ದೆಹಲಿ ಡಿಸೆಂಬರ್ 12: ಪ್ರಮುಖ ಮೂವರು ಚುನಾವಣಾ ಅಧಿಕಾರಿಗಳ ನೇಮಕ ಕುರಿತ ವಿವಾದಾತ್ಮಕ ಮಸೂದೆಯನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ (AAP) ರಾಘವ್ ಚಡ್ಡಾ (Raghav Chandha) ಅವರು ಇಂದು ರಾಜ್ಯಸಭೆಯಲ್ಲಿ (Rajya sabha) ತೀವ್ರ ಪ್ರತಿಭಟನೆ ನಡೆಸಿದರು. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ, 2023 ರ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಚಡ್ಡಾ, ಮಸೂದೆಯಲ್ಲಿ ಮಾಡಲಾದ ಬದಲಾವಣೆಗಳು ಬಿಜೆಪಿಗೆ ಈ ನಿರ್ಣಾಯಕ ಹುದ್ದೆಯಲ್ಲಿ ಯಾರನ್ನು ಬೇಕಾದರೂ ನೇಮಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.
“ಅವರು ಭಾರತದ ಮುಖ್ಯ ನ್ಯಾಯಾಧೀಶರನ್ನು ಆಯ್ಕೆ ಸಮಿತಿಯಿಂದ ತೆಗೆದುಹಾಕಿದ್ದಾರೆ. ಅವರ ಬದಲಿಗೆ ಕ್ಯಾಬಿನೆಟ್ ಮಂತ್ರಿಯನ್ನು ನೇಮಿಸಿದ್ದಾರೆ. ಇದು ಸರ್ಕಾರಕ್ಕೆ ಎರಡು ಮತಗಳನ್ನು ನೀಡುತ್ತದೆ. ಆದ್ದರಿಂದ ಈ 2: 1 ಬಹುಮತದೊಂದಿಗೆ, ಅವರು ಯಾರನ್ನಾದರೂ ನೇಮಕ ಮಾಡಬಹುದು, ಅವರು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರನ್ನು ನೇಮಕ ಮಾಡಿದರೆ ಪರಿಸ್ಥಿತಿ ಊಹಿಸಿಕೊಳ್ಳಿ ಎಂದು ಚಡ್ಡಾ ಹೇಳಿದಾಗ ಸದನದಲ್ಲಿ ನಗುವಿನ ವಾತಾವಾರಣ.
“ಇದು ಮಸೂದೆಯಲ್ಲ, ಇದು ‘ಬಿಲ್ಡೋಜರ್’, ಇದು ಸುಪ್ರೀಂ ಕೋರ್ಟ್ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಮಾಡಿದ ಅವಮಾನ ಎಂದಿದ್ದಾರೆ ಚಡ್ಡಾ. ಸ್ವಲ್ಪ ಸಮಯದ ನಂತರ, ಮಸೂದೆಯನ್ನು ರಾಜ್ಯಸಭೆ ಅಂಗೀಕರಿಸಿತು.
If this Bill is passed, BJP can even make Sambit Patra our Chief Election Commissioner if it wants…
Chief Election Commissioner Bill पास होने के बाद BJP चाहे तो Sambit Patra को भी मुख्य चुनाव आयुक्त बना सकती है…
Do we really want such a situation? pic.twitter.com/bqOp34OHGr
— Raghav Chadha (@raghav_chadha) December 12, 2023
ಮಸೂದೆಯ ಈ ನಿಬಂಧನೆಯ ವಿರುದ್ಧ ಪ್ರತಿಪಕ್ಷಗಳು ವಾದಿಸಿದ್ದು, ಇದು ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲಾ ಸಮತೋಲನ ಮತ್ತು ಪಾರದರ್ಶಕತೆಯನ್ನು ಕೊನೆಗೊಳಿಸುತ್ತದೆ ಎಂದು ಹೇಳಿದೆ. ಈ ಬದಲಾವಣೆಯು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ವಿಪಕ್ಷ ವಾದಿಸಿದೆ.
ಇದನ್ನೂ ಓದಿ: Rajasthan New CM: ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್‌ಲಾಲ್ ಶರ್ಮಾ ಆಯ್ಕೆ
ಪ್ರಧಾನಮಂತ್ರಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ವಿರೋಧ ಪಕ್ಷದ ನಾಯಕರ ತ್ರಿಸದಸ್ಯ ಸಮಿತಿಯು ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವಂತೆ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ವಿರೋಧ ಪಕ್ಷದ ನಾಯಕರ ಅನುಪಸ್ಥಿತಿಯಲ್ಲಿ, ಏಕೈಕ ದೊಡ್ಡ ವಿರೋಧ ಪಕ್ಷದ ಪ್ರತಿನಿಧಿ ಸಮಿತಿಯಲ್ಲಿರುತ್ತಾರೆ ಎಂದು ನ್ಯಾಯಾಲಯ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ