ಮರಾಠಾ ಮೀಸಲಾತಿ: ಮುಂಬೈ ಕಡೆಗೆ ಮೆರವಣಿಗೆ ಹೊರಡುತ್ತಿದ್ದಂತೆ ಮನೋಜ್ ಜಾರಂಗೆ ಬೇಡಿಕೆಗಳಿಗೆ ಒಪ್ಪಿದ ಮಹಾರಾಷ್ಟ್ರ ಸರ್ಕಾರ

|

Updated on: Jan 26, 2024 | 1:54 PM

ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ನೇತೃತ್ವದ ತಂಡ ಮುಂಬೈಗೆ ಹೊರಡುತ್ತಿದ್ದಂತೆ ಇತ್ತ ಸರ್ಕಾರವು ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದೆ. ನವಿ ಮುಂಬೈನಿಂದ ಮುಂಬೈ ತಲುಪುವ ಮುನ್ನ ಸರ್ಕಾರದ ನಿಯೋಗ ಮನೋಜ್ ಜಾರಂಗೆ ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸಿತು. ಈ ಚರ್ಚೆ ಸಕಾರಾತ್ಮಕವಾಗಿದೆ ಎಂದು ಮನೋಜ್ ಜಾರಂಗೆ ಪಾಟೀಲ್ ಹೇಳಿದ್ದಾರೆ.

ಮರಾಠಾ ಮೀಸಲಾತಿ: ಮುಂಬೈ ಕಡೆಗೆ ಮೆರವಣಿಗೆ ಹೊರಡುತ್ತಿದ್ದಂತೆ ಮನೋಜ್ ಜಾರಂಗೆ ಬೇಡಿಕೆಗಳಿಗೆ ಒಪ್ಪಿದ ಮಹಾರಾಷ್ಟ್ರ ಸರ್ಕಾರ
Image Credit source: The Economic Times
Follow us on

ಮರಾಠಾ ಮೀಸಲಾತಿ(Maratha Reservation) ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ನೇತೃತ್ವದ ತಂಡ ಮುಂಬೈಗೆ ಹೊರಡುತ್ತಿದ್ದಂತೆ ಇತ್ತ ಮಹಾರಾಷ್ಟ್ರ ಸರ್ಕಾರವು ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದೆ. ನವಿ ಮುಂಬೈನಿಂದ ಮುಂಬೈ ತಲುಪುವ ಮುನ್ನ ಸರ್ಕಾರದ ನಿಯೋಗ ಮನೋಜ್ ಜಾರಂಗೆ ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸಿತು. ಈ ಚರ್ಚೆ ಸಕಾರಾತ್ಮಕವಾಗಿದೆ ಎಂದು ಮನೋಜ್ ಜಾರಂಗೆ ಪಾಟೀಲ್ ಹೇಳಿದ್ದಾರೆ.

ಇದೇ ವೇಳೆ ಜಾರಂಗೆ ಪಾಟೀಲ್ ಅವರ ಎಲ್ಲ ಬೇಡಿಕೆಗಳನ್ನು ಅಂಗೀಕರಿಸಲಾಗಿದೆ. ಈಗ ಸರ್ಕಾರ ನಿಗದಿಪಡಿಸಿದ ನಿಯಮಗಳ ಪ್ರಕಾರವೇ ಅನುಷ್ಠಾನಗೊಳಿಸಲಾಗುವುದು ಎಂದು ಸಚಿವ ದೀಪಕ್ ಕೇಸರಕರ್ ಮಾಹಿತಿ ನೀಡಿದರು.

ದೀಪಕ್ ಕೇಸರಕರ್ ಹೇಳಿದ್ದೇನು?
ಮರಾಠಾ ಮೀಸಲಾತಿ ನಾಯಕ ಮನೋಜ್ ಜಾರಂಗೆ ಪಾಟೀಲ್ ಅವರ ಎಲ್ಲ ಬೇಡಿಕೆಗಳನ್ನು ಅಂಗೀಕರಿಸಲಾಗಿದೆ. ಈಗ ಸರ್ಕಾರವು ನಿಗದಿಪಡಿಸಿದ ನಿಯಮಗಳಿವೆ, ಅದರ ಪ್ರಕಾರ ಆ ನಿರ್ಧಾರಗಳನ್ನು ಜಾರಿಗೆ ತರಲಾಗುವುದು. ಮಹಾರಾಷ್ಟ್ರದ ಇತಿಹಾಸದಲ್ಲಿ ಪ್ರಥಮ ಬಾರಿಗೆ 37 ಲಕ್ಷ ಕುಂಬಿ ಪ್ರಮಾಣಪತ್ರಗಳನ್ನು ನೀಡಿದ್ದೇವೆ. ಆದರೆ ಈಗ ಇವು 50 ಲಕ್ಷ ದಾಟಲಿವೆ.

ಮತ್ತಷ್ಟು ಓದಿ: ಮರಾಠಾ ಮೀಸಲಾತಿ: ಮಹಾರಾಷ್ಟ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ, ಇಲ್ಲಿದೆ ವಿವರ

ಜಾರಂಗೆ ಮುಂಬೈನ ಆಜಾದ್ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸುವ ನಿರ್ಧಾರ ಪ್ರಕಟಿಸಿದ್ದರು. ಈಗ ಮೀಸಲಾತಿಯೊಂದಿಗೆ ಮಾತ್ರ ಮುಂಬೈ ಬಿಡುತ್ತೇನೆ ಎಂದು ಹೇಳಿದ್ದರು.

ಕಳೆದ ನಾಲ್ಕೈದು ದಿನಗಳಿಂದ ಸರ್ಕಾರದ ನಿಯೋಗ ಅವರೊಂದಿಗೆ ಚರ್ಚೆ ನಡೆಸಿತ್ತು. ಆದರೆ ಆ ಚರ್ಚೆಯಿಂದ ಪರಿಹಾರ ಸಿಗಲಿಲ್ಲ. ಕೊನೆಗೆ ಮನೋಜ್ ಜಾರಂಗೆ ಪಾಟೀಲ್ ನವಿ ಮುಂಬೈಗೆ ಬಂದರು.

ಆ ಬಳಿಕ ಮುಂಬೈನ ಆಜಾದ್ ಮೈದಾನಕ್ಕೆ ಬರುತ್ತಿದ್ದರು. ಅದಕ್ಕೂ ಮುನ್ನ ಮತ್ತೊಮ್ಮೆ ಮನೋಜ್ ಜಾರಂಗೆ ಪಾಟೀಲ್ ಜೊತೆ ಚರ್ಚೆ ನಡೆದಿದೆ. ಈ ಚರ್ಚೆ ಯಶಸ್ವಿಯಾಗಿದೆ. ಮನೋಜ್ ಜರಂಗೆ ಪಾಟೀಲ ಅವರ ಎಲ್ಲಾ ಬೇಡಿಕೆಗಳನ್ನು ಅಂಗೀಕರಿಸಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ದೀಪಕ್ ಕೇಸರಕರ್ ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ