ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾದಿಂದಾಗಿ ಇವತ್ತು ಒಂದೇ ದಿನ 288 ಜನರು ಸಾವನ್ನಪ್ಪಿರುವ ಆಘಾತಕಾರಿ ಬೆಳವಣಿಗೆ ಸಂಭವಿಸಿದೆ.
ಭಾರತದಲ್ಲಿಯೇ ಅತ್ಯಂತ ಹೆಚ್ಚು ಕೊರೊನಾ ಸೋಂಕಿನ ತೊಂದರೆ ಅನುಭವಿಸುತ್ತಿದೆ ಮಹಾರಾಷ್ಟ್ರ. ಅದರಲ್ಲೂ ಮಾಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಂತೂ ಕೊರೊನಾ ರುದ್ರನರ್ತನಕ್ಕೆ ಅಂತ್ಯವೇ ಇಲ್ಲದಂತಾಗಿದೆ. ಇವತ್ತು ಒಂದೇ ದಿನ ಮಹಾರಾಷ್ಟ್ರದಲ್ಲಿ 288 ಜನರು ಸತ್ತಿದ್ದಲ್ಲದೇ, 11,111 ಜನರಿಗೆ ಹೊಸದಾಗಿ ಕೊರೊನಾ ಸೋಂಕು ವಕ್ಕರಿಸಿರೋದು ದೃಡಪಟ್ಟಿದೆ.
ಇವತ್ತಿನ ಕೊರೊನಾ ಸೋಂಕಿತರೊಂದಿಗೆ ಮಹಾರಾಷ್ಟ್ರದಲ್ಲಿ ಇದುವರೆಗೆ ಕೊರೊನಾ ಸೋಂಕಿತರ ಸಂಖ್ಯೆ 5,95,865 ರಷ್ಟಾಗಿದೆ. ಹಾಗೇನೆ ಕೊರೊನಾದಿಂದ ಸತ್ತವರ ಸಂಖ್ಯೆ ಈಗ 20,037ಕ್ಕೇರಿದೆ ಎಂದು ಮಹಾರಾಷ್ಟ್ರ ಸಾರ್ವಜನಿಕ ಆರೋಗ್ಯ ಇಲಾಖೆ ತಿಳಿಸಿದೆ.
11,111 new #COVID19 positive cases, 8,837 discharges and 288 deaths reported in Maharashtra today. Total number of cases now at 5,95,865 including 1,58,395 active cases, 4,17,123 discharges and 20,037 deaths: Public Health Department, Maharashtra pic.twitter.com/xE0mKBetOy
— ANI (@ANI) August 16, 2020