಗಿ ಆಫ್ಕಾನ್ಸ್ 16 ಇತರ ರೈಲ್ವೆ ಸೇತುವೆಗಳನ್ನು ನಿರ್ಮಿಸುತ್ತಿದೆ. ಎಲ್ಲಾ ಸೇತುವೆಗಳು ಉಧಂಪುರ್ ಶ್ರೀನಗರ ಬಾರಾಮುಲ್ಲಾ ರೈಲ್ ಲಿಂಕ್ (USBRL) ಯೋಜನೆಯ ಭಾಗವಾಗಿದೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:07 am, Sun, 26 March 23

ಮನೆಯಲ್ಲಿ ಬ್ರಹ್ಮ ಕಮಲ ಗಿಡ ಇದ್ದರೆ ಇದೆ ಅನೇಕ ಪ್ರಯೋಜನ!
ಮನೆಯಲ್ಲಿ ಬ್ರಹ್ಮ ಕಮಲ ಗಿಡ ಇದ್ದರೆ ಇದೆ ಅನೇಕ ಪ್ರಯೋಜನ!
Daily Horoscope: ಈ ರಾಶಿಯವರಿಗಿಂದು 5 ರಾಶಿಗಳ ಶುಭ ಫಲ
Daily Horoscope: ಈ ರಾಶಿಯವರಿಗಿಂದು 5 ರಾಶಿಗಳ ಶುಭ ಫಲ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?