Modi In Bihar: ಆರ್​ಜೆಡಿಯಂತಹ ಪಕ್ಷ ಅಧಿಕಾರದಲ್ಲಿರುವಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ: ಮೋದಿ

ಆರ್​ಜೆಡಿಯಂತಹ ಪಕ್ಷ ಅಧಿಕಾರದಲ್ಲಿರುವಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆ ನವೆಂಬರ್​ನಲ್ಲಿ ನಡೆಯಲಿದ್ದು, ಇಂದು ಮೋದಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಆರ್​ಜೆಡಿ ಆಳ್ವಿಕೆಯಲ್ಲಿ ಸುಲಿಗೆ, ಕೊಲೆ, ಅಪಹರಣಗಳಂತಹ ಪ್ರಕರಣಗಳೇ ಹೆಚ್ಚು ನಡೆದಿವೆ. ಆರ್‌ಜೆಡಿಯ ಜಂಗಲ್ ರಾಜ್ ಬಿಹಾರದ ತಲೆಮಾರುಗಳನ್ನು ಹಾಳುಮಾಡಿತು.

Modi In Bihar: ಆರ್​ಜೆಡಿಯಂತಹ ಪಕ್ಷ ಅಧಿಕಾರದಲ್ಲಿರುವಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ: ಮೋದಿ
ನರೇಂದ್ರ ಮೋದಿ

Updated on: Oct 24, 2025 | 2:43 PM

ಸಮಷ್ಟಿಪುರ, ಅಕ್ಟೋಬರ್ 24: ಆರ್​ಜೆಡಿಯಂತಹ ಪಕ್ಷ ಅಧಿಕಾರದಲ್ಲಿರುವಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆ ನವೆಂಬರ್​ನಲ್ಲಿ ನಡೆಯಲಿದ್ದು, ಇಂದು ಮೋದಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಆರ್​ಜೆಡಿ ಆಳ್ವಿಕೆಯಲ್ಲಿ ಸುಲಿಗೆ, ಕೊಲೆ, ಅಪಹರಣಗಳಂತಹ ಪ್ರಕರಣಗಳೇ ಹೆಚ್ಚು ನಡೆದಿವೆ. ಆರ್‌ಜೆಡಿಯ ಜಂಗಲ್ ರಾಜ್ ಬಿಹಾರದ ತಲೆಮಾರುಗಳನ್ನು ಹಾಳುಮಾಡಿತು.

ಆರ್‌ಜೆಡಿಯ ದುರಾಡಳಿತದ ಅತಿದೊಡ್ಡ ಬಲಿಪಶುಗಳು ನನ್ನ ತಾಯಂದಿರು ಮತ್ತು ಸಹೋದರಿಯರು, ಯುವಕರು, ಬಿಹಾರದ ದಲಿತರು ಮತ್ತು ಹಿಂದುಳಿದ ವರ್ಗಗಳು ಮತ್ತು ಬಿಹಾರದ ಅತ್ಯಂತ ಹಿಂದುಳಿದ ವರ್ಗಗಳು.

ಆರ್‌ಜೆಡಿಯ ಜಂಗಲ್ ರಾಜ್ ಸಮಯದಲ್ಲಿ ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಯೂ ಕೂಡ ಹೆಚ್ಚಾಗಿತ್ತು. ಬಿಹಾರ ಮತ್ತು ದೇಶದ ಯುವಕರನ್ನು ಈ ಮಾವೋವಾದಿ ಭಯೋತ್ಪಾದನೆಯಿಂದ ಮುಕ್ತಗೊಳಿಸಲು ನಾನು ಸಂಕಲ್ಪ ಮಾಡಿದ್ದೇನೆ. ನಾವು ಬಿಹಾರದಲ್ಲಿ ನಕ್ಸಲಿಸಂ, ಮಾವೋವಾದಿ ಭಯೋತ್ಪಾದನೆಯ ಹೆಡೆಮುರಿ ಮುರಿದಿದ್ದೇವೆ. ಶೀಘ್ರದಲ್ಲೇ, ಇಡೀ ದೇಶ, ಇಡೀ ಬಿಹಾರ, ಮಾವೋವಾದಿ ಭಯೋತ್ಪಾದನೆಯಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ ಮತ್ತು ಇದು ಮೋದಿಯ ಭರವಸೆ ಎಂದರು.

ಪ್ರಧಾನಿ ಮೋದಿ ಮಾತು

ಮುಂದಿನ ತಿಂಗಳು ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಎಲ್ಲಾ ದಾಖಲೆಗಳನ್ನು ಮುರಿದು ಗೆಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಒಂದೆಡೆ ಇಂಡಿ ಬಣವು ತೇಜಸ್ವಿ ಯಾದವ್ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. ಜತೆಗೆ ಎನ್​ಡಿಎಗೆ ತಮ್ಮ ಅಭ್ಯರ್ಥಿಯನ್ನು ಘೋಷಿಸುವಂತೆ ಸವಾಲೆಸೆದಿವೆ. ಬಿಹಾರದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಿತೀಶ್ ಆ ಸ್ಥಾನದಲ್ಲಿ ಮುಂದುವರಿಯಬೇಕೆಂದು ಜೆಡಿಯು ಪದೇ ಪದೇ ಹೇಳಿದೆ.

ಮತ್ತಷ್ಟು ಓದಿ: ಘಟಬಂಧನ ಅಲ್ಲ, ಲಠಬಂಧನ; ಬಿಹಾರದಲ್ಲಿ ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಗೆ ಪ್ರಧಾನಿ ಮೋದಿ ಲೇವಡಿ

ನಿತೀಶ್ ಕುಮಾರ್ ಅವರ ಭವಿಷ್ಯದ ಬಗ್ಗೆ ಚರ್ಚೆ ಆರಂಭವಾಗುತ್ತಿದ್ದಂತೆಯೇ, ಪಕ್ಷವು ಪಾಟ್ನಾದಾದ್ಯಂತ ದೊಡ್ಡ ಪೋಸ್ಟರ್‌ಗಳನ್ನು ಅಂಟಿಸಿ, ನಿತೀಶ್ ಕುಮಾರ್ 2030 ರವರೆಗೆ ಅಂದರೆ ಅವರಿಗೆ 79 ವರ್ಷ ವಯಸ್ಸಾಗುವವರೆಗೆ ಅಧಿಕಾರದಲ್ಲಿ ಮುಂದುವರಿಯುತ್ತಾರೆ ಎಂದು ಹೇಳಿದ್ದರು.ಬಿಹಾರದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತ ನವೆಂಬರ್ 6 ರಂದು ಮತ್ತು ಎರಡನೇ ಹಂತ ನವೆಂಬರ್ 11 ರಂದು ನಡೆಯಲಿದೆ.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಬಿಹಾರ ಪಡೆದಿದ್ದಕ್ಕಿಂತ ಮೂರು ಪಟ್ಟು ಹೆಚ್ಚು ಹಣವನ್ನು ಬಿಜೆಪಿ ಮತ್ತು ಎನ್‌ಡಿಎ ಸರ್ಕಾರಗಳು ಬಿಹಾರದ ಅಭಿವೃದ್ಧಿಗೆ ಒದಗಿಸಿವೆ ಎಂದು ಪ್ರಧಾನಿ ಮೋದಿ ಹೇಳಿದರು. ಮೂರು ಪಟ್ಟು ಹೆಚ್ಚು ಹಣ ಬಂದಾಗ ಅಭಿವೃದ್ಧಿಯೂ ಮೂರು ಪಟ್ಟು ಹೆಚ್ಚಾಗುತ್ತದೆ.

ಸಮಷ್ಟಿಪುರದಿಂದ ಪೂರ್ಣಿಯಾವರೆಗೆ ಆರು ಪಥದ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿದೆ. ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ, ವಂದೇ ಭಾರತ್‌ನಂತಹ ರೈಲುಗಳು ಓಡುತ್ತಿವೆ ಮತ್ತು ಬಿಹಾರದಲ್ಲಿ ಹೊಸ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ