ಬಿಹಾರ ರಾಜ್ಯಪಾಲ (Bihar Governor) ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ. ಹಾಜಿಪುರದ ಭಗವಾನ್‌ಪುರದ ರತನ್‌ಪುರ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಪಾಟ್ನಾದಿಂದ ಮುಜಾಫರ್‌ಪುರಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಅಪಘಾತದಲ್ಲಿ ಅಗ್ನಿಶಾಮಕ ವಾಹನ ಪಲ್ಟಿಯಾಗಿದೆ. ರಸ್ತೆ ಅಪಘಾತದಲ್ಲಿ ಒಟ್ಟು 9 ಮಂದಿ ಗಾಯಗೊಂಡಿದ್ದಾರೆ. ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಪಾಟ್ನಾದಿಂದ ಮುಜಾಫರ್‌ಪುರಕ್ಕೆ ತೆರಳುತ್ತಿದ್ದರು.
ಚಾಲಕನ ನಿಯಂತ್ರಣ ತಪ್ಪಿ ಅಗ್ನಿಶಾಮಕ ವಾಹನ ಡಿವೈಡರ್ಗೆ ಡಿಕ್ಕಿ ಹೊಡೆದಿದೆ, ಬಳಿಕ ರಾಂಗ್ ಸೈಡ್ ನಲ್ಲಿ ಹೋಗಿ ಪ್ರಯಾಣಿಕರು ತುಂಬಿದ್ದ ಆಟೋಗೆ ಡಿಕ್ಕಿ ಹೊಡೆದಿದೆ. ಬಳಿಕ ರಾಜ್ಯಪಾಲರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಗ್ನಿಶಾಮಕ ವಾಹನ, ಆಟೋ ಚಾಲಕ ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ. ಸವಾರರ ಸ್ಥಿತಿ ಗಂಭೀರವಾಗಿದೆ.
ಘಟನೆಯ ನಂತರ ಸುತ್ತಮುತ್ತ ಜನರ ಗುಂಪು ನೆರೆದಿತ್ತು. ಸ್ಥಳೀಯರು ರಕ್ಷಣಾ ಕಾರ್ಯ ಆರಂಭಿಸಿ, ಗಾಯಾಳುಗಳನ್ನು ತರಾತುರಿಯಲ್ಲಿ ಹಾಜಿಪುರ ಸದರ್ ಆಸ್ಪತ್ರೆಗೆ ದಾಖಲಿಸಲಾಯಿತು. ಎಲ್ಲರಿಗೂ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ನಂತರ ಅಗ್ನಿಶಾಮಕ ವಾಹನ ಪಲ್ಟಿಯಾಗಿದೆ. ಡಿಕ್ಕಿಯ ರಭಸಕ್ಕೆ ಆಟೋದ ಗಾಜು ಪುಡಿಪುಡಿಯಾಗಿದೆ.
ಮತ್ತಷ್ಟು ಓದಿ: Telangana: ಟೈರ್ ಸ್ಫೋಟ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು ಬಿಜೆಪಿ ನಾಯಕಿ ನೀರಜಾ ರೆಡ್ಡಿ ನಿಧನ
ರಾಜ್ಯಪಾಲರು ಅಥವಾ ಇತರ ಯಾವುದೇ ಭದ್ರತಾ ಸಿಬ್ಬಂದಿಗೆ ಏನೂ ಆಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಕೆಲ ಗಾಯಾಳುಗಳ ಮಾಹಿತಿ ಲಭ್ಯವಾಗಿದೆ, ಇವರಲ್ಲಿ ರಾಜೇಶ್ವರ್ ದಾಸ್, ಸಂಜಯ್ ಸಾಹ್ನಿ, ಲಾಲ್ ಸಾಹ್ನಿ, ವಂದನಾ ಕುಮಾರಿ, ಸಂತೋಷ್ ಕುಮಾರ್, ಸತ್ನಾರಾಯಣ ಪಾಸ್ವಾನ್ ಮುಂತಾದವರು ಸೇರಿದ್ದಾರೆ. ಅಗ್ನಿಶಾಮಕ ವಾಹನದಲ್ಲಿ ಒಟ್ಟು ಮೂವರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ