ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಅವರ ದುರಂತ ಸಾವು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದೆ. ಮತ್ತೊಂದೆಡೆ ಸೆಕ್ಷನ್ 498(ಎ) ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಕ್ರಿಮಿನಲ್ ಲಾಯರ್ ವಿಕಾಸ್ ಹೇಳಿದ್ದಾರೆ.
ಆತ್ಮಹತ್ಯೆಗೂ ಮುನ್ನ ಅತುಲ್ ಸುಭಾಷ್ ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಪತ್ನಿ ಹಾಗೂ ಆಕೆಯ ಕುಟುಂಬ ಸದಸ್ಯರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸೆಕ್ಷನ್ 498A ಎಂದರೇನು?
ಐಪಿಸಿಯ ಸೆಕ್ಷನ್ 498ಎ ಪ್ರಕಾರ, ಮಹಿಳೆಯ ಪತಿ ಅಥವಾ ಆಕೆಯ ಪತಿಯ ಯಾವುದೇ ಕ್ರೌರ್ಯ (ಹೊಡೆಯುವುದು, ಕಿರುಕುಳ) ಮಾಡಿದರೆ ಅಥವಾ ಆ ಮಹಿಳೆಗೆ ಮಾನಸಿಕವಾಗಿ ಅಥವಾ ಇನ್ನಾವುದೇ ರೀತಿಯಲ್ಲಿ ಕಿರುಕುಳ ನೀಡಿದರೆ, ಆ ವ್ಯಕ್ತಿಗೆ ಶಿಕ್ಷೆ ವಿಧಿಸಲಾಗುತ್ತದೆ.ಐಪಿಸಿ 498ಎ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ.
ಪತಿ ಮತ್ತು ಆತನ ಸಂಬಂಧಿಕರಿಂದ ಯಾವುದೇ ರೀತಿಯ ಕಿರುಕುಳಕ್ಕೊಳಗಾದ ಮಹಿಳೆಯನ್ನು ರಕ್ಷಿಸುವುದು ಈ ಸೆಕ್ಷನ್ ಉದ್ದೇಶವಾಗಿದೆ. ಒಬ್ಬ ಪುರುಷ ತನ್ನ ಹೆಂಡತಿಯನ್ನು ಹೊಡೆದರೆ, ಆತ ತಪ್ಪಿತಸ್ಥನಾಗುತ್ತಾನೆ.
ಈ ಸೆಕ್ಷನ್ ಯಾವ ಸಂದರ್ಭದಲ್ಲಿ ಅನ್ವಯಿಸುತ್ತದೆ?
ಪತಿ ತನ್ನ ಹೆಂಡತಿಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿದರೆ ಅಥವಾ ಮಹಿಳೆಯ ಪತಿ ಅಥವಾ ಆಕೆಯ ಪತಿಯ ಯಾವುದೇ ಸಂಬಂಧಿ ಆ ಮಹಿಳೆಯಿಂದ ವರದಕ್ಷಿಣೆ ಕೇಳಿದರೆ ಕಿರುಕುಳ ನೀಡಿದರೆ, ವ್ಯಕ್ತಿ ವಿರುದ್ಧ ಸೆಕ್ಷನ್ 498 ಎ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ದಿನನಿತ್ಯದ ಕೌಟುಂಬಿಕ ಕಲಹಗಳಿಂದ ಮಹಿಳೆಯ ಮೇಲೆ ಹಲ್ಲೆ ನಡೆದರೆ ಅದೇ ಸೆಕ್ಷನ್ ಅನ್ವಯಿಸುತ್ತದೆ.
ಕ್ರಿಮಿನಲ್ ವಕೀಲರು ಏನು ಹೇಳುತ್ತಾರೆ?
ಕ್ರಿಮಿನಲ್ ವಕೀಲ ಅಡ್ವೊಕೇಟ್ ವಿಕಾಸ್ ಪಹ್ವಾ ಅವರು ಸೆಕ್ಷನ್ 498 ಎ ದುರ್ಬಳಕೆಯನ್ನು ತಡೆಯಲು ತುರ್ತು ಸುಧಾರಣೆಗಳನ್ನು ತರಬೇಕಾಗಿದೆ ಎಂದು ವಿಕಾಸ್ ಪಹ್ವಾ ಹೇಳಿದ್ದಾರೆ. ಗಂಡನ ಕುಟುಂಬದಿಂದ ಹಣವನ್ನು ಸುಲಿಗೆ ಮಾಡಲು ಬಯಸುವ ಅತೃಪ್ತ ಹೆಣ್ಣುಮಕ್ಕಳು ವರ್ಷಗಳಿಂದ ಕಾನೂನನ್ನು ಹೇಗೆ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದನ್ನು ವಿವರಿಸಿದ್ದಾರೆ.
ಮತ್ತಷ್ಟು ಓದಿ: ಬೆಂಗಳೂರಿನಿಂದ ಜೌನ್ಪುರಕ್ಕೆ 40 ಬಾರಿ ಹೋಗಿದ್ದ ಅತುಲ್ ಸುಭಾಷ್, ಬೆಂಗಳೂರು ಟೆಕ್ಕಿ ಸಾವಿನ ಬಳಿಕ ಪೋಷಕರು ಹೇಳಿದ್ದೇನು?
ವರದಕ್ಷಿಣೆ ಕಿರುಕುಳದ ನಿಜವಾದ ಪ್ರಕರಣಗಳಿದ್ದರೂ, ಪ್ರಕರಣಗಳನ್ನು ಆರ್ಥಿಕವಾಗಿ ಇತ್ಯರ್ಥಪಡಿಸಲು ಪತಿ ಮತ್ತು ಅವರ ಕುಟುಂಬಕ್ಕೆ ಒತ್ತಡ ಹೇರುವ ದುರುದ್ದೇಶದಿಂದ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ದಾಖಲಿಸಲಾಗುತ್ತದೆ ಎಂದು ಒತ್ತಿ ಹೇಳಿದರು.
ಈ ಪ್ರಕರಣಗಳಲ್ಲಿ ಹೆಚ್ಚಿನವು ಆಧಾರರಹಿತವಾಗಿವೆ ಮತ್ತು ಕಾನೂನಿನ ದುರುಪಯೋಗವನ್ನು ತಡೆಯಲು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುವ ಸಮಯ ಈಗ ಬಂದಿದೆ.
ಮತ್ತೋರ್ವ ವಕೀಲ ಸುಮಿತ್ ಗೆಹ್ಲೋಟ್ ಮಾತನಾಡಿ, ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ-ಸಂಬಂಧಿತ ಕಿರುಕುಳದಿಂದ ಮಹಿಳೆಯರನ್ನು ರಕ್ಷಿಸಲು ವರದಕ್ಷಿಣೆ ನಿಷೇಧ ಕಾಯಿದೆ ಮತ್ತು IPC ಯ 498A ಅನ್ನು ರಚಿಸಲಾಗಿದೆ ಎಂದು ಸುಮಿತ್ ಗೆಹ್ಲೋಟ್ ಒಪ್ಪಿಕೊಂಡರು, ಆದರೆ ದುರದೃಷ್ಟವಶಾತ್ ಈ ಕಾನೂನುಗಳನ್ನು ಕೆಲವು ಸಂದರ್ಭಗಳಲ್ಲಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದರು.
ನಿಕಿತಾ ಸಿಂಘಾಲಿನಿಯಾ ಕುಟುಂಬದವರ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದು, ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ. ಅತುಲ್ ಸುಭಾಷ್ 24 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು ಜತೆಗೆ 90 ನಿಮಿಷಗಳ ವಿಡಿಯೋವನ್ನು ಬಿಡುಗಡೆ ಮಾಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ