ಕೇಂದ್ರ ಬಜೆಟ್​ ಮೇಲೆ ಮಂಡ್ಯ ಜನರ ಚಿತ್ತ: ನಿರೀಕ್ಷೆ ಈಡೇರಿಸುತ್ತಾರಾ ಕುಮಾರಸ್ವಾಮಿ?

ಕೇಂದ್ರ ಬಜೆಟ್ 2025ರಲ್ಲಿ ಮಂಡ್ಯ ಜಿಲ್ಲೆಗೆ ಏನು ಸಿಗಲಿದೆ ಎಂಬ ಕುತೂಹಲ ಜನರಲ್ಲಿ ಮೂಡಿದೆ. ಚುನಾವಣೆ ಪೂರ್ವದಲ್ಲಿ ಹಾಗೂ ಸಂಸದರಾಗಿ ಗೆದ್ದ ನಂತರ ಸಂಸದ ಹೆಚ್.ಡಿ. ಕುಮಾರಸ್ವಾಮಿ ಸಾಕಷ್ಟು ಭರವಸೆ ನೀಡಿದ್ದರು. ಮೇಕೆದಾಟು, ಕಾವೇರಿ, ಕೈಗಾರಿಕೆ, ಕೃಷಿ ಅಭಿವೃದ್ಧಿ ಭರವಸೆ ನೀಡಿದ್ದರು, ಹಾಗಾಗಿ ಜನರ ನಿರೀಕ್ಷೆ ಹೆಚ್ಚಾಗಿದೆ.

ಕೇಂದ್ರ ಬಜೆಟ್​ ಮೇಲೆ ಮಂಡ್ಯ ಜನರ ಚಿತ್ತ: ನಿರೀಕ್ಷೆ ಈಡೇರಿಸುತ್ತಾರಾ ಕುಮಾರಸ್ವಾಮಿ?
ಕೇಂದ್ರ ಬಜೆಟ್​ ಮೇಲೆ ಮಂಡ್ಯ ಜನರ ಚಿತ್ತ: ನಿರೀಕ್ಷೆ ಈಡೇರಿಸುತ್ತಾರಾ ಕುಮಾರಸ್ವಾಮಿ?
Follow us
ಪ್ರಶಾಂತ್​ ಬಿ.
| Updated By: ಗಂಗಾಧರ​ ಬ. ಸಾಬೋಜಿ

Updated on: Jan 31, 2025 | 7:40 PM

ಮಂಡ್ಯ, ಜನವರಿ 31: ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಬಜೆಟ್ (Budget) ನಾಳೆ ಮಂಡನೆ ಆಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಯ್ಯವ್ಯಯ ಮಂಡನೆ ಮಾಡಲಿದ್ದಾರೆ. 2025 ರ ಪ್ರಧಾನಿ ನರೇಂದ್ರ ಮೋದಿ ಲೆಕ್ಕದ ಮೇಲೆ ಸಕ್ಕರಿನಗರಿ ಮಂಡ್ಯದ ಜನ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಮಂಡ್ಯದ ಸಂಸದರೇ ಆಗಿರುವ ಹೆಚ್​ಡಿ ಕುಮಾರಸ್ವಾಮಿ, ಮೋದಿ ಸಂಪುಟದಲ್ಲಿ ಇರುವುದರಿಂದ ಜಿಲ್ಲೆಯ ಜನರ ನಿರೀಕ್ಷೆ ಬಹಳಷ್ಟಿದೆ.

2025ರ ಪ್ರಧಾನಿ ಮೋದಿ ಲೆಕ್ಕದ ಮೇಲೆ ಸಾಕಷ್ಟು ಕೂತುಹಲ ಇದೆ. ಅದರಲ್ಲೂ ಸಕ್ಕರಿನಗರಿ ಮಂಡ್ಯ ಜಿಲ್ಲೆಯ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಾರಣ ಇಷ್ಟೇ, ಮೋದಿ ಸಂಪುಟದಲ್ಲಿ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವರಾಗಿರುವ ಕುಮಾರಸ್ವಾಮಿ ಮಂಡ್ಯದ ಸಂಸದರು. ಚುನಾವಣೆ ಪೂರ್ವದಲ್ಲಿ ಹಾಗೂ ಸಂಸದರಾಗಿ ಗೆದ್ದ ನಂತರ ಸಾಕಷ್ಟು ಭರವಸೆ ನೀಡಿದ್ದರು. ಮೇಕೆದಾಟು ಯೋಜನೆ, ಕಾವೇರಿ ಸಮಸ್ಯೆಗೆ ಪರಿಹಾರ. ಕೃಷಿ ಪ್ರಧಾನವಾಗಿರೋ ಮಂಡ್ಯದ ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳು ಹಾಗೂ ಕೃಷಿ ಕ್ರಾಂತಿ. ಯುವ ಜನರಿಗೆ ಉದ್ಯೋಗದ ಭರವಸೆ ನೀಡಿದ್ದರು. ಹೀಗಾಗಿ ‌ಈ ಬಜೆಟ್​ನಲ್ಲಿ ಇವುಗಳು ಈಡೇರುವ ನಿರೀಕ್ಷೆ ಇದೆ. ಅಲ್ಲದೆ ಇವುಗಳನ್ನ ಫುಲ್ ಫಿಲ್ ಮಾಡುವ ಜವಾಬ್ದಾರಿ ಕೂಡ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಮೇಲೆ ಇದೆ.

ಮಾಜಿ ದೋಸ್ತಿಗೆ ಸೆಡ್ಡು ಹೊಡೆಯುವ ಪರಿಸ್ಥಿತಿಯಲ್ಲಿ ಹೆಚ್​ಡಿ ಕುಮಾರಸ್ವಾಮಿ

ಅಂದಹಾಗೆ ಕುಮಾರಸ್ವಾಮಿ ಅವರು ಮಂಡ್ಯದಿಂದ ಗೆದ್ದು ಕೇಂದ್ರದ ಸಚಿವರಾದ ನಂತರ ಜಿಲ್ಲೆಯ ಜನರಿಗೆ ಕುಮಾರಸ್ವಾಮಿ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಸಾಕಷ್ಟು ಭರವಸೆಯನ್ನ ಹೆಚ್​ಡಿ ಕುಮಾರಸ್ವಾಮಿ ನೀಡಿದ್ದರು. ಜೊತೆಗೆ ಭರವಸೆಯನ್ನ ಈಡೇರಿಸುವ ಸವಾಲು ಕೂಡ ಇದೆ. ಒಂದೆಡೆ ಕುಮಾರಸ್ವಾಮಿ ಅವರ ಹಳೇ ಸ್ನೇಹಿತ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ, ಹೆಚ್​ಡಿಕೆಗೆ ಟಾಂಗ್ ನೀಡುತ್ತಾ, ಮೈಶುಗರ್ ಕಾರ್ಖಾನೆ ಪುನಾರಂಭ ಮಾಡುವ ಜೊತೆಗೆ ಸುಮಾರು 50 ಕೋಟಿ ರೂ. ವಿದ್ಯುತ್ ಬಿಲ್ ಅನ್ನ ಮನ್ನಾ ಮಾಡಿಸಿದ್ದಾರೆ.

ಇದನ್ನೂ ಓದಿ: Union Budget 2025: ನಾಳಿನ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ಬೇಡಿಕೆಗಳೇನು? ಇಲ್ಲಿದೆ ಪಟ್ಟಿ

ನಾಲೆಗಳ ಆಧುನಿಕರಣ ಜೊತೆಗೆ ಜಿಲ್ಲೆಗೆ ನೂತನ ಕೃಷಿ ವಿವಿಯನ್ನ ಬಜೆಟ್​ನಲ್ಲಿ ಮಂಡನೆ ಮಾಡಿಸಿ, ಸಂಪುಟ ಸಭೆಯನ್ನ ಅನುಮೋದನೆ ಕೂಡ ಮಾಡಿಸಿದ್ದಾರೆ. ಅಲ್ಲದೆ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ಅನುದಾನ ಸೇರಿದಂತೆ ಕೆಲವು ಯೋಜನೆಗಳನ್ನ ಯಶ್ವಸಿಯಾಗಿ ತಂದಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಸಹ ಜಿಲ್ಲೆಗೆ ಹೊಸ ಯೋಜನೆಗಳನ್ನ ತಂದು ತಿರುಗೇಟು ನೀಡುವ ಅನಿರ್ವಾಯ ಕೂಡ ಇದೆ. ಹಾಗಾಗಿ ನಾಳಿನ‌ ಮೋದಿ‌ ಲೆಕ್ಕದ ಮೇಲೆ ಮಂಡ್ಯದ ಜನರು ಸಾಕಷ್ಟು ನಿರೀಕ್ಷೆ ಇಟ್ಟಿದ್ದು, ಮಂಡ್ಯಕ್ಕೆ ಏನೆಲ್ಲ ಸಿಗಲಿದೆ ಎಂದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.