ಕೊಲ್ಕತ್ತಾ: ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಂಕುರಾ ಜಿಲ್ಲೆಯ ಬಿಷ್ಣುಪುರ ಸ್ಥಾನವನ್ನು ಗೆದ್ದ ತನ್ಮಯ್ ಘೋಷ್ ಇದೀಗ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಗೆ ಸೇರಿದ್ದಾರೆ. ಹಾಗಾಗಿ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಬಲವು ಸೋಮವಾರ 73 ಕ್ಕೆ ಕುಸಿಯಿತು. ಘೋಷ್ ಅವರು ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಕ್ರಮಗಳನ್ನು ತಪ್ಪಿಸಲು ವಿಧಾನಸಭೆಗೆ ರಾಜೀನಾಮೆ ನೀಡುತ್ತಾರೆಯೇ ಎಂಬುದರ ಕುರಿತು ನೇರ ಉತ್ತರ ನೀಡದಿದ್ದರೂ, ಅವರನ್ನು ಪಕ್ಷಕ್ಕೆ ಸೇರಿಸಿಕೊಂಡ ಶಿಕ್ಷಣ ಸಚಿವ ಬ್ರಾತ್ಯ ಬಸು, “ಎಲ್ಲವನ್ನೂ ನಿಯಮಗಳ ಪ್ರಕಾರ ಮಾಡಲಾಗುವುದು” ಎಂದು ಹೇಳಿದರು.
ಮಮತಾ ಬ್ಯಾನರ್ಜಿ ಕೈಗೊಂಡ ಬೃಹತ್ ಅಭಿವೃದ್ಧಿ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳ ಭಾಗವಾಗಿರಲು ನಾನು ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳನ್ನು ಟಿಎಂಸಿಗೆ ಸೇರಲು ಆಹ್ವಾನಿಸುತ್ತೇನೆ. ಆಕೆಯ ಸಮರ್ಪಣೆ ಮತ್ತು ಕಾರ್ಯಕ್ಷಮತೆ ನನ್ನನ್ನು ಟಿಎಂಸಿ ಕಡೆಗೆ ಸೆಳೆಯಿತು ಎಂದು ಘೋಷ್ ಹೇಳಿದರು. ಈ ವರ್ಷದ ಆರಂಭದಲ್ಲಿ ಬಿಜೆಪಿ 77 ಸ್ಥಾನಗಳನ್ನು ಗೆದ್ದ ನಂತರ ವಿರೋಧ ಪಕ್ಷದಿಂದ ಟಿಎಂಸಿಗೆ ಬಂದ ಎರಡನೇ ಶಾಸಕರಾಗಿದ್ದಾರೆ ಘೋಷ್.
ಘೋಷ್ ಮೊದಲು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಮುಕುಲ್ ರಾಯ್ ಅವರು ಜೂನ್ 11 ರಂದು ಟಿಎಂಸಿಗೆ ಮರಳಿದರು. ಆದರೆ ಕೃಷ್ಣನಗರ ಉತ್ತರದಿಂದ ಶಾಸಕರು ಈವರೆಗೆ ಬಿಜೆಪಿಗೆ ರಾಜೀನಾಮೆ ನೀಡಿಲ್ಲ. ಅವರನ್ನು ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಪಕ್ಷಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಬಿಜೆಪಿ ಅವರನ್ನು ಅನರ್ಹಗೊಳಿಸಲು ಕೋರಿದೆ.
ಈ ಹಿಂದೆ ಇತರ ಇಬ್ಬರು ಬಿಜೆಪಿ ಶಾಸಕರು ಪ್ರಮಾಣವಚನ ಸ್ವೀಕರಿಸಲಿಲ್ಲ. ಆದರೆ ತಮ್ಮ ಲೋಕಸಭಾ ಸ್ಥಾನಗಳನ್ನು ಉಳಿಸಿಕೊಳ್ಳಲು ರಾಜೀನಾಮೆ ನೀಡಿದ್ದು 294 ಸದಸ್ಯರ ವಿಧಾನಸಭೆಯಲ್ಲಿ ಪಕ್ಷದ ಸಂಖ್ಯೆಯನ್ನು 75 ಕ್ಕೆ ಇಳಿಸಲು ಕಾರಣವಾದರು.
ಟಿಎಂಸಿ 213 ಸ್ಥಾನಗಳನ್ನು ಪಡೆದುಕೊಂಡಿದೆ. ಚುನಾವಣೆಗೆ ಮುನ್ನ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಇಬ್ಬರು ಅಭ್ಯರ್ಥಿಗಳು ಮೃತಪಟ್ಟಿದ್ದರಿಂದ 292 ಸ್ಥಾನಗಳಲ್ಲಿ ಮತದಾನ ನಡೆಯಿತು. ಎಡ ಮತ್ತು ಕಾಂಗ್ರೆಸ್ ಯಾವುದೇ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.
ಬಂಗಾಳದಲ್ಲಿ ಬಿಜೆಪಿಗೆ ತಳಮಟ್ಟದಲ್ಲಿ ಯಾವುದೇ ನೆಲೆಯಿಲ್ಲ. ಎಲ್ಲವೂ ಮೇಲ್ನೋಟಕ್ಕೆ ಕಾಣಿಸುವಂತದ್ದು ಮಾತ್ರ. ಅದು ಎಂದಿಗೂ 200 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ. ನಾಯಕರು ಜೋರಾಗಿ ಶಬ್ದ ಮಾಡುತ್ತಿದ್ದರು. ಗೆದ್ದವರು ತಮ್ಮ ಸ್ವಂತ ಶಕ್ತಿ ಮತ್ತು ವರ್ಚಸ್ಸಿನಿಂದಾಗಿ ಗೆದ್ದಿದ್ದಾರೆ ಎಂದು ಘೋಷ್ ಹೇಳಿದರು.
ಘೋಷ್ ಅವರ ಅನುಪಸ್ಥಿತಿಯಿಂದ ಬಿಜೆಪಿಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ ಮತ್ತು ಪಕ್ಷವು ಪಕ್ಷಾಂತರದ ವಿರುದ್ಧ ಕಾನೂನಿನ ಅಡಿಯಲ್ಲಿ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಬಂಗಾಳ ಬಿಜೆಪಿಯ ಮುಖ್ಯ ವಕ್ತಾರ ಸಮೀಕ್ ಭಟ್ಟಾಚಾರ್ಯ ಹೇಳಿದರು.
ಇದನ್ನೂ ಓದಿ: Tomato Rate: ಬಹುತೇಕ ರಾಜ್ಯಗಳಲ್ಲಿ ಟೊಮೆಟೊ ಬೆಲೆ ಅಪ್ಪಚ್ಚಿ; ಕೇಜಿಗೆ 4 ರೂಪಾಯಿಯಂತೆ ಪಾತಾಳ ತಲುಪಿದ ದರ
ಇದನ್ನೂ ಓದಿ: ಹಳ್ಳಿಗಳನ್ನು ನಿರ್ಲಕ್ಷಿಸಿದ್ದು ದೊಡ್ಡ ತಪ್ಪಾಯ್ತು: ತಾಲಿಬಾನ್ಗೆ ಶಕ್ತಿ ತುಂಬಿದ್ದು ಅಫ್ಘಾನ್ ಸರ್ಕಾರದ ತಪ್ಪು ಕೃಷಿ ನೀತಿಗಳು
(Bishnupur BJP MLA Tanmay Ghosh joins Trinamool Congress)