ಮೋದಿ ಒಂದೇ ಹೊಡೆತಕ್ಕೆ ಚೀನಾಗೆ 6 ಬಿಲಿಯನ್ ಡಾಲರ್ ನಷ್ಟವಾಯ್ತು!
ದೆಹಲಿ: ಭಾರತದಲ್ಲಿ ಚೀನಾ ಮೂಲದ 59 ಌಪ್‌ಗಳನ್ನು ಭಾರತ ಬ್ಯಾನ್ ಮಾಡಿದ್ದೇ ತಡ ಚೀನಾ ಇಂಗು ತಿಂದ ಮಂಗನಂತಾಗಿದೆ. ಏನೋ ಮಾಡಲು ಹೋಗಿ ಮತ್ತಿನ್ನೇನೋ ಮಾಡಿಕೊಂಡಂತಾಗಿದೆ. ಯಾಕಂದ್ರೆ ಚೀನಾ ಸರ್ಕಾರದ ಮುಖವಾಣಿ ದಿ ಗ್ಲೋಬಲ್ ಟೈಮ್ಸ್ ಪ್ರಕಾರ ಭಾರತದ ಕ್ರಮದಿಂದ ಟಿಕ್ ಟಾಕ್ ಒಂದೇ ಕಂಪನಿಗೆ ಸುಮಾರು 6 ಬಿಲಿಯನ್ ಡಾಲರ್ ನಷ್ಟವುಂಟಾಗಲಿದೆ. ಹೌದು, ಲಡಾಖ್ ಬಳಿಯ ಗೊಲ್ವಾನ್ ಹತ್ತಿರ ಭಾರತ-ಚೀನಾ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ನಂತರ ಭಾರತ ಸಿಡಿದೆದ್ದಿದೆ. ಚೀನಾ ವಿರುದ್ಧ ಪ್ರತಿಕಾರದ […]
ದೆಹಲಿ: ಭಾರತದಲ್ಲಿ ಚೀನಾ ಮೂಲದ 59 ಌಪ್‌ಗಳನ್ನು ಭಾರತ ಬ್ಯಾನ್ ಮಾಡಿದ್ದೇ ತಡ ಚೀನಾ ಇಂಗು ತಿಂದ ಮಂಗನಂತಾಗಿದೆ. ಏನೋ ಮಾಡಲು ಹೋಗಿ ಮತ್ತಿನ್ನೇನೋ ಮಾಡಿಕೊಂಡಂತಾಗಿದೆ. ಯಾಕಂದ್ರೆ ಚೀನಾ ಸರ್ಕಾರದ ಮುಖವಾಣಿ ದಿ ಗ್ಲೋಬಲ್ ಟೈಮ್ಸ್ ಪ್ರಕಾರ ಭಾರತದ ಕ್ರಮದಿಂದ ಟಿಕ್ ಟಾಕ್ ಒಂದೇ ಕಂಪನಿಗೆ ಸುಮಾರು 6 ಬಿಲಿಯನ್ ಡಾಲರ್ ನಷ್ಟವುಂಟಾಗಲಿದೆ.
ಹೌದು, ಲಡಾಖ್ ಬಳಿಯ ಗೊಲ್ವಾನ್ ಹತ್ತಿರ ಭಾರತ-ಚೀನಾ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ನಂತರ ಭಾರತ ಸಿಡಿದೆದ್ದಿದೆ. ಚೀನಾ ವಿರುದ್ಧ ಪ್ರತಿಕಾರದ ಗುಂಗಿನಲ್ಲಿರುವ ಭಾರತ, ಚೀನಾಗೆ ಆರ್ಥಿಕವಾಗಿ ಹೊಡೆಯಲು ಮುಂದಾಗಿದೆ. ಇದರ ಮೊದಲ ಹೆಜ್ಜೆಯೇ ಭಾರತದಲ್ಲಿ ಭಾರೀ ಪಾಪುಲರ್ ಆಗಿರುವ ಟಿಕ್ ಟಾಕ್ ಸೇರಿ ಚೀನಾ ಮೂಲದ 59 ಌಪ್‌ಗಳ ಬ್ಯಾನ್.
ಚೀನಾ ಮುಖವಾಣಿ ಹೇಳಿದ 6 ಬಿಲಿಯನ್ ನಷ್ಟದ ಕಥೆ ಇದಾದ ನಂತರ ಚೀನಾ ತಲೆ ಪರಚಿಕೊಳ್ತಿದೆ. ಯಾಕಂದ್ರೆ ಚೀನಾ ಜಗತ್ತು ಗೆಲ್ಲಲು ಹೊರಟಿದ್ದೇ ಆರ್ಥಿಕ ಶಸ್ತ್ರದಿಂದ. ಹೀಗಾಗಿ ಅಲ್ಲಿಯೇ ಅದಕ್ಕೆ ಈ ರೀತಿಯ ಹೊಡೆತ ಬಿದ್ದಿರೋದು ಕಕ್ಕಾಬಿಕ್ಕಿಯಾಗುವಂತೆ ಮಾಡಿದೆ. ಅದರ ಮುಖವಾಣಿ ದಿ ಗ್ಲೋಬಲ್ ಟೈಮ್ಸ್ ಪತ್ರಿಕೆಯ ಪ್ರಕಾರ ಟಿಕ್ ಟಾಕ್ ಌಪ್‌ನ ಮೂಲ ಕಂಪನಿ ಚೀನಾದ ಬೈಟ್ ಡ್ಯಾನ್ಸ್‌ಗೆ ಈ ಬ್ಯಾನ್‌ನಿಂದಾಗಿ ಸುಮಾರು 6 ಬಿಲಿಯನ್ ಯುಎಸ್ ಡಾಲರ್ ನಷ್ಟವಾಗಿದೆ. ಇಷ್ಟೇ ಅಲ್ಲ ಇದೇ ಕಂಪನಿಯ ಇತರ ಌಪ್‌ಗಳಾದ ವಿಗೋ ವಿಡಿಯೋ ಹಾಗೂ ಹೆಲೋ ಌಪ್‌ಗಳು ಕೂಡಾ ಬ್ಯಾನ್ ಆಗಿವೆ.
ಟಿಕ್ ಟಾಕ್‌ನ ಶೇ. 20 ಮಾರ್ಕೆಟ್ ಭಾರತದಲ್ಲಿದೆ ಅದ್ರಲ್ಲೂ ಪ್ರಮುಖವಾಗಿ ಟಿಕ್ ಟಾಕ್ ಬ್ಯಾನ್ ಚೀನಾದ ಕಂಪನಿಗೆ ಭಾರೀ ಹೊಡೆತ. ಪ್ರಮುಖ ಮೊಬೈಲ್ ಡಾಟಾ ಅನಾಲಿಸಸ್ ಕಂಪನಿ ಪ್ರಕಾರ, ಕಳೆದ ಮೇ ತಿಂಗಳೊಂದರಲ್ಲಿಯೇ 112 ಮಿಲಿಯನ್ ಟಿಕ್ ಟಾಕ್ ಌಪ್‌ಗಳನ್ನ ಡೌನ್ ಲೋಡ್ ಮಾಡಲಾಗಿದೆ. ಇದ್ರಲ್ಲಿ ಭಾರತದಲ್ಲಿಯೇ ಶೇ. 20ರಷ್ಟು ಡೌನ್‌ಲೋಡ್ ಆಗಿವೆ. ಹೀಗಾಗಿ ಇದು ಚೀನಾಗೆ ಭಾರೀ ಆರ್ಥಿಕ ಹೊಡೆತ. ಇನ್ನು ಇತರ ಌಪ್‌ಗಳ ಆದಾಯ ಸೇರಿಸಿದರೆ ನಷ್ಟ ಅಷ್ಟಿಷ್ಟಲ್ಲ. ಆದರೇನು ಮಾಡೋದು ಮಾಡಿದ್ದುಣ್ಣೋ ಮಾರಾಯಾ ಅಂತಾರಲ್ಲಾ ಹಾಗಾಗಿದೆ ರೆಡ್ ಡ್ರಾಗನ್ ಸ್ಥಿತಿ.
Published On - 6:08 pm, Thu, 2 July 20