Maharashtra MLC Election Results: ನಾಗ್ಪುರದಲ್ಲಿ ಬಿಜೆಪಿಗೆ ಹಿನ್ನಡೆ; ಎಂವಿಎಯ ಸುಧಾಕರ್​​ ಅಡಬಾಲೆಗೆ ಗೆಲುವು

|

Updated on: Feb 02, 2023 | 8:43 PM

Nagpur ಶಿವಸೇನಾದಲ್ಲಿ ಬಂಡಾಯವೆದ್ದ ಏಕನಾಥ್ ಶಿಂಧೆ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ನಂತರ ನಡೆದಿರುವ ಚುನಾವಣೆಯಲ್ಲಿ ಎಂವಿಎಯ ಸುಧಾಕರ್ ಅಡಬಾಲೆ, ಬಿಜೆಪಿ ಬೆಂಬಲಿತ ನಾಗೋ ಗನಾರ್ ಅವರನ್ನು ಸೋಲಿಸಿ ನಾಗ್ಪುರ ಶಿಕ್ಷಕರ ಕ್ಷೇತ್ರದಲ್ಲಿ ಗೆದ್ದಿದ್ದಾರೆ

Maharashtra MLC Election Results: ನಾಗ್ಪುರದಲ್ಲಿ ಬಿಜೆಪಿಗೆ ಹಿನ್ನಡೆ; ಎಂವಿಎಯ ಸುಧಾಕರ್​​ ಅಡಬಾಲೆಗೆ ಗೆಲುವು
ದೇವೇಂದ್ರ ಫಡ್ನವಿಸ್
Follow us on

ಮುಂಬೈ: ತನ್ನ ಪ್ರಮುಖ ಭದ್ರಕೋಟೆಗಳಲ್ಲಿ ಬಿಜೆಪಿಗೆ (BJP) ಹಿನ್ನಡೆಯಾಗಿದ್ದು, ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (MVA) ಒಕ್ಕೂಟದ ಅಭ್ಯರ್ಥಿ ಗುರುವಾರ ಮಹಾರಾಷ್ಟ್ರ ವಿಧಾನ ಪರಿಷತ್  ಚುನಾವಣೆಯಲ್ಲಿ (Maharashtra Legislative Council) ನಾಗ್ಪುರ (Nagpur) ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಯನ್ನು ಸೋಲಿಸಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ರಂತಹ ಪ್ರಮುಖ ನಾಯಕರ ತವರು ಮತ್ತು  ಆರ್​​ಎಸ್​​ಎಸ್ ಪ್ರಧಾನ ಕಚೇರಿಯಿರುವ ನಾಗ್ಪುರದಲ್ಲಿಯೇ ಬಿಜೆಪಿಗೆ ಮುಖಭಂಗವಾಗಿದೆ.ಶಿವಸೇನಾದಲ್ಲಿ ಬಂಡಾಯವೆದ್ದ ಏಕನಾಥ್ ಶಿಂಧೆ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ನಂತರ ನಡೆದಿರುವ ಚುನಾವಣೆಯಲ್ಲಿ ಎಂವಿಎಯ ಸುಧಾಕರ್ ಅಡಬಾಲೆ, ಬಿಜೆಪಿ ಬೆಂಬಲಿತ ನಾಗೋ ಗನಾರ್ ಅವರನ್ನು ಸೋಲಿಸಿ ನಾಗ್ಪುರ ಶಿಕ್ಷಕರ ಕ್ಷೇತ್ರದಲ್ಲಿ ಗೆದ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯ ಶಾಸಕಾಂಗದ ಮೇಲ್ಮನೆಗೆ ದ್ವೈವಾರ್ಷಿಕ ಚುನಾವಣೆಗಳು ಮುಖ್ಯವಾಗಿ ಬಿಜೆಪಿ ಮತ್ತು ಶಿಂಧೆ ಅವರ ಶಿವಸೇನಾ ಬಣದ ಆಡಳಿತದ ಮೈತ್ರಿ ಮತ್ತು ಠಾಕ್ರೆ ಅವರ ಶಿವಸೇನಾ , ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಒಳಗೊಂಡಿರುವ ಎಂವಿಎ ಬೆಂಬಲಿತ ಅಭ್ಯರ್ಥಿಗಳ ನಡುವೆ ನಡೆದಿದೆ.

ಮೂರು ಶಿಕ್ಷಕರ ಕ್ಷೇತ್ರ ಮತ್ತು ಇಬ್ಬರು ಪದವೀಧರ ಕ್ಷೇತ್ರಗಳಿಂದ ಐದು ಕೌನ್ಸಿಲ್ ಸದಸ್ಯರ 6 ವರ್ಷಗಳ ಅವಧಿ ಫೆಬ್ರವರಿ 7 ರಂದು ಮುಕ್ತಾಯಗೊಳ್ಳುತ್ತಿದ್ದು ಮುಂಬರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸೋಮವಾರ ಮತದಾನ ನಡೆಯಿತು. ಶಿಕ್ಷಕರು ಮತ್ತು ಪದವೀಧರರು ಕೆಲವು ಮಾನದಂಡಗಳನ್ನು ಪೂರೈಸುತ್ತಾರೆ ಮತ್ತು ಮತದಾರರಾಗಿ ನೋಂದಾಯಿಸಲ್ಪಟ್ಟವರು ಈ ಚುನಾವಣೆಗಳಲ್ಲಿ ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದರು.

ಕೊಂಕಣ ಶಿಕ್ಷಕರ ಕ್ಷೇತ್ರದಲ್ಲಿ ಶೇ.91.02 ಅತಿ ಹೆಚ್ಚು ಮತದಾನವಾಗಿದ್ದು, ನಾಸಿಕ್ ವಿಭಾಗದ ಪದವೀಧರರ ಸ್ಥಾನವು ಅತಿ ಕಡಿಮೆ ಶೇ.49.28ರಷ್ಟು ಮತದಾನವಾಗಿದೆ. ಔರಂಗಾಬಾದ್, ನಾಗ್ಪುರ ಮತ್ತು ಕೊಂಕಣ ವಿಭಾಗದ ಶಿಕ್ಷಕರ ಕ್ಷೇತ್ರಗಳಲ್ಲಿ ಕ್ರಮವಾಗಿ ಶೇ.86, ಶೇ.86.23 ಮತ್ತು ಶೇ.91.02ರಷ್ಟು ಮತದಾನವಾಗಿದೆ. ಕೊಂಕಣ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ