ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ ಕನಿಷ್ಠ 22 ಮಂದಿ ಸಾವನ್ನಪ್ಪಿರುವ ಕುರಿತು ಮಾಹಿತಿ ಲಭ್ಯವಾಗಿದೆ. ರಾಜ್ಯದ ಮೋತಿಹಾರಿ ಜಿಲ್ಲೆಯ ಲಕ್ಷ್ಮೀಪುರ ಗ್ರಾಮದಲ್ಲಿ ಸಾವುಗಳು ಸಂಭವಿಸಿವೆ, ಇನ್ನೂ ಅನೇಕ ಮಂದಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏಪ್ರಿಲ್ 2016ರಲ್ಲಿ ಮುಖ್ಯಮಮತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಮದ್ಯ ಮಾರಾಟ ಹಾಗೂ ಸೇವನೆಯ ಮೇಲೆ ಸಂಪೂರ್ಣ ನಿಷೇಧ ಹೇರಿತ್ತು.
ಇದು ಗಮನಾರ್ಹ ಸಂಖ್ಯೆಯ ಮಹಿಳಾ ಮತದಾರರನ್ನು ಗೆದ್ದುಕೊಂಡಿತ್ತು. ನಿಷೇಧದ ಹೊರತಾಗಿಯೂ ರಾಜ್ಯದಲ್ಲಿ ಕಾಳಸಂತೆಯಲ್ಲಿ ಮದ್ಯ ಮಾರಾಟ ನಡೆಯುತ್ತಿದ್ದು, ಸ್ಥಳೀಯವಾಗಿ ತಯಾರಿಸಿದ ಮದ್ಯ ಸೇವಿಸಿ ಸಾವುಗಳು ಸಂಭವಿಸುತ್ತಲೇ ಇವೆ. ಬಿಹಾರದಲ್ಲಿ ಮತ್ತೊಮ್ಮೆ ವಿಷಪೂರಿತ ಮದ್ಯ ಪ್ರಕರಣ ಬಿಹಾರದಲ್ಲಿ ಮುನ್ನೆಲೆಗೆ ಬಂದಿದೆ. ಮೋತಿಹಾರಿ ಜಿಲ್ಲೆಯಲ್ಲಿ ನಕಲಿ ಮದ್ಯದ ಹಾವಳಿ ಮತ್ತೊಮ್ಮೆ ಕಂಡು ಬಂದಿದೆ. ವಾಸ್ತವವಾಗಿ, ಪೂರ್ವ ಚಂಪಾರಣ್‌ನಲ್ಲಿ 22 ಮಂದಿ ಅನುಮಾನಾಸ್ಪದ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಸುದ್ದಿ ಇದೆ. ಇದೇ ವೇಳೆ 10ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.
ಮತ್ತಷ್ಟು ಓದಿ: ಬೆಂಗಳೂರು: ಮದ್ಯ ಖರೀದಿ ಹಾಗೂ ಸೇವನೆ ವಯಸ್ಸಿನ ಮಿತಿಯನ್ನು 21 ರಿಂದ 18ಕ್ಕೆ ಇಳಿಸಲು ಚಿಂತನೆ
ವಿಷಪೂರಿತ ಮದ್ಯ ಸೇವಿಸಿ ಎಲ್ಲರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಬೆಟ್ಟಯ್ಯ ಡಿಐಜಿ ಜಯಂತ್ಕಾಂತ್ ಅವರು 6 ಜನರ ಸಾವನ್ನು ಖಚಿತಪಡಿಸಿದ್ದಾರೆ. ಆದರೆ, ಸ್ಥಳೀಯ ಜನರ ಪ್ರಕಾರ, ಮೋತಿಹಾರಿಯ ತುರ್ಕೌಲಿಯಾ, ಹರ್ಸಿದ್ಧಿ ಮತ್ತು ಪಹರ್‌ಪುರ ಮತ್ತು ಮೋತಿಹಾರಿಯ ಇತರ ಪ್ರದೇಶಗಳಲ್ಲಿ ಇದುವರೆಗೆ 22 ಜನರು ಅನುಮಾನಾಸ್ಪದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ.
ಬಂದಿರುವ ಮಾಹಿತಿ ಪ್ರಕಾರ ಮದ್ಯ ಸೇವಿಸಿದ ನಂತರ ಜನರು ದೌರ್ಬಲ್ಯ ಮತ್ತು ದೃಷ್ಟಿಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. 5 ಜನರನ್ನು ಮೋತಿಹಾರಿ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ