ಜನಸಂಖ್ಯೆ ನಿಯಂತ್ರಣ ಕುರಿತು ಅಸಭ್ಯ ಹೇಳಿಕೆ, ಕ್ಷಮೆಯಾಚಿಸಿದ ನಿತೀಶ್ ಕುಮಾರ್

|

Updated on: Nov 08, 2023 | 10:57 AM

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ಜನಸಂಖ್ಯೆ ನಿಯಂತ್ರಣದ ಕುರಿತು ಅಸಭ್ಯ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ಮಂಗಳವಾರ ವಿಧಾನಸಭೆಯಲ್ಲಿ ಭಾಣಷ ಮಾಡುವಾಗ ಜನಸಂಖ್ಯೆ ನಿಯಂತ್ರಣ ಕುರಿತು ಅಶ್ಲೀಲ ಹೇಳಿಕೆ ನೀಡಿದ್ದು, ಮಹಿಳಾ ಶಾಸಕರು ಮುಜುಗರ ಅನುಭವಿಸುವಂತಾಯಿತು. ಈ ಕುರಿತು ನಿತೀಶ್​ ಕುಮಾರ್ ಕ್ಷಮೆಯಾಚಿಸಿದ್ದಾರೆ.

ಜನಸಂಖ್ಯೆ ನಿಯಂತ್ರಣ ಕುರಿತು ಅಸಭ್ಯ ಹೇಳಿಕೆ, ಕ್ಷಮೆಯಾಚಿಸಿದ ನಿತೀಶ್ ಕುಮಾರ್
ನಿತೀಶ್​ ಕುಮಾರ್
Image Credit source: OpIndia
Follow us on

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ಜನಸಂಖ್ಯೆ ನಿಯಂತ್ರಣದ ಕುರಿತು ಅಸಭ್ಯ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ಮಂಗಳವಾರ ವಿಧಾನಸಭೆಯಲ್ಲಿ ಭಾಣಷ ಮಾಡುವಾಗ ಜನಸಂಖ್ಯೆ ನಿಯಂತ್ರಣ ಕುರಿತು ಅಶ್ಲೀಲ ಹೇಳಿಕೆ ನೀಡಿದ್ದು, ಮಹಿಳಾ ಶಾಸಕರು ಮುಜುಗರ ಅನುಭವಿಸುವಂತಾಯಿತು. ಈ ಕುರಿತು ನಿತೀಶ್​ ಕುಮಾರ್ ಕ್ಷಮೆಯಾಚಿಸಿದ್ದಾರೆ.

ವಿದ್ಯಾವಂತ ಮಹಿಳೆ ಲೈಂಗಿಕ ಸಂಭೋಗದ ಸಮಯದಲ್ಲಿ ತನ್ನ ಪತಿಯನ್ನು ಹೇಗೆ ತಡೆಯಬಹುದು ಎಂಬ ವಿವರಣೆ ನೀಡಿದ್ದರು.  ಮಹಿಳೆಯರ ಬಗ್ಗೆ ನಿತೀಶ್ ಕುಮಾರ್ ಹೇಳಿಕೆಗೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ಆಕ್ರೋಶ ವ್ಯಕ್ತಪಡಿಸಿದೆ. ನಿತೀಶ್ ಕುಮಾರ್ ಕೂಡಲೇ ಕ್ಷಮೆಯಾಚಿಸಬೇಕು ಎಂದು ಎನ್‌ಸಿಡಬ್ಲ್ಯೂ ಮುಖ್ಯಸ್ಥೆ ರೇಖಾ ಶರ್ಮಾ ಒತ್ತಾಯಿಸಿದ್ದಾರೆ.

ವಿಧಾನಸಭೆಯಲ್ಲಿ ನಿತೀಶ್​ ಕುಮಾರ್ ಆಡಿರುವ ಅಸಭ್ಯ ಮಾತುಗಳಿಂದ ಪ್ರತಿಯೊಬ್ಬ ಮಹಿಳೆಯ ಘನತೆ ಹಾಗೂ ಗೌರವಕ್ಕೆ ಧಕ್ಕೆಯುಂಟಾಗಿದೆ.
ಅವರ ಭಾಷಣದಲ್ಲಿ ಬಳಸಲಾದ ಭಾಷೆಯು ಸಮಾಜಕ್ಕೆ ಕಪ್ಪುಚುಕ್ಕೆಯಾಗಿದೆ. ನಾವು ಅಂತಹ ನಡವಳಿಕೆ ವಿರುದ್ಧ ಬಲವಾಗಿ ನಿಲ್ಲುತ್ತೇವೆ ಎಂದು ರೇಖಾ ತಿಳಿಸಿದ್ದಾರೆ.

ನಿತೀಶ್ ಕುಮಾರ್ ಅವರು ತಮ್ಮ ಸರ್ಕಾರ ನಡೆಸಿದ ಇತ್ತೀಚಿನ ಜಾತಿ ಗಣತಿಯ ಡೇಟಾವನ್ನು ಪ್ರಸ್ತುತಪಡಿಸುತ್ತಿದ್ದರು. ಸೋಷಿಯಲ್ ಮೀಡಿಯಾ ಬಳಕೆದಾರರು ಸಿಎಂ ನಿತೀಶ್ ಕುಮಾರ್ ಮಹಿಳೆಯರ ಬಗ್ಗೆ ಮಾಡಿದ ಕಮೆಂಟ್​ಗಳನ್ನು ತಪ್ಪು ಎಂದು ಬಿಜೆಪಿ ಹೇಳಿದೆ.

ಬಿಹಾರ ಮುಖ್ಯಮಂತ್ರಿಯನ್ನು ಟೀಕಿಸಿರುವ ಬಿಜೆಪಿಯ ಬಿಹಾರ ಘಟಕವು ನಿತೀಶ್ ಕುಮಾರ್ ಅವರನ್ನು ಭಾರತದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಅಸಭ್ಯ ರಾಜಕಾರಣಿ ಎಂದು ಕರೆದಿದೆ.

ಮತ್ತಷ್ಟು ಓದಿ: ನಿತೀಶ್ ಕುಮಾರ್ ಬೆಂಗಾವಲು ಪಡೆಗಾಗಿ ಸಂಚಾರ ನಿರ್ಬಂಧ; ಮಗು ಜೀವನ್ಮರಣ ಹೋರಾಟದಲ್ಲಿದೆ ಎಂದರೂ ಆ್ಯಂಬುಲೆನ್ಸ್​​ನ್ನು ಬಿಡಲಿಲ್ಲ

ಮುಖ್ಯಮಂತ್ರಿ ಇನ್ನು ಮುಂದೆ ಸುಸಂಸ್ಕೃತ ಸಮಾಜವನ್ನು ಪ್ರತಿನಿಧಿಸಲು ಯೋಗ್ಯರಲ್ಲ ಎಂದು ಹೇಳಿದರು. ನಿತೀಶ್ ಕುಮಾರ್ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರ ಎಂದು ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

ಸಿಎಂ ಹೇಳಿಕೆ ಲೈಂಗಿಕ ಶಿಕ್ಷಣಕ್ಕೆ ಸಂಬಂಧಿಸಿದ್ದು. ಲೈಂಗಿಕ ಶಿಕ್ಷಣದ ವಿಷಯ ಚರ್ಚೆಯಾದಾಗಲೆಲ್ಲಾ ಜನರು ಹಿಂಜರಿಯುತ್ತಾರೆ. ಇದನ್ನು ಈಗ ಶಾಲೆಗಳಲ್ಲಿ ಕಲಿಸಲಾಗುತ್ತದೆ. ಶಾಲೆಗಳಲ್ಲಿ ವಿಜ್ಞಾನ ಮತ್ತು ಜೀವಶಾಸ್ತ್ರವನ್ನು ಕಲಿಸಲಾಗುತ್ತದೆ. ಮಕ್ಕಳು ಅದನ್ನು ಕಲಿಯುತ್ತಾರೆ. ಜನಸಂಖ್ಯೆಯ ಹೆಚ್ಚಳವನ್ನು ತಡೆಯಲು ಪ್ರಾಯೋಗಿಕವಾಗಿ ಏನು ಮಾಡಬೇಕು ಎಂಬುದನ್ನು ಹೇಳಿದ್ದಾರೆ ಎಂದು ತೇಜಸ್ವಿ ಯಾದವ್ ಸಮರ್ಥಿಸಿಕೊಂಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:39 am, Wed, 8 November 23