ಬಾಲಕಿಯನ್ನು ಕೊಂದು ಆಕೆಯ ಮನೆಯಲ್ಲೇ ಶವ ಹೂಳುವಾಗ ಸಿಕ್ಕಿಬಿದ್ದ ಯುವಕ

ಪ್ರೀತಿ ಒಪ್ಪದಿದ್ದಕ್ಕೆ ಬಾಲಕಿಯ ಮನೆಗೆ ಬಂದು ಆಕೆಯ ಮೇಲೆ ಹಲ್ಲೆ ನಡೆಸಿ, ಕೊಂದು, ಶವವನ್ನು ಹೂತುಹಾಕುವಾಗ ಯುವಕ ಸಿಕ್ಕಿಬಿದ್ದಿರುವ ಘಟನೆ ಬಾಗ್​​ಪತ್​ನಲ್ಲಿ ನಡೆದಿದೆ. ಬಾಗ್‌ಪತ್ ಜಿಲ್ಲೆಯ ಬೌಧಾ ಗ್ರಾಮದಲ್ಲಿ ನಡೆದ ಘಟನೆಯ ನಂತರ ಸಮುನ್ ಎಂದು ಗುರುತಿಸಲಾದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಲಕಿಯನ್ನು ಕೊಂದು ಆಕೆಯ ಮನೆಯಲ್ಲೇ ಶವ ಹೂಳುವಾಗ ಸಿಕ್ಕಿಬಿದ್ದ ಯುವಕ
ಸಾವು
Image Credit source: iStock

Updated on: Aug 28, 2025 | 11:10 AM

ಬಾಗ್​​ಪತ್, ಆಗಸ್ಟ್​ 28: ಪ್ರೀತಿ ಒಪ್ಪದಿದ್ದಕ್ಕೆ ಬಾಲಕಿಯ ಮನೆಗೆ ಬಂದು ಆಕೆಯ ಮೇಲೆ ಹಲ್ಲೆ ನಡೆಸಿ, ಕೊಲೆ( Murder) ಮಾಡಿ,  ಶವವನ್ನು ಹೂತುಹಾಕುವಾಗ ಯುವಕ ಸಿಕ್ಕಿಬಿದ್ದಿರುವ ಘಟನೆ ಬಾಗ್​​ಪತ್​ನಲ್ಲಿ ನಡೆದಿದೆ. ಬಾಗ್‌ಪತ್ ಜಿಲ್ಲೆಯ ಬೌಧಾ ಗ್ರಾಮದಲ್ಲಿ ನಡೆದ ಘಟನೆಯ ನಂತರ ಸಮುನ್ ಎಂದು ಗುರುತಿಸಲಾದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ಪಿ. ಸಿಂಗ್ ಅವರ ಪ್ರಕಾರ, ಬುಧವಾರ ಛಪ್ರೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 14 ವರ್ಷದ ಬಾಲಕಿಯ ಮನೆಗೆ ನುಗ್ಗಿದ ಸಮುನ್, ಕಬ್ಬಿಣದ ರಾಡ್​​ನಿಂದ ಹೊಡೆದು ಆಕೆಯನ್ನು ಹತ್ಯೆ ಮಾಡಿದ್ದಾನೆ.

ವಿಚಾರಣೆಯ ಸಮಯದಲ್ಲಿ, ಸಮುನ್ ಹುಡುಗಿಯನ್ನು ಪ್ರೀತಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ, ಆಕೆ ಪ್ರೀತಿಯನ್ನು ಒಪ್ಪಿಕೊಳ್ಳದ ಕಾರಣ ಕೋಪದಲ್ಲಿ ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ.
ಆರೋಪಿ ಬಾಲಕಿಯೊಂದಿಗೆ ದೈಹಿಕ ಸಂಬಂಧ ಹೊಂದಲು ಬಯಸಿದ್ದ, ಅದಕ್ಕೆ ಆಕೆ ನಿರಾಕರಿಸಿದ್ದಳು, ಇದರಿಂದ ಆಕೆಯ ಮೇಲೆ ಕೋಪಗೊಂಡು ಕೊಲೆ ಮಾಡಿದ್ದಾನೆ. ಸಮುನ್ ಬಾಲಕಿಯ ಶವವನ್ನು ಮನೆಯಲ್ಲಿ ಹೂಳುತ್ತಿದ್ದಾಗ ಆಕೆಯ ಕುಟುಂಬ ಸದಸ್ಯರು ಸ್ಥಳಕ್ಕೆ ಬಂದಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.

ಮತ್ತಷ್ಟು ಓದಿ: ಪಾರ್ಕಿಂಗ್ ವಿವಾದ, ಉತ್ತರ ಪ್ರದೇಶದಲ್ಲಿ ಶಿಕ್ಷಕನ ಬರ್ಬರ ಹತ್ಯೆ, ಮೂವರ ಬಂಧನ

ಅವರು ಪೊಲೀಸರಿಗೆ ಮಾಹಿತಿ ನೀಡಿದರು ಮತ್ತು ಆರೋಪಿಯನ್ನು ಬಂಧಿಸಲಾಯಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮತ್ತೊಂದು ಘಟನೆ

ಇನ್‌ಸ್ಟಾಗ್ರಾಮ್​​ನಲ್ಲಿ ಪರಿಚಯವಾಗಿ ಹತ್ತೇ ದಿನಕ್ಕೆ ಕೊಲೆಯಾದ ವಿವಾಹಿತ ಮಹಿಳೆ
ವಿವಾಹಿತೆಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿದ ಪ್ರಿಯಕರ ಆಕೆಯ ಶವವನ್ನು ತನ್ನ ಜಮೀನಿನಲ್ಲೇ ಬಚ್ಚಿಟ್ಟಿರುವಂತ ಘಟನೆ ಜಿಲ್ಲೆಯ ಕೆ.ಆರ್‌ಪೇಟೆ ತಾಲೂಕಿನ ಕರೋಟಿ ಗ್ರಾಮದಲ್ಲಿ ನಡೆದಿದೆ. ಈ ಕೊಲೆಯಿಂದ ಇಡೀ ಸಕ್ಕರೆ ನಗರಿ ಬೆಚ್ಚಿಬಿದ್ದಿದೆ. ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ (35)ಯನ್ನ ಕರೋಟಿ ಗ್ರಾಮದ ಪುನೀತ್​ ಹತ್ಯೆಗೈದಿದ್ದಾನೆ.

ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪುನೀತ್ ಹಾಗೂ ವಿವಾಹಿತ ಮಹಿಳೆ ಪ್ರೀತಿ ಇಬ್ಬರು ಇನ್‌ಸ್ಟಾಗ್ರಾಮ್​​ನಲ್ಲಿ ಇತ್ತೀಚೆಗೆ ಪರಿಚಯವಾಗಿದ್ದಾರೆ. ಗಂಡ, ಮಕ್ಕಳಿದ್ದರೂ ಪ್ರೀತಿ, ಪುನೀತ್​ನನ್ನ ಲವ್​ ಮಾಡಿದ್ದಾರೆ. ಪರಿಚಯವಾಗಿ ಹತ್ತು ದಿನ ಪ್ರೀತಿ, ಪ್ರೇಮ ಎಂದು ಸುತ್ತಾಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 11:09 am, Thu, 28 August 25