
ಪವಿತ್ರ ಅಯೋಧ್ಯೆಯಲ್ಲಿ ಶ್ರೀರಾಮ ಚಂದ್ರನ ಮಂದಿರ ನಿರ್ಮಾಣಕ್ಕಾಗಿ ಶಬರಿಯಂತೆ ಕಾದಿದ್ದ ಭಕ್ತರಿಗೆ ನಾಳೆ ಬುಧವಾರ ಆ ಐತಿಹಾಸಿಕ ಕ್ಷಣ ಬಂದೇ ಬಿಟ್ಟಿದೆ. ಕಣ ಕಣದಲ್ಲೂ ರಾಮನಾಮ ಜಪಿಸುವ ಭಕ್ತರಿಗೆ ಇದಕ್ಕಿಂತ ಸಂಭ್ರಮದ ಕ್ಷಣ ಮತ್ತೊಂದು ಇರಲಾರದು.
ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಎಲ್ಲೆಡೆ ಸಂಭ್ರಮ ಸಡಗರ ಮುಗಿಲುಮುಟ್ಟಿದೆ. ಅಯೋಧ್ಯೆಯಂತೂ ಸಕಲ ರೀತಿಯಲ್ಲಿ ಶೃಂಗಾರಗೊಂಡಿದೆ. ನೋಡಲೆರಡು ಕಣ್ಣುಗಳು ಸಾಲದಪ್ಪಾ ಅನ್ನುತ್ತಿದ್ದಾರೆ ಅಯೋಧ್ಯೆಯಲ್ಲಿ ಈಗಾಗಲೇ ಜಮಾಯಿಸಿರುವ ರಾಮಭಕ್ತರು! ನೀವೂ ಕಣ್ತುಂಬಿಕೊಳ್ಳಿ ಅಯೋಧ್ಯೆಯಲ್ಲಿನ ದೀಪಾಲಂಕಾರವನ್ನು.
Published On - 9:39 pm, Tue, 4 August 20