ನಮ್ಮ ತಲೆಯ ಮೇಲೆ ಸೂರ್ಯ-ಚಂದ್ರರು ಇರುವವರೆಗೂ ನೆರಳು ಬೀಳಲೇ ಬೇಕು. ಯಾವುದೇ ಘಳಿಗೆಯೂ ಮಿಸ್ ಆಗೋಕ್ಕೆ ಛಾನ್ಸೇ ಇಲ್ಲ ಅಂತಾ ತಿಳಿದಿದ್ರೆ ಒಡಿಶಾಲ್ಲೊಂದು ನೆರಳು-ಬೆಳಕಿನ ಆಟ ನಡೆದಿದೆ, ಗಮನಿಸಿ. ಅಂದಹಾಗೆ ಬೆಂಗಳೂರು- ಮಂಗಳೂರಿನಲ್ಲಿಯೂ ಇಂತಹ ವಿಸ್ಮಯ ನಡೆದಿದೆ.
ಹೌದು ವರ್ಷಕ್ಕೆ ಎರಡು ಬಾರಿ ಭೂಮಿಯ ಮೇಲೆ ನೆರಳು ಬೀಳುವುದೇ ಇಲ್ಲ. ಆಕಾಶದಲ್ಲಿ ನಡೆಯುವ ಚಮತ್ಕಾರ ಅದು ಅಂತಿದ್ದಾರೆ ವಿಜ್ಞಾನಿಗಳು. ಭುವನೇಶ್ವರದಲ್ಲಿ ಇಂತಹ ನೆರಳಿಲ್ಲದ ಚಮತ್ಕಾರ (Zero shadow day) ನಿನ್ನೆ ನಡೆದಿದ್ದರೆ ನಾಳೆ ಕಟಕ್ನಲ್ಲಿ ನಡೆಯಲಿದೆ ನೋಡಲು ಮರೆಯದಿರಿ ಅಂತಿದ್ದಾರೆ ಇದೇ ವಿಜ್ಞಾನಿಗಳು. ಹೌದು ನಿನ್ನೆ ಭುವನೇಶ್ವರದಲ್ಲಿ ಇಂತಹ ಅಪರೂಪದ ಚಮತ್ಕಾರ ನಡೆದಾಗ ಫೋಟೋಗಳನ್ನು ತೆಗೆಯಲಾಗಿದ್ದು, ದೃಶ್ಯ ಸಾಕ್ಷ್ಯವನ್ನು ಒದಗಿಸಿದ್ದಾರೆ.
ಈ ಬಗ್ಗೆ ಪಠಾಣಿ ಸಾಮಂತ ಪ್ಲಾನಿಟೋರಿಯಂ ಉಪ ನಿರ್ದೇಶಕ ಸುಬೇಂದು ಪಟ್ನಾಯಿಕ್ ಅವರು ಎಎನ್ಐ ಸುದ್ದಿಸಂಸ್ಥೆಯ ಜೊತೆ ಮಾತನಾಡುತ್ತಾ ನಿನ್ನೆ ಶುಕ್ರವಾರ ಭುವನೇಶ್ವರದಲ್ಲಿ ಅನೇಕ ಮಂದಿ ಇಂತಹ ವಿರಳ ಘಟನೆಯನ್ನು ಕಂಡಿದ್ದಾರೆ. ಸೂರ್ಯ ಕರಾರುವಕ್ಕಾಗಿ ನೇರವಾಗಿ ನಮ್ಮ ತಲೆಯ ಮೇಲೆ ಬಂದಾಗ ಈ ಪರಿಸ್ಥಿತಿ ಉದ್ಭವವಾಗುತ್ತದೆ. ಇಂದು ನಾವು ನೋಡಿದ್ದೇವೆ; ನಾಳೆ ಕಟಕ್ನಲ್ಲಿ ಜನ ನೋಡಬಹುದು ಎಂದಿದ್ದಾರೆ.
ಆಕಾಶದಲ್ಲಿ ಸೂರ್ಯ ಅತ್ಯಂತ ಮೇಲ್ತುದಿಯಲ್ಲಿದ್ದಾಗ (Zenith) ಇಂತಹ ಸೊಬಗು ನೋಡಬಹುದು. ಇಂತಹ ಸಮಯದಲ್ಲಿ ಯಾವುದೇ ವಸ್ತು ಅಥವಾ ಜೀವಿಗಳ ಮೇಲೆ ಸೂರ್ಯನ ಬೆಳಕು ಬಿದ್ದಿದ್ದರೂ ಅದರ ಕೆಳಗೆ ನೆರಳು ಬಿದ್ದಿರುವುದಿಲ್ಲ. ಸಾಮಾನ್ಯವಾಗಿ ಇದು ಮಧ್ಯಾಹ್ನದ ನಂತರ ಘಟಿಸುತ್ತದೆ. ಆದರೆ ಮಧ್ಯಾಹ್ನದ ನಂತರ ಸೂರ್ಯನ ಬೆಳಕು ಬಿದ್ದಾಗ ಅದರ ಪ್ರತಿಫಲವಾಗಿ ನೆರಳು ಉತ್ತರ ದಿಕ್ಕಿನಲ್ಲಿ ಬಿದ್ದಿರುತ್ತದೆ. ಆದರೆ ಈ ಎರಡೂ ದಿನಗಳಂದು ಸೂರ್ಯ ನೇರವಾಗಿ ನಮ್ಮ ಮೇಲೆ ಅಥವಾ ಯಾವುದೇ ವಸ್ತುವಿನ ಮೇಲೆ ಬಿದ್ದಾಗ ಆ ಬೆಳಕಷ್ಟೂ ನಮ್ಮ ದೇಹದ ಮೇಲೆಯೇ ಇರುತ್ತದೆ. ಆದರೆ ಉತ್ತರದ ದಿಕ್ಕಿನತ್ತ ವಾಲಿರುವುದಿಲ್ಲ ಎಂದು ವಿವರಿಸುತ್ತಾರೆ ಪ್ಲಾನಿಟೋರಿಯಂ ನಿರ್ದೇಶಕ ಸುಬೇಂದು ಪಟ್ನಾಯಿಕ್ ಅವರು.
Odisha: People witnessed Zero Shadow Day, a celestial phenomenon, in Bhubaneswar yesterday
"It occurs twice a year when sun is directly overhead. We experienced it today. Can be experienced in Cuttack tomorrow," said Subhendu Patnaik, Deputy Director, Pathani Samanta Planetarium pic.twitter.com/7YugRo8H2Y
— ANI (@ANI) May 22, 2021
(Bhubaneswar Cuttack witness a rare celestial event zero shadow day whats it)