Atul Subhash: ಅತುಲ್​ ಮನೆಯವರು ಕೇಳಿದ್ದ ವರದಕ್ಷಿಣೆಯಿಂದಲೇ ನನ್ನ ತಂದೆ ಸತ್ತಿದ್ದು: ನಿಕಿತಾ

|

Updated on: Dec 13, 2024 | 2:10 PM

ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ 24 ಪುಟಗಳ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅತುಲ್ ವಿರುದ್ಧ ಪತ್ನಿ ನಿಕಿತಾ ಸಿಂಘಾನಿಯಾ ವರದಕ್ಷಿಣೆ ಸೇರಿ 9 ಪ್ರಕರಣಗಳನ್ನು ದಾಖಲಿಸಿದ್ದಳು. ಪತಿಯ ಕಡೆಯವರು ತನಗೆ 10 ಲಕ್ಷ ರೂ. ವರದಕ್ಷಿಣೆ ಕೇಳಿದ್ದರಿಂದಲೇ ತನ್ನ ತಂದೆ ಆಘಾತದಿಂದ ಸಾವನ್ನಪ್ಪಿದ್ದರು ಎಂದು ಆಕೆ ಆರೋಪಿಸಿದ್ದಳು.

Atul Subhash: ಅತುಲ್​ ಮನೆಯವರು ಕೇಳಿದ್ದ ವರದಕ್ಷಿಣೆಯಿಂದಲೇ ನನ್ನ ತಂದೆ ಸತ್ತಿದ್ದು: ನಿಕಿತಾ
ನಿಕಿತಾ
Follow us on

ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ 24 ಪುಟಗಳ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅತುಲ್ ವಿರುದ್ಧ ಪತ್ನಿ ನಿಕಿತಾ ಸಿಂಘಾನಿಯಾ ವರದಕ್ಷಿಣೆ ಸೇರಿ 9 ಪ್ರಕರಣಗಳನ್ನು ದಾಖಲಿಸಿದ್ದಳು. ಪತಿಯ ಕಡೆಯವರು ತನಗೆ 10 ಲಕ್ಷ ರೂ. ವರದಕ್ಷಿಣೆ ಕೇಳಿದ್ದರಿಂದಲೇ ತನ್ನ ತಂದೆ ಆಘಾತದಿಂದ ಸಾವನ್ನಪ್ಪಿದ್ದರು ಎಂದು ಆಕೆ ಆರೋಪಿಸಿದ್ದಳು.

ಹಾಗಾಗಿ ಈ ವರದಕ್ಷಿಣೆ ಪ್ರಕರಣ ಮತ್ತಷ್ಟು ಗಟ್ಟಿಯಾಗಿ ನ್ಯಾಯಾಲಯದಲ್ಲಿ ನಿಂತಿತ್ತು, 9 ಪ್ರಕರಣಗಳಲ್ಲಿ 6 ಪ್ರಕರಣ ಕೆಳ ನ್ಯಾಯಾಲಯದಲ್ಲಿದ್ದರೆ 3 ಹೈಕೋರ್ಟ್​​ನಲ್ಲಿತ್ತು, ಅತುಲ್ 40 ಬಾರಿ ಬೆಂಗಳೂರಿನಿಂದ ಜೌನ್​ಪುರಕ್ಕೆ ಹೋಗಿ ಬಂದಿದ್ದರು ಎಂದು ಅವರ ಸಹೋದರ ತಿಳಿಸಿದ್ದಾರೆ.

ಮೃತ ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಅವರ ಪತ್ನಿ ನಿಕಿತಾ ಸಿಂಘಾನಿಯಾ ಅವರು 2019 ರಲ್ಲಿ ತನ್ನ ತಂದೆಯ ಸಾವಿನ ಬಗ್ಗೆ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದರು. ವರದಕ್ಷಿಣೆಗಾಗಿ ಕಿರುಕುಳ ಮತ್ತು ಹಲ್ಲೆಯನ್ನು ಆರೋಪಿಸಿ ಸಿಂಘಾನಿಯಾ ಅವರು 2022 ರಲ್ಲಿ ಪೊಲೀಸ್ ದೂರು ದಾಖಲಿಸಿದ್ದರು.

ಕಿರುಕುಳ ಮತ್ತು ವರದಕ್ಷಿಣೆ ಬೇಡಿಕೆಗಳಿಂದಾಗಿ ತನ್ನ ತಂದೆ ಆಗಸ್ಟ್ 17, 2019 ರಂದು ಪಾರ್ಶ್ವವಾಯುವಿಗೆ ಒಳಗಾದರು ಎಂದು ಸಿಂಘಾನಿಯಾ ದೂರಿನಲ್ಲಿ ಆರೋಪಿಸಿದ್ದರು.

ಮತ್ತಷ್ಟು ಓದಿ: Atul Subhash: ಅತುಲ್​ಗೆ ನೀನ್ಯಾಕೆ ಆತ್ಮಹತ್ಯೆ ಮಾಡಿಕೊಳ್ಬಾರ್ದು ಎಂಬ ನಿಕಿತಾ ಪ್ರಶ್ನೆಗೆ ನಕ್ಕಿದ್ದ ಜಡ್ಜ್​ ರೀಟಾ

ಡೆತ್​ನೋಟ್​ನಲ್ಲಿ ಅತುಲ್ ಈ ವಿಚಾರವನ್ನೂ ಪ್ರಸ್ತಾಪಿಸಿದ್ದು, ಆಕೆಯ ತಂದೆ ಸುಮಾರು 10 ವರ್ಷಗಳಿಂದ ಮಧುಮೇಹ ಮತ್ತು ಹೃದ್ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರು ಹೇಳಿದರು.

ನಿಕಿತಾ ಸಿಂಘಾಯಾ, ಅವರ ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಮತ್ತು ಚಿಕ್ಕಪ್ಪ ಸುಶೀಲ್ ಸಿಂಘಾನಿಯಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಹೊರಿಸಲಾಗಿದೆ. ಸೋಮವಾರ ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಅತುಲ್ ಸುಭಾಷ್ ಶವವಾಗಿ ಪತ್ತೆಯಾಗಿದ್ದಾರೆ.

ಪೋಷಕರ ಸ್ಪಷ್ಟನೆ
ಬೆಂಗಳೂರಿನಲ್ಲಿ ತಮ್ಮ ಮಗನ ಅಂತಿಮ ವಿಧಿಗಳನ್ನು ನೆರವೇರಿಸಿದ ಬಳಿಕ ಕುಟುಂಬ ಬಿಹಾರದ ಸಮಷ್ಟಿಪುರಕ್ಕೆ ಮರಳಿದೆ. ಆತ್ಮಹತ್ಯೆ ಮಾಡಿಕೊಂಡ ಎಂಜಿನಿಯರ್ ಅತುಲ್ ಸುಭಾಷ್ ಅವರ ಪತ್ನಿ ನಿಕಿತಾ ಸಿಂಘಾನಿಯಾ ಅವರ ಆರೋಪಗಳಿಗೆ ತಂದೆ ಪವನ್ ಮೋದಿ ಸ್ಪಷ್ಟನೆ ನೀಡಿದರು.

ನನ್ನ ಮಗ ಎಂದೂ ಮದ್ಯ ಸೇವಿಸಿ ಹೊಡೆಯುವ ಕೃತ್ಯವನ್ನು ಮಾಡಿಲ್ಲ ಎಂದಿದ್ದಾರೆ, ಅಷ್ಟೇ ಅಲ್ಲದೆ ನಾವು ಅವರ ಬಳಿ 10 ಲಕ್ಷ ರೂ. ವರದಕ್ಷಿಣೆಯನ್ನೂ ಕೇಳಿಲ್ಲ ಇವೆಲ್ಲವೂ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಒಂದರ ಹಿಂದೆ ಒಂದರಂತೆ ನಮ್ಮ ಮೇಲೆ ಸುಳ್ಳು ಕೇಸುಗಳನ್ನು ಹಾಕಲಾಯಿತು. ಪತಿ ತನಗೆ ಬೆದರಿಕೆ ಹಾಕಿ ತನ್ನ ಸಂಪೂರ್ಣ ಸಂಬಳವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ ಎಂದು ನಿಕಿತಾ ಹೇಳಿಕೊಂಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Published On - 11:50 am, Thu, 12 December 24