ಭೀಮಾ ಕೋರೆಗಾಂವ್(Bhima Koregaon) ಪ್ರಕರಣದ ಆರೋಪಿ ಗೌತಮ್ ನವ್ಲಾಖಾ(Gautam Navlakha)ಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ. ಕಳೆದ ನಾಲ್ಕು ವರ್ಷಗಳಿಂದ ಗೌತಮ್ ನವ್ಲಾಖಾ ಬಂಧನದಲ್ಲಿದ್ದರು. ಎಲ್ಗಾರ್ ಪರಿಷತ್ ಮಾವೋವಾದಿಗಳ ಜೊತೆಗಿನ ಸಂಪರ್ಕ ಪ್ರಕರಣದಲ್ಲಿ ಬಂಧಿತರಾಗಿದ್ದ ಕಾರ್ಯಕರ್ತ ಗೌತಮ್ ನವ್ಲಾಖಾ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ಈ ಪ್ರಕರಣದ 6 ಸಹ ಆರೋಪಿಗಳು ಈಗಾಗಲೇ ಜಾಮೀನು ಪಡೆದಿದ್ದಾರೆ. ನವ್ಲಾಖಾ ಅವರ ಜಾಮೀನಿನ ಮೇಲಿನ ನಿಷೇಧವನ್ನು ಮತ್ತಷ್ಟು ವಿಸ್ತರಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಗೌತಮ್ ನವ್ಲಾಖಾ ಮೇಲಿನ ಆರೋಪವೇನು?
ಗೌತಮ್ ನವ್ಲಾಖಾ ಅವರು ನವೆಂಬರ್ 2022 ರಿಂದ ನವಿ ಮುಂಬೈನಲ್ಲಿ ಗೃಹಬಂಧನದಲ್ಲಿದ್ದರು. ಅವರ ವಯಸ್ಸು ಮತ್ತು ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಅವರ ಗೃಹಬಂಧನಕ್ಕೆ ಆದೇಶಿಸಿತ್ತು, ಅವರನ್ನು ಮೊದಲು ಜೈಲಿನಲ್ಲಿ ಇರಿಸಲಾಗಿತ್ತು. ನವ್ಲಾಖಾ ಮತ್ತು ಇತರ ಸಹ ಆರೋಪಿಗಳು ಭೀಮಾ ಕೋರೆಗಾಂವ್ ಸ್ಮಾರಕದಲ್ಲಿ ಜಾತಿ ಗಲಭೆಗಳನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಭೀಮಾ ಕೋರೆಗಾಂವ್ ಮಹಾರಾಷ್ಟ್ರದ ಪುಣೆ ಬಳಿ ಇದೆ.
ಮತ್ತಷ್ಟು ಓದಿ: ಭೀಮಾ ಕೋರೆಗಾಂವ್ ಪ್ರಕರಣ: ಮಾಜಿ ಪ್ರೊಫೆಸರ್ ಜಾಮೀನು ಅರ್ಜಿ ಬಗ್ಗೆ ಎನ್ಐಎ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್
ಆಗಸ್ಟ್ 2018 ರಲ್ಲಿ ಬಂಧಿಸಲಾಯಿತು
ಗೌತಮ್ ನವ್ಲಾಖಾ ಅವರು ಮಾನವ ಹಕ್ಕುಗಳ ಕಾರ್ಯಕರ್ತ ಮತ್ತು ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್‌ನ ಮಾಜಿ ಕಾರ್ಯದರ್ಶಿ. ಅವರನ್ನು ಆಗಸ್ಟ್ 2018 ರಲ್ಲಿ ಬಂಧಿಸಲಾಯಿತು. ಬಾಂಬೆ ಹೈಕೋರ್ಟ್ ಕಳೆದ ವರ್ಷ ಗೌತಮ್ ನವ್ಲಾಖಾ ಅವರಿಗೆ ಜಾಮೀನು ನೀಡಿತ್ತು ಆದರೆ ನಂತರ ತನ್ನದೇ ಆದ ಆದೇಶಕ್ಕೆ ತಡೆ ನೀಡಿತ್ತು. ಇದಾದ ನಂತರ ಮಾನವೀಯ ನೆಲೆಯಲ್ಲಿ ಅವರನ್ನು ಗೃಹಬಂಧನದಲ್ಲಿಡಲು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
ಏನಿದು ಭೀಮಾ ಕೋರೆಗಾಂವ್ ಪ್ರಕರಣ
2017ರ ಡಿಸೆಂಬರ್ 31ರಂದು ಪುಣೆಯಲ್ಲಿ ನಡೆದ ಎಲ್ಗರ್ ಪರಿಷತ್ತಿನ ಸಮ್ಮೇಳನಕ್ಕೆ ಸಂಬಂಧಿಸಿದ್ದಾಗಿದೆ. ದು ಮರುದಿನ ನಗರದ ಹೊರವಲಯದಲ್ಲಿರುವ ಭೀಮಾ ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಹಿಂಸಾಚಾರವನ್ನು ಪ್ರಚೋದಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ